ETV Bharat / state

ಚಿಪ್ಸ್ ಅಂಗಡಿಗೆ ನುಗ್ಗಿ ಪುರಸಭಾ ಸದಸ್ಯನಿಂದ ಹಲ್ಲೆ ಆರೋಪ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

author img

By

Published : Nov 23, 2022, 5:23 PM IST

ವಿರಾಜಪೇಟೆ ಪುರಸಭೆ ಸದಸ್ಯ ಪೃಥ್ವಿನಾಥ್ ಮತ್ತು ಅವರ ನೌಕರ ಕುಮಾರ್ ಎಂಬುವವನು ಬೇಕರಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಲ್ಲೆ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದು, ಆ ಆಧಾರದ ಮೇಲೆ ಕೇಸ್ ಕೂಡಾ​ ದಾಖಲಾಗಿದೆ.

assaulted-by-municipality-member-in-madikeri
ಚಿಪ್ಸ್ ಅಂಗಡಿ ನುಗ್ಗಿ ಪುರ ಸಭಾ ಸದಸ್ಯನಿಂದ ಹಲ್ಲೆ

ಕೊಡಗು : ಚಿಪ್ಸ್ ರೇಟ್ ಕಡಿಮೆ‌ ಮಾಡಿಲ್ಲ‌ ಎಂದು ಬೇಕರಿ ಮಾಲಿಕನಿಗೆ ಅವಾಚ್ಯ ಶಬ್ಧಗಳಿಂದ‌ ನಿಂದನೆ ಮಾಡಿ ಹಲ್ಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿರುವ ಚಿಪ್ಸ್ ಅಂಗಡಿ ಹಾಗೂ ಬೇಕರಿಗೆ ನುಗ್ಗಿ ಪುರ ಸಭಾ ಸದಸ್ಯ ಹಲ್ಲೆ ಮಾಡಿದ್ದು ವಿರಾಜಪೇಟೆ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿರಾಜಪೇಟೆ ಪುರಸಭೆ ಸದಸ್ಯ ಪೃಥ್ವಿನಾಥ್ ಮತ್ತು ಅವರ ನೌಕರ ಕುಮಾರ್ ಎಂಬುವವನು ಬೇಕರಿಗೆ ನುಗ್ಗಿ ಗೂಂಡಾಗಿರಿ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೇಕರಿ ಒಳಗೆ ಗಲಾಟೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಯಾಮರಾದ ವಿಡಿಯೋ ಆಧರಿಸಿ ಬೇಕರಿ ಮಾಲೀಕ ಕಾರ್ತಿಕ್ ಪೊಲೀಸರಿಗೆ ದೂರು ನೀಡಿದ್ದಾರೆ.

ಚಿಪ್ಸ್ ಅಂಗಡಿ ನುಗ್ಗಿ ಪುರ ಸಭಾ ಸದಸ್ಯನಿಂದ ಹಲ್ಲೆ

ವಿರಾಜಪೇಟೆಯಲ್ಲಿ ಬೇಕರಿ ಮಾಲೀಕ ಒಂದು ವರ್ಷದಿಂದ ವ್ಯಾಪಾರ ಮಾಡುತ್ತಿದ್ದಾರೆ. ಎಂದಿನಂತೆ ಬೇಕರಿಗೆ ಬಂದ ಸದಸ್ಯ ಲೈಸೆನ್ಸ್ ತೋರಿಸುವಂತೆ ಹೇಳಿದ್ದಾರೆ. ತೋರಿಸುವ ಮೊದಲೇ ಸದಸ್ಯ ಏಕಾ ಏಕಿ ಹಲ್ಲೆ ಮಾಡಿದ್ದಾರೆ. ಲೈ ಲೈಸೆನ್ಸ್ ಇದ್ದರೂ ಕೂಡ ಪರವಾನಗಿ ಪಡೆದಿಲ್ಲ ಎಂದು ಹಲ್ಲೆ ಮಾಡಿದ್ದಾರೆ ಎಂದು ಕಾರ್ತಿಕ್​ ಆರೋಪ ಮಾಡಿದ್ದಾರೆ.‌

ಅಲ್ಲದೇ ಜನಪ್ರತಿನಿಧಿ ಮಾಡಿರುವ ಹಲ್ಲೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಬೇಕರಿ ತಿಂಡಿ ತಿನಿಸುಗಳ‌ ಗುಣ ಮಟ್ಟ ಚೆಕ್ ಮಾಡಲು ಆಹಾರ ಇಲಾಖೆ ಅಧಿಕಾರಿಗಳು ಇದ್ದಾರೆ. ಲೈಸೆನ್ಸ್ ಚೆಕ್ ಮಾಡಲು ರೂಲ್ಸ್ ಇರುತ್ತದೆ. ಆದರೆ, ಲೈಸೆನ್ಸ್ ತೋರಿಸುವ ಅಂತ ಕೇಳುವ ಅಧಿಕಾರ ಇದ್ದರೂ, ಕೂಡ ಹಲ್ಲೆ ಮಾಡುವ ಅಧಿಕಾರ ಇವರಿಗಿಲ್ಲ ಸುಮ್ಮನೆ ಹಲ್ಲೆ ಮಾಡಬಾರದು ಎಂದು ಸ್ಥಳೀಯರು ಜನ ಪ್ರತಿನಿಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲ್ಲೆಯನ್ನು ಖಂಡಿಸಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ಎದರು ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿರಾಜಪೇಟೆ ಮುಖ್ಯಕಾರ್ಯನಿರ್ವಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪದೇ ಪದೇ ಆಹಾರ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.