ETV Bharat / state

ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣ: ಹೈಕೋರ್ಟ್​ ಷರತ್ತು ಉಲ್ಲಂಘಿಸಿದ ಆರ್‌ಡಿ ಪಾಟೀಲ್‌ಗೆ ಸಿಐಡಿ ನೋಟಿಸ್

author img

By

Published : Dec 20, 2022, 7:32 PM IST

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್ ಡಿ ಪಾಟೀಲ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

CID  visited RD Patil  house
ಸಿಐಡಿ ತನಿಖಾಧಿಕಾರಿಗಳು ಆರ್‌ಡಿ ಪಾಟೀಲ್ ಮನೆಗೆ ಭೇಟಿ ನೀಡಿರುವುದು

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಕಿಂಗ್‌ಪಿನ್ ಆರ್ ಡಿ ಪಾಟೀಲ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾಮೀನು ನೀಡುವ ವೇಳೆ ಹೈಕೋರ್ಟ್​ ಹಾಕಿದ ಷರತ್ತುಗಳನ್ನು ಆರ್‌ಡಿ ಪಾಟೀಲ್ ಉಲ್ಲಂಘಿಸಿದ್ದು, ಸಿಐಡಿ ಅಧಿಕಾರಿಗಳು ಕೋರ್ಟ್​ಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಹೈಕೋರ್ಟ್​ ಷರತ್ತು ಉಲ್ಲಂಘಿಸಿದ ಆರೋಪ: ಆರ್ ಡಿ ಪಾಟೀಲ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ವಿಧಿಸಿ, ಬಿಡುಗಡೆಗೊಳಿಸಿತ್ತು. ಷರತ್ತಿನ ಅನ್ವಯ ಜಿಲ್ಲೆಯ ಟ್ರಯಲ್ ಕೋರ್ಟ್(ಜಿಲ್ಲಾ ಕೆಂದ್ರ) ಬಿಟ್ಟು ಹೊರ ಹೋಗಬಾರದು. ಜಾಮೀನಿನಲ್ಲಿ ಸೂಚಿರುವ ವಿಳಾಸದಲ್ಲೇ ಇರಬೇಕು.

ತನಿಖಾಧಿಕಾರಿಗಳಿಗೆ ನೀಡಿರುವ ಮೊಬೈಲ್ ಸಂಖ್ಯೆ ಬದಲಿಸದೆ ಸದಾ ಲಭ್ಯವಿರಬೇಕು. ಮೊಬೈಲ್ ನಂಬರ್ ಬದಲು ಮಾಡಿದ್ರೆ ಅಥವಾ ಅಡ್ರೆಸ್ ಬದಲಾವಣೆ ಮಾಡುವುದಾದ್ರೆ ತನಿಖಾಧಿಕಾರಿ ಮತ್ತು ಕೋರ್ಟ್ ಗಮನಕ್ಕೆ ತರಬೇಕು.‌ ಜಾಮೀನಿನ ಮೇಲೆ ಹೊರ ಬಂದಾಗ ಸಾಕ್ಷಿಗಳನ್ನು ನಾಶ ಮಾಡಬಾರದು. ಹೀಗೆ ಅನೇಕ ಷರತ್ತುಗಳನ್ನು ಹೈಕೊರ್ಟ್ ವಿಧಿಸಿದೆ.

ಆದ್ರೆ ನಿನ್ನೆ ತನಿಖಾಧಿಕಾರಿಗಳು ಆರ್‌ಡಿ ಪಾಟೀಲ್ ಮನೆಗೆ ಬಂದಾಗ ಮನೆ ಲಾಕ್ ಆಗಿತ್ತು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಆರ್ ಡಿ ಪಾಟೀಲ್ ಸಹೋದರರನ್ನು ಸಂಪರ್ಕಿಸಿದ್ರೆ ಗಾಣಗಾಪುರ ದರ್ಶನಕ್ಕೆ ಹೋಗಿದ್ದಾರೆಂದು ಹೇಳಿದ್ದರು.

ಹೀಗಾಗಿ ನಿನ್ನೆ ಸಂಜೆ ನಾಲ್ಕು ಗಂಟೆಗೆ ವಿಚಾರಣೆಗೆ ಹಾಜರಾಗಲು ತನಿಖಾಧಿಕಾರಿಗಳು ಸೂಚಿಸಿದ್ದರು. ಆದರೆ ತನಿಖಾಧಿಕಾರಿ ಎದುರು ಆರ್ ಡಿ ಪಾಟೀಲ್ ಹಾಜರಾಗಿಲ್ಲ. ಕಾರಣ, ಇಂದು ಅಧಿಕಾರಿಗಳು ನಗರದ ಅಕ್ಕಮಹಾದೇವಿ ಕಾಲನಿಯ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ, ವಿಚಾರಣೆಗೆ ಸಂಜೆಯವರಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇವತ್ತು ಕೂಡ ತನಿಖಾಧಿಕಾರಿಗಳ ಮುಂದೆ ಹಾಜರಾಗದಿದ್ದರೆ ಆರ್ ಡಿ ಪಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇದನ್ನೂಓದಿ:ಕೋರ್ಟ್ ಗೆ ಹಾಜರಾದ ಸಾಹಿತಿ ಪ್ರೊ. ಭಗವಾನ್.. ಷರತ್ತು ಬದ್ದ ಜಾಮೀನು ಮಂಜೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.