ETV Bharat / state

ಕೊಡಗಿನಲ್ಲಿ ಏರಿಕೆಯತ್ತ ಸಾಗಿದ ಕೊರೊನಾ.. ಇಂದು ಹೊಸದಾಗಿ 132 ಪ್ರಕರಣ ದಾಖಲು..

author img

By

Published : Jan 16, 2022, 7:27 PM IST

ಕೋವಿಡ್ ಸೋಂಕಿತರು ಹೆಚ್ಚಾದಲ್ಲಿ ಎಲ್ಲಾ ರೀತಿಯ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನತೆ ಕೋವಿಡ್ ನಿಯಮ ಪಾಲನೆ ಮಾಡದಿರೋದು ವೈರಸ್​ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲೆಯ ಜನತೆ ಯಾವುದಕ್ಕೆ ಭಯ ಪಡುವ ಅಗತ್ಯ ಇಲ್ಲ ಎಂದು ಮಡಿಕೇರಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮಾಹಿತಿ ನೀಡಿದ್ದಾರೆ..

tourist
ಪ್ರವಾಸಿಗರು

ಕೊಡಗು : ಜಿಲ್ಲೆಗೆ ಹೆಚ್ಚಾಗಿ ಪ್ರವಾಸಿಗರು ಆಗಮಿಸುತ್ತಿರುವ ಪರಿಣಾಮ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ 132 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಾಗಿ, ಜನ ಆತಂಕದಲ್ಲಿ‌ ಜೀವನ ಕಳೆಯುವಂತಾಗಿದೆ.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಅವರು ಕೊರೊನಾ ಕುರಿತಂತೆ ಮಾಹಿತಿ ನೀಡಿರುವುದು..

ಇಷ್ಟು ದಿನ ಶಾಲಾ- ಕಾಲೇಜುಗಳಲ್ಲಿ ಹರಡುತ್ತಿದ್ದ ಕೊರೊನಾ, ಇದೀಗ ಈ ಪ್ರವಾಸಿಗರು ಬಂದು ಉಳಿಯುವ ರೆಸಾರ್ಟ್​ನಲ್ಲಿ ಹೆಚ್ಚಾಗುತ್ತಿದೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಮೇಕೆರಿಯ ಕೂರ್ಗ್ ವೈಲ್ಡರ್ಸ್ ರೆಸಾರ್ಟ್​ನಲ್ಲಿ ಒಟ್ಟು 38 ಪಾಸಿಟಿವ್​ ಪ್ರಕರಣ ಪತ್ತೆಯಾಗಿವೆ. ನಿನ್ನೆ 31, ಇಂದು 7 ಪಾಸಿಟಿವ್​ ಕೇಸ್ ದೃಢವಾಗಿವೆ. ರೆಸಾರ್ಟ್​ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ಮಾಡಿ 7 ದಿನ ಸೀಲ್​ಡೌನ್ ಮಾಡಿದ್ದಾರೆ.

ರಾಜ್ಯ-ಹೊರ ರಾಜ್ಯಗಳಿಂದ ಜಿಲ್ಲೆಗೆ ಭೇಟಿ ನೀಡಿ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇದರಿಂದ ಹೊರಗಿಂದ ಬರುವ ಪ್ರವಾಸಿಗರು ಕೊರೊನಾವನ್ನು ತಂದು ಹೋಂ ಸ್ಟೇ ಮತ್ತು ರೆಸಾರ್ಟ್​ಗಳಿಗೆ ಹಂಚುತ್ತಿದ್ದಾರೆ. ರೆಸಾರ್ಟ್​ನಲ್ಲಿ‌ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೊರೊನಾ ಹೆಚ್ಚುತ್ತಿದ್ದು, ಜನರು ಭಯದಲ್ಲಿ ಬದುಕುವಂತಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಾದಲ್ಲಿ ಎಲ್ಲಾ ರೀತಿಯ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನತೆ ಕೋವಿಡ್ ನಿಯಮ ಪಾಲನೆ ಮಾಡದಿರೋದು ವೈರಸ್​ ಹೆಚ್ಚಾಗಲು ಕಾರಣವಾಗಿದೆ.

ಜಿಲ್ಲೆಯ ಜನತೆ ಯಾವುದಕ್ಕೆ ಭಯ ಪಡುವ ಅಗತ್ಯ ಇಲ್ಲ ಎಂದು ಮಡಿಕೇರಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಅಲ್ಲದೇ, ಹೊರ ಜಿಲ್ಲೆಗಳಿಂದ ಕೊಡಗಿಗೆ ಬರುವ ಪ್ರವಾಸಿಗರಿಗೂ ಪ್ರವಾಸಿ ಸ್ಥಳಗಳಲ್ಲಿ ಆರೋಗ್ಯ ತಪಾಸಣೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಗಡಿಭಾಗದಲ್ಲಿ ಹೆಚ್ಚಿನ ನಿಗಾವಹಿಸಿದ್ದ ಕುಟ್ಟ ಮಾಕೂಟ್ಟ ಕರಿಕೆ ಭಾಗದಲ್ಲಿ ದಿನದ 24 ಗಂಟೆಯೂ ಕೋವಿಡ್ ವರದಿ ತಪಾಸಣೆ ಮಾಡಲಾಗುತ್ತಿದೆ.

ಓದಿ: ಸಂಕ್ರಾಂತಿ ಕಿಚ್ಚು ಹಾಯಿಸುವ ವೇಳೆ ಬೆಂಕಿಗೆ ಬಿದ್ದ ಯುವಕ.. ಮಂಡ್ಯದಲ್ಲಿ ಅವಘಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.