ETV Bharat / state

ಸರ್ಕಾರದ ನಿರ್ಧಾರ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಪ್ರಿಯಾಂಕ್ ಖರ್ಗೆ

author img

By

Published : Apr 29, 2022, 6:40 PM IST

ಪಿಎಸ್ಐ ಅಕ್ರಮ ನಡೆದಿರುವುದು ಕಲಬುರಗಿಯಲ್ಲಿ ಅಷ್ಟೇ ಅಲ್ಲ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಲ್ಲೂ ಸಹ ಅಕ್ರಮ ನಡೆದಿದೆ. ಸಿಐಡಿ ಅವರಿಗೂ ಮಾಹಿತಿ ಇದೆ. ಪ್ರಕರಣದಲ್ಲಿ ನೂರಾರು ಜನ ಇರಬಹುದು. ತನಿಖೆ ನಡೆಯಲಿ ತನಿಖೆಗೂ ಮುನ್ನವೇ ಮರು ಪರೀಕ್ಷೆ ಘೋಷಿಸುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಪ್ರೀಯಾಂಕ್ ಖರ್ಗೆ ಹೇಳಿದ್ದಾರೆ.

KPCC spokesperson Priyank Khargay, speaking at Kalaburagi
ಕಲಬುರಗಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಪ್ರೀಯಾಂಕ್ ಖರ್ಗೆ

ಕಲಬುರಗಿ: ತನಿಖೆ ಮುಗಿಯೋ ಮುಂಚೆಯೇ ಮರು ಪರೀಕ್ಷೆ ಎಂದು ಪ್ರಕರಣ ಮುಚ್ಚಿಹಾಕೋ ಪ್ರಯತ್ನ ನಡೆದಿದೆ. ಪಿಎಸ್ಐ ಅಕ್ರಮ ನಡೆದಿರುವುದು ಕಲಬುರಗಿಯಲ್ಲಿ ಅಷ್ಟೇ ಅಲ್ಲ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಲ್ಲೂ ನಡೆದಿದೆ. ಈ ಬಗ್ಗೆ ಸಿಐಡಿ ಅವರಿಗೂ ಮಾಹಿತಿ ಇದೆ. ಇದೇ ವಿಚಾರವಾಗಿ ಅಭ್ಯರ್ಥಿಗಳು ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನೂರಾರು ಜನ ಇರಬಹುದು. ತನಿಖೆ ನಡೆಯಲಿ ತನಿಖೆಗೂ ಮುನ್ನವೇ ಮರು ಪರೀಕ್ಷೆ ಘೋಷಿಸುವುದು ಸರಿಯಲ್ಲ. ದಿವ್ಯ ಹಾಗರಗಿ ಬಂಧನ ಸರ್ಕಾರದ ದೊಡ್ಡ ಸಾಧನೆ ಏನಲ್ಲ. ಸಂಪೂರ್ಣ ತನಿಖೆ ಯಾವ ದಿಕ್ಕಿನಲ್ಲಿ ಹೋಗಿದೆ ಅಂತಾ ಗೃಹ ಮಂತ್ರಿಗಳಿಗೆ ಅರಿವಿಲ್ಲ ಎನಿಸುತ್ತಿದೆ. ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಬಂಧನ ಇದು ತನಿಖೆ ಹಂತದ ಪ್ರಥಮ ಪ್ರಯತ್ನ. ಹಣ ವರ್ಗಾವಣೆ ಬಗ್ಗೆ ಮಾಹಿತಿ ಎಲ್ಲಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರವಾಗಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ

ವಿಚಾರಣೆಗೆ ಹಾಜರಾಗುವುದಿಲ್ಲ: ನಮ್ಮ ರಾಜ್ಯದಲ್ಲಿ 10 ಲಕ್ಷ ಜನ ಕೆಪಿಎಸ್​ಸಿ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಎಷ್ಟು ಜನ ಅಕ್ರಮ ಮಾಡಿದ್ದಾರೆ? ಈ ಬಗ್ಗೆ ಹೆಚ್ಚಿನ ಪ್ರಶ್ನೆ ಕೇಳಿದ್ರೆ ನನಗೆ ಮತ್ತೊಂದು ನೋಟಿಸ್ ಕಳಿಸ್ತಾರೆ ಎಂದು ವ್ಯಂಗ್ಯವಾಡಿದರು. ಕಾನೂನಿನಲ್ಲಿ ನಾನು ಹಾಜರಾಗಬೇಕು ಅನ್ನೋದು ಇಲ್ಲವೇ ಇಲ್ಲ, ನಾನ್ಯಾಕೆ ಹಾಜರಾಗಬೇಕು? ನೋಟಿಸ್​ಗೆ ಉತ್ತರ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.