ETV Bharat / state

ಶಾಸಕನ ಸಹೋದರನ ಅಂಗಡಿಯಲ್ಲಿದ್ದ ₹ 6 ಲಕ್ಷ ದೋಚಿದ ಖದೀಮರು..

author img

By

Published : Oct 15, 2019, 8:54 PM IST

Updated : Oct 16, 2019, 2:47 PM IST

ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಸಹೋದರ ವಿಜಯಕುಮಾರಗೌಡ ತೇಲ್ಕೂರಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಕಳ್ಳರು ₹6 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.

ಕಿರಾಣಿ ಅಂಗಡಿ

ಕಲಬುರಗಿ: ಹಾಡಹಗಲೇ ಕಳ್ಳರಿಬ್ಬರು ಬೈಕ್ ಮೇಲೆ ಬಂದು ಶಾಸಕರ ಸಹೋದರನ ಅಂಗಡಿಯಲ್ಲಿ ₹6 ಲಕ್ಷ ನಗದು ಕದ್ದು ಪರಾರಿಯಾದ ಘಟನೆ ಸೇಡಂ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜರುಗಿದೆ.

ಕಳ್ಳರು ಕೈಚಳಕ ತೋರಿಸಿದ ಕಿರಾಣಿ ಅಂಗಡಿ..

ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಸಹೋದರ ವಿಜಯಕುಮಾರಗೌಡ ತೇಲ್ಕೂರಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳ ತೋರಿದ್ದಾರೆ. ಎಂದಿನಂತೆ ವಿಜಯಕುಮಾರ ಬೆಳಗ್ಗೆ ಅಂಗಡಿ ತೆರೆಯಲು ಆಗಮಿಸಿದ್ದರು. ಬರುವಾಗ ಹಣದ ಬ್ಯಾಗ್ ತೆಗೆದುಕೊಂಡು ಬಂದಿದ್ದಾರೆ. ಇದನ್ನು ಗಮನಿಸಿದ ಇಬ್ಬರು ಯುವಕರು ವಿಜಯಕುಮಾರ ಅಕ್ಕಿ ಚೀಲ ಅಂಗಡಿಯೊಳಗೆ ಇರಿಸಲು ತೆರಳಿದಾಗ ಟೇಬಲ್ ಮೇಲೆ ಇಟ್ಟಿದ್ದ ₹ 6 ಲಕ್ಷ ಕದ್ದು ಪರಾರಿಯಾಗಿದ್ದಾರೆ.

ಸಿಸಿ ಟಿವಿ ದೃಶ್ಯದಲ್ಲಿ ಸುಮಾರು 16 ವರ್ಷದ ಅಪ್ರಾಪ್ತ ಹಾಗೂ 30 ವರ್ಷದ ಯುವಕ ಹಣ ಕದ್ದು ಬೈಕ್ ಮೇಲೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಸುದ್ದಿ ಅರಿತ ಸೇಡಂ ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಿಸಿ ಟಿವಿ ದೃಶ್ಯ ಪರಿಶೀಲಿಸಿದ್ದು, ಅದರ ಆಧಾರದ ಮೇಲೆ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು, ಕಳೆದ ಕೆಲದಿನಗಳ ಹಿಂದಷ್ಟೇ ಎಸ್‌ಬಿಐ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಜಿ ಕೆ ರಸ್ತೆಯ ಪೆಟ್ರೋಲ್ ಬಂಕ್ ಬಳಿ ತೆರಳುವಾಗ ಬೈಕ್ ಮೇಲೆ ಬಂದ ಕಳ್ಳರು ಹಣ ಲಪಟಾಯಿಸಿ ಪರಾರಿಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಳ್ಳತನ ಪ್ರಕರಣ ನಡೆದಿದೆ.

Intro:ಕಲಬುರಗಿ: ಹಾಡಹಗಲೇ ಕಳ್ಳರಿಬ್ಬರು ಬೈಕ್ ಮೇಲೆ ಬಂದು ಶಾಸಕರ ಸಹೋದರನ ಅಂಗಡಿಯಲ್ಲಿ ₹6 ಲಕ್ಷ ನಗದು ಕದ್ದು ಪರಾರಿಯಾದ ಘಟನೆ ಸೇಡಂ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜರುಗಿದೆ.

ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಸಹೋದರ ವಿಜಯಕುಮಾರಗೌಡ ತೇಲ್ಕೂರಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳ ತೊರಿದ್ದಾರೆ. ದೈನಂದಿನಂತೆ ವಿಜಯಕುಮಾರ ಬೆಳಗ್ಗೆ ಅಂಗಡಿ ತೆರೆಯಲು ಆಗಮಿಸಿದ್ದರು. ಬರುವಾಗ ಹಣದ ಬ್ಯಾಗ ತೆಗೆದುಕೊಂಡು ಬಂದಿದ್ದಾರೆ. ಇದನ್ನು ಗಮನಿಸಿದ ಇಬ್ಬರು ಯುವಕರು ವಿಜಯಕುಮಾರ ಅಕ್ಕಿ ಚೀಲ ಅಂಗಡಿಯೊಳಗೆ ಇರಿಸಲು ತೆರಳಿದಾಗ ಟೇಬಲ್ ಮೇಲೆ ಇಟ್ಟಿದ್ದ 6 ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸಿಸಿಟಿವಿ ದೃಶ್ಯದಲ್ಲಿ ಸುಮಾರು 16 ವರ್ಷದ ಅಪ್ರಾಪ್ತ ಹಾಗೂ 30 ವರ್ಷದ ಯುವಕ ಹಣ ಕದ್ದು ಬೈಕ್ ಮೇಲೆ ಪರಾರಿಯಾಗಿರುವದು ಬೆಳಕಿಗೆ ಬಂದಿದೆ. ಸುದ್ದಿ ಅರಿತ ಸೇಡಂ ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಡಿನೀಡಿ ಪರೀಶಿಲನೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ದೃಶ್ಯಗಳ ಆಧಾರದ ಮೇಲೆ ಕಳ್ಳರ ಪತ್ತೆಗೆ ಬಲೆ ಬಿಸಿದ್ದಾರೆ. ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕಳೆದ ಕೇಲ ದಿನಗಳ ಹಿಂದಷ್ಟೇ ಎಸ್.ಬಿ.ಐ. ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಜಿ.ಕೆ. ರಸ್ತೆಯ ಪೆಟ್ರೋಲ್ ಬಂಕ್ ಬಳಿ ತೆರಳುವಾಗ ಬೈಕ್ ಮೇಲೆ ಬಂದ ಕಳ್ಳರು ಹಣ ಲಪಟಾಯಿಸಿ ಪರಾರಿಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಜರುಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.Body:ಕಲಬುರಗಿ: ಹಾಡಹಗಲೇ ಕಳ್ಳರಿಬ್ಬರು ಬೈಕ್ ಮೇಲೆ ಬಂದು ಶಾಸಕರ ಸಹೋದರನ ಅಂಗಡಿಯಲ್ಲಿ ₹6 ಲಕ್ಷ ನಗದು ಕದ್ದು ಪರಾರಿಯಾದ ಘಟನೆ ಸೇಡಂ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜರುಗಿದೆ.

ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಸಹೋದರ ವಿಜಯಕುಮಾರಗೌಡ ತೇಲ್ಕೂರಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳ ತೊರಿದ್ದಾರೆ. ದೈನಂದಿನಂತೆ ವಿಜಯಕುಮಾರ ಬೆಳಗ್ಗೆ ಅಂಗಡಿ ತೆರೆಯಲು ಆಗಮಿಸಿದ್ದರು. ಬರುವಾಗ ಹಣದ ಬ್ಯಾಗ ತೆಗೆದುಕೊಂಡು ಬಂದಿದ್ದಾರೆ. ಇದನ್ನು ಗಮನಿಸಿದ ಇಬ್ಬರು ಯುವಕರು ವಿಜಯಕುಮಾರ ಅಕ್ಕಿ ಚೀಲ ಅಂಗಡಿಯೊಳಗೆ ಇರಿಸಲು ತೆರಳಿದಾಗ ಟೇಬಲ್ ಮೇಲೆ ಇಟ್ಟಿದ್ದ 6 ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸಿಸಿಟಿವಿ ದೃಶ್ಯದಲ್ಲಿ ಸುಮಾರು 16 ವರ್ಷದ ಅಪ್ರಾಪ್ತ ಹಾಗೂ 30 ವರ್ಷದ ಯುವಕ ಹಣ ಕದ್ದು ಬೈಕ್ ಮೇಲೆ ಪರಾರಿಯಾಗಿರುವದು ಬೆಳಕಿಗೆ ಬಂದಿದೆ. ಸುದ್ದಿ ಅರಿತ ಸೇಡಂ ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಡಿನೀಡಿ ಪರೀಶಿಲನೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ದೃಶ್ಯಗಳ ಆಧಾರದ ಮೇಲೆ ಕಳ್ಳರ ಪತ್ತೆಗೆ ಬಲೆ ಬಿಸಿದ್ದಾರೆ. ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕಳೆದ ಕೇಲ ದಿನಗಳ ಹಿಂದಷ್ಟೇ ಎಸ್.ಬಿ.ಐ. ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಜಿ.ಕೆ. ರಸ್ತೆಯ ಪೆಟ್ರೋಲ್ ಬಂಕ್ ಬಳಿ ತೆರಳುವಾಗ ಬೈಕ್ ಮೇಲೆ ಬಂದ ಕಳ್ಳರು ಹಣ ಲಪಟಾಯಿಸಿ ಪರಾರಿಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಜರುಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.Conclusion:
Last Updated : Oct 16, 2019, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.