ETV Bharat / state

ಬಟ್ಟೆ ಅಂಗಡಿಯಲ್ಲಿ ಯುವತಿಯ ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್​ಮೇಲ್: ಯುವಕನ ಬಂಧನ

author img

By ETV Bharat Karnataka Team

Published : Dec 2, 2023, 10:30 PM IST

ಯುವತಿಯ ಖಾಸಗಿ ಫೋಟೋ ಸೆರೆಹಿಡಿದು ಕಿರುಕುಳ ನೀಡಿದ್ದಲ್ಲದೇ, ಚಿನ್ನಾಭರಣ ಕಿತ್ತುಕೊಂಡಿದ್ದ ಆರೋಪಿಯನ್ನು ಹಾನಗಲ್​ ಪೊಲೀಸರು ಬಂಧಿಸಿದ್ದಾರೆ.

youth-arrested-for-harassing-young-woman-by-private-photo
ಬಟ್ಟೆ ಅಂಗಡಿಯಲ್ಲಿ ಯುವತಿಯ ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್​ಮೇಲ್: ಯುವಕನ ಬಂಧನ

ಹಾವೇರಿ: ಬಟ್ಟೆ ಅಂಗಡಿಗೆ ಬಂದಿದ್ದ ಯುವತಿಯ ಖಾಸಗಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡಿದ್ದ ಆರೋಪಿಯನ್ನು ಜಿಲ್ಲೆಯ ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 32 ವರ್ಷದ ಮೈನುದ್ದೀನ್ ಮುಂಡಗೋಡ ಎಂದು ಗುರುತಿಸಲಾಗಿದೆ.

ಹಾನಗಲ್ ತಾಲೂಕಿನ ಗ್ರಾಮವೊಂದರ ಯುವತಿ ಬಟ್ಟೆ ಖರೀದಿಗಾಗಿ ಹಾನಗಲ್‌ ಪಟ್ಟಣದಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಟ್ರಯಲ್ ರೂಮಿನಲ್ಲಿ ಇದ್ದಾಗ ಯುವತಿಯ ಅರಿವಿಗೆ ಬಾರದಂತೆ ಆಕೆಯ ಖಾಸಗಿ ಫೋಟೋವನ್ನು ಆರೋಪಿ ಮೈನುದ್ದೀನ ತಗೆದುಕೊಂಡಿದ್ದಾನೆ. ಬಳಿಕ ಯುವತಿಗೆ ಕರೆ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ ಎಂದು ದೂರು ನೀಡಲಾಗಿತ್ತು.

ಅಲ್ಲದೇ, ಯುವತಿಯ ಮೊಬೈಲ್‌ ಕರೆ ಮಾಡಿರುವ ಆರೋಪಿ, ಆಕೆಗೆ ನಗ್ನವಾಗಿ ವಿಡಿಯೋ ಕಾಲ್ ಮಾಡುವಂತೆ ಬೆದರಿಸಿ ಕಿರುಕುಳ ನೀಡಿದ್ದಾನೆ. ಜೊತೆಗೆ, ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿರುವ ಯುವಕ, ಯುವತಿ ಕಡೆಯಿಂದ 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಿತ್ತುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತಂತೆ ಯುವತಿಯ ಕಡೆಯವರು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಹಾನಗಲ್ ಪೊಲೀಸರು ಆರೋಪಿ ಮೈನುದ್ದೀನ್​ನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ವಿವಾಹೇತರ ಸಂಬಂಧ ಬೇಡ ಎಂದ ಸಹೋದರಿ: ತಂಗಿಯ ಮಗನನ್ನು ಕೊಲೆ ಮಾಡಿದ ಅಕ್ಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.