ETV Bharat / state

2 ನೇ ಹಂತದ ಚುನಾವಣೆ; ಮಸ್ಟರಿಂಗ್ ಕಾರ್ಯ ಪರಿಶೀಲಿಸಿದ ಕೊಡಗು ಜಿಲ್ಲಾಧಿಕಾರಿ

author img

By

Published : Dec 26, 2020, 4:46 PM IST

ಎರಡನೇ ಹಂತದ ಪಂಚಾಯಿತಿ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಾಲೂಕಿನ ಒಟ್ಟು 38 ಗ್ರಾಮ ಪಂಚಾಯಿತಿಗಳಲ್ಲಿ 35 ಪಂಚಾಯಿತಿಗಳಿಗೆ ಚುನಾವಣೆ ‌ನಡೆಯಲಿದೆ.

DC Anis kanmani joy
ಅನೀಸ್ ಕಣ್ಮಣಿ

ವಿರಾಜಪೇಟೆ‌‌ (ಕೊಡಗು): ನಾಳೆ 2 ನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಸೇಂಟ್ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಮಸ್ಟರಿಂಗ್ ಕಾರ್ಯವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಮಸ್ಟರಿಂಗ್ ಕಾರ್ಯ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ

ಎರಡನೇ ಹಂತದ ಪಂಚಾಯಿತಿ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಾಲೂಕಿನ ಒಟ್ಟು 38 ಗ್ರಾಮ ಪಂಚಾಯಿತಿಗಳಲ್ಲಿ 35 ಪಂಚಾಯಿತಿಗಳಿಗೆ ಚುನಾವಣೆ ‌ನಡೆಯಲಿದೆ. ಒಟ್ಟು 183 ಮತಗಟ್ಟೆಗಳಲ್ಲಿ ನಾಳೆ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. 136 ಕ್ಷೇತ್ರಗಳಲ್ಲಿ ಚುನಾವಣೆ ‌ನಡೆಯಲಿದ್ದು, 366 ಸ್ಥಾನಗಳಿಗೆ 924 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 54 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ.

ಇದನ್ನೂ ಓದಿ: ಹಳೆ ಮನೆಗಳ ನೆಲಸಮ ವಿಚಾರ: ಮಾರ್ಚ್ ಅಂತ್ಯದವರೆಗೆ ‌ಕಾಲಾವಕಾಶ ಕೇಳಿದ ಫಲಾನುಭವಿಗಳು

ಕೊರೊನಾ ಶಂಕಿತರು ಮತಗಟ್ಟೆಗಟ್ಟೆಗಳಿಗೆ ಬಂದು ಖುದ್ದು ಮತದಾನ ಮಾಡಲು ಬಯಸಿದ್ದಲ್ಲಿ ಅಂತಹವರಿಗೆ ಮತದಾನಕ್ಕೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.