ETV Bharat / state

ಕಲಬುರಗಿಯಲ್ಲಿ 1011, ದೇವನಹಳ್ಳಿಯಲ್ಲಿ 562 ಮಂದಿಯಿಂದ ಮನೆಯಿಂದಲೇ ಮತದಾನ

author img

By

Published : Apr 30, 2023, 12:36 PM IST

80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಜೀವಿಗಳು ಮತ್ತು ವಿಶೇಷಚೇತನರಿಗೆ ವಿಶೇಷ ಸೌಲಭ್ಯದ ಮೂಲಕ ಮತದಾನ ನಡೆಸಲಾಗಿದೆ.

VOTING FORM HOME
ಮನೆಯಿಂದ ಮತದಾನ

ಕಲಬುರಗಿ: ಶನಿವಾರ ಜಿಲ್ಲೆಯಾದ್ಯಂತ 80 ವರ್ಷ ಮೇಲ್ಪಟ್ಟ 835 ಮತ್ತು 176 ವಿಶೇಷಚೇತನರು ಸೇರಿ ಒಟ್ಟು 1011 ಮತದಾರರು ಮನೆಯಿಂದಲೇ ಅಂಚೆ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಮತದಾನ‌ ಪ್ರಮಾಣ‌ ಹೆಚ್ಚಿಸಬೇಕು ಮತ್ತು ಪ್ರಜಾಪ್ರಭುತ್ವ ಹಬ್ಬದಲ್ಲಿ ಸರ್ವರು ಭಾಗಿಯಾಗಬೇಕು ಎಂಬ ಪರಿಕಲ್ಪನೆಯಿಂದ ಚುನಾವಣಾ ಆಯೋಗವು ಈ ಬಾರಿ 80 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನ ಮತದಾರರಿಗೆ ಮತದಾನನದ ಅವಕಾಶ ನೀಡಿದೆ. ಇವರು ಇಚ್ಚಿಸಿದಲ್ಲಿ ಮನೆಯಿಂದ ಅಂಚೆ‌ ಮತ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂದಿನಿಂದ ಅಂಚೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ ವೃದ್ಧರು ಮತ್ತು ವಿಶೇಷಚೇತನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

VOTING FORM HOME
ಮನೆಯಿಂದ ಮತದಾನ

ಕ್ಷೇತ್ರವಾರು ಮತದಾನದ ವಿವರ: ಆಳಂದದಲ್ಲಿ 80 ವರ್ಷ ಮೇಲ್ಪಟ್ಟ 17 ಮತ್ತು 11 ಜನ ವಿಶೇಷಚೇತನರು ಮತ ಚಲಾಯಿಸಿದರು. ಅದೇ ರೀತಿ ಚಿಂಚೋಳಿಯಲ್ಲಿ 80 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನರು ಕ್ರಮವಾಗಿ 151 ಮತ್ತು 26, ಚಿತ್ತಾಪುರದಲ್ಲಿ 7 ಮತ್ತು 6, ಕಲಬುರಗಿ ಗ್ರಾಮೀಣದಲ್ಲಿ 106 ಮತ್ತು 26, ಗುಲಬರ್ಗಾ ಉತ್ತರದಲ್ಲಿ 61 ಮತ್ತು 7, ಜೇವರ್ಗಿಯಲ್ಲಿ 118 ಮತ್ತು 42, ಅಫಜಲಪೂರನಲ್ಲಿ 174 ಮತ್ತು 28 ಸೇಡಂನಲ್ಲಿ 147 ಮತ್ತು 23 ಹಾಗೂ ಗುಲಬರ್ಗಾ ದಕ್ಷಿಣದಲ್ಲಿ 54 ಮತ್ತು 7 ಜನ ತಮ್ಮ ಹಕ್ಕು ಚಲಾಯಿಸಿದರು.

ಮನೆಯಲ್ಲಿಯೇ ಮತದಾನಕ್ಕೆ ಅವಕಾಶ, ಒಳ್ಳೆದಾಯಿತು-ಸಿದ್ದಪ್ಪ: ಅಫಜಲಪೂರ ಕ್ಷೇತ್ರದ ಕೋಗನೂರ ಗ್ರಾಮದ ಸಿದ್ದಪ್ಪ ತಮಗೆ ನಡೆಯಲು ಕಷ್ಟವಾಗುತ್ತದೆ. ಮತದಾನ‌ ದಿನದಂದು ₹ 100 ಕೊಟ್ಟು ಮತದಾನಕ್ಕೆ ತೆರಳಬೇಕಿತ್ತು. ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ತುಂಬಾ ಉಪಕಾರಿಯಾಗಿದೆ ಎಂದು ಸಂತಸದ‌ ಮಾತುಗಳನ್ನಾಡಿದರು. ಇನ್ನು ಇದೇ ಕ್ಷೇತ್ರದ ನೀಲೂರ ಗ್ರಾಮದ ವಯೋವೃದ್ಧೆ ಬಬಲಾಬಾಯಿ ಮತದಾನದ ನಂತರ ಮಾತನಾಡಿ, ತನಗೆ ಕಾಲು ಬೇನೆ ಇದ್ದು, ಮಗಟ್ಟೆಗೆ ಹೋಗಕ್ಕೆ ಆಗುತ್ತಿರಲಿಲ್ಲ. ಮನೆಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು ಅನುಕೂಲವಾಗಿದೆ ಎಂದು ಸಂತಸ ಪಟ್ಟರು.

ಕಲಬುರಗಿ ಜಿಲ್ಲೆಯಾದ್ಯಂತ 80 ವರ್ಷ ಮೇಲ್ಪಟ್ಟ 42,000 ಜನ‌ ಮತದಾರರಿದ್ದಾರೆ. ಇದರಲ್ಲಿ 1,387 ಜನ ಮತ್ತು‌‌ 4,000 ವಿಶೇಷಚೇತನರ ಪೈಕಿ 274 ಜನ ಮನೆಯಿಂದಲೇ ಮತದಾನ ಮಾಡುವುದಾಗಿ ತಿಳಿಸಿದ್ದರಿಂದ ಶನಿವಾರ ಮತಗಟ್ಟೆ‌ ಅಧಿಕಾರಿಗಳು, ಮೈಕ್ರೋ ವೀಕ್ಷಕರು, ವಿಡಿಯೋಗ್ರಾಪರ್, ಪೊಲೀಸ್ ಒಳಗೊಂಡ ಒಟ್ಟು 69 ತಂಡ‌ಗಳು 9 ವಿಧಾನಸಭಾ ಕ್ಷೇತ್ರದಲ್ಲಿ 80+ ಮತ್ತು ವಿಶೇಷಚೇತನ ಮತದಾರರ ಮನೆಯತ್ತ ಹೆಜ್ಜೆ ಹಾಕಿ, ಮನೆಯಲ್ಲಿಯೆ ಒಂದು ಕಂಪಾರ್ಟ್ ಮೆಂಟ್ ಮಾಡಿ ಮತದಾರರಿಂದ ಅಂಚೆಮತದಾನ ಮಾಡಿಸಿದರು. ಇನ್ನು ಮತದಾನದ ಗೌಪ್ಯತೆಯನ್ನು ಕಾಪಾಡಲಾಯಿತು.

VOTING FORM HOME
ಮನೆಯಿಂದ ಮತದಾನ

ಬೆಂಗಳೂರು/ದೇವನಹಳ್ಳಿಯಲ್ಲಿ 562 ಮಂದಿಯಿಂದ ಮನೆಯಿಂದಲೇ ಮತದಾನ: 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ಇಂದು ಹಿರಿಯ ವೃದ್ಧರಿಗೆ ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ನಡೆಯಿತು. 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನರ ನೆರವಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 562 ಮಂದಿ ಉಪಯೋಗಿಸಿಕೊಂಡು ಮನೆಯಿಂದಲೇ ಮತದಾನ ಮಾಡಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.

178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 133 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನ ಮತದಾರರಲ್ಲಿ 129 ಮಂದಿ ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ. 179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 100 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನ ಮತದಾರರಲ್ಲಿ 94 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ. 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 220 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನರ ಮತದಾರರಲ್ಲಿ 215 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.

181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 130 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನ ಮತದಾರರಲ್ಲಿ 124 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 562 ಮಂದಿ 80 ವರ್ಷ ತುಂಬಿದ ಹಿರಿಯರು ಹಾಗೂ ವಿಕಲಚೇತನರ ಮತದಾರರು ಮನೆಯಿಂದಲೇ ಮತದಾನ ಸೌಲಭ್ಯವನ್ನು ಉಪಯೋಗಿಸಿಕೊಂಡು ಮತದಾನ ಮಾಡಿದ್ದಾರೆ.

ಈ ಸೌಲಭ್ಯವನ್ನು ಬಳಸಿಕೊಳ್ಳಲು ಜಿಲ್ಲೆಯಾದ್ಯಂತ 583 ಕೋರಿಕೆ ಸಲ್ಲಿಸಿದ್ದು, 562 ಮಂದಿ ಈ ಸೌಲಭ್ಯದ ಸದುಪಯೋಗ ಪಡೆದಿದ್ದಾರೆ. 583ರಲ್ಲಿ 10 ಮಂದಿ ಮೃತಪಟ್ಟಿದ್ದು, 11 ಜನ ಮತದಾರರು ಅಲಭ್ಯವಿದ್ದ ಕಾರಣ ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು ಪುನಃ ಅವರ ಮನೆಗಳಿಗೆ ಎರಡನೆಯ ಹಾಗೂ ಕಡೆಯ ಬಾರಿಗೆ ತೆರಳಿ ಮತದಾನ ಮಾಡಿಸಿಕೊಳ್ಳಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಜನ ಬಲವೇ ಗೆಲುವು ಸಾಧಿಸಲಿದೆ: ಸಿಎಂ ಬೊಮ್ಮಾಯಿ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.