ETV Bharat / state

ಬಿಜೆಪಿ ಸರ್ಕಾರದಿಂದ ಪ್ರಿಯಾಂಕ್ ಖರ್ಗೆ ಕೊಲೆಗೆ ಸಂಚು: ಕಾಂಗ್ರೆಸ್​​​ ನಾಯಕ ಗಂಭೀರ ಆರೋಪ

author img

By

Published : Nov 12, 2022, 4:01 PM IST

Updated : Nov 12, 2022, 7:04 PM IST

Kn_klb_
ಶರಣಪ್ರಕಾಶ ಪಾಟೀಲ್

ಶಾಸಕ ಪ್ರಿಯಾಂಕ​ ಖರ್ಗೆ ಅವರು ಬಿಜೆಪಿ ಸರ್ಕಾರದ ಹಗರಣ ಮತ್ತು ಅಕ್ರಮದ ವಿರುದ್ಧ ಧ್ವನಿ ಎತ್ತುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ತಮ್ಮ ಕಾರ್ಯಕರ್ತನ ಮುಖಾಂತರ ಪ್ರಿಯಾಂಕ್​ ಖರ್ಗೆ ಕೊಲೆ ಮಾಡಿಸಲು ಸಂಚು ರೂಪಿಸಿದೆ ಎಂದು ಶರಣ ಪ್ರಕಾಶ ಪಾಟೀಲ್​ ಆರೋಪಿಸಿದ್ದಾರೆ.

ಕಲಬುರಗಿ: ಸರ್ಕಾರ ತಮ್ಮ‌ ಕಾರ್ಯಕರ್ತನ ಮುಖಾಂತರ ಶಾಸಕ ಪ್ರಿಯಾಂಕ ಖರ್ಗೆ ಅವರ ಕೊಲೆ ಮಾಡಿಸೋದಕ್ಕೆ ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಕಲಬುರಗಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ‌.

ಮಾಜಿ ಮಂತ್ರಿ ಹಾಗೂ ಹಾಲಿ‌ ಶಾಸಕ‌ರಾದ ಪ್ರಿಯಾಂಕ್ ಖರ್ಗೆ ಅವರಿಗೆ ನಾವು ಎಕೆ 47 ಗನ್ ನಿಂದು ಶೂಟ್ ಮಾಡ್ತೇವೆ ಎಂದು ಬಿಜೆಪಿ ಸರ್ಕಾರ ತಮ್ಮ ಕಾರ್ಯಕರ್ತನ ಮೂಲಕ ಹೇಳಿಕೆ ಕೊಡಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ ಪಾಟೀಲ್, ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಪ್ರಿಯಾಂಕ್ ಖರ್ಗೆ ಅವರ ಕೊಲೆ ಮಾಡೋದಕ್ಕೆ ಸಂಚು ರೂಪಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಕೊಲೆಗೆ ಸಂಚು ಆರೋಪ

ಪ್ರಿಯಾಂಕ್ ಖರ್ಗೆ, ಸರ್ಕಾರದ ಹಗರಣ, ಅಕ್ರಮದ ಕುರಿತು ಧ್ವನಿ ಎತ್ತುತ್ತಿದ್ದಾರೆ‌. ಹೀಗಾಗಿ ಸರ್ಕಾರ ಪ್ರಿಯಾಂಕ್​ ಖರ್ಗೆ ಅವರ ಧ್ವನಿ ಹಾಗೂ ಅವರನ್ನು ಸಹ ಮುಗಿಸುವ ಸಂಚು ಹೆಣೆಯುತ್ತಿದೆ ಎಂದು ದೂರಿದ್ದಾರೆ.

ಸಮಿಶ್ರ ಸರ್ಕಾರದಲ್ಲಿದ್ದಾಗ ಪ್ರಿಯಾಂಕ್ ಖರ್ಗೆ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಭದ್ರತೆಯನ್ನು ಹಿಂಪಡೆದು ಕೊಳ್ಳಲಾಗಿದೆ‌. ಭದ್ರತೆ ಹಿಂಪಡೆಯುವ ಮುಖಾಂತರ ರಾಜ್ಯ ಬಿಜೆಪಿ ಸರ್ಕಾರ ಪಿಎಸ್ಐ ಹಗರಣದ ಸೇಡು ತೀರಿಸಿಕೊಳ್ಳುತ್ತಿದೆ. ಇದೊಂದು ವ್ಯವಸ್ಥಿತ ಸಂಚು ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್​ಡಿಡಿ ನಿರ್ಲಕ್ಷ್ಯ ಆರೋಪ: ಹೆಚ್‍ಡಿಕೆ ಗರಂ

Last Updated :Nov 12, 2022, 7:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.