ಜೂಜುಕೋರರ ವಿರುದ್ಧ ಕೇಸ್ ದಾಖಲಿಸದ ಮೂವರು ಸಿಬ್ಬಂದಿ ಅಮಾನತು

author img

By

Published : Sep 16, 2021, 6:46 AM IST

ಶಿಗ್ಗಾಂವ ಪೊಲೀಸ್ ಠಾಣೆ

ಜೂಜುಕೋರರ ವಿರುದ್ಧ ಕೇಸ್ ದಾಖಲಿಸದ ಹಾವೇರಿ ಜಿಲ್ಲೆಯ ಶಿಗ್ಗಾಂವ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಹಾವೇರಿ ಎಸ್​ಪಿ ಹನುಮಂತರಾಯ ಆದೇಶಿಸಿದ್ದಾರೆ.

ಹಾವೇರಿ: ಇಸ್ಪೀಟ್​ ಅಡ್ಡೆ ಮೇಲೆ ದಾಳಿ ಮಾಡಿದ್ರೂ ಪ್ರಕರಣ ದಾಖಲಿಸದ ಹಿನ್ನೆಲೆ ಶಿಗ್ಗಾಂವ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಹಾವೇರಿ ಎಸ್​ಪಿ ಹನುಮಂತರಾಯ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಶಿಗ್ಗಾಂವ ಪೊಲೀಸ್ ಠಾಣೆಯ ಪಿಎಸ್​ಐ ಕೆ.ಎನ್.ಹಳ್ಳಿಯವರ್, ಎಎಸ್ಐ ಆರ್.ಹೆಚ್.ಸಂಗೊಳ್ಳಿ ಮತ್ತು ಹೆಡ್ ಕಾನ್ಸ್​ಟೇಬಲ್ ಎಂ.ಎಸ್.ಸೂರಗೊಂಡ ಅಮಾನತು ಮಾಡಿದ ಸಿಬ್ಬಂದಿ.

ಶಿಗ್ಗಾಂವ ಪೊಲೀಸ್ ಠಾಣೆ

ಸೆಪ್ಟೆಂಬರ್ 10 ರಂದು ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಇಸ್ಪೀಟ್​ ಆಡುತ್ತಿದ್ದವರ ಮೇಲೆ ಈ ಮೂವರು ಸಿಬ್ಬಂದಿ ದಾಳಿ ಮಾಡಿದ್ದರು. ಈ ವೇಳೆ ಸ್ಥಳದಲ್ಲಿ 8 ಲಕ್ಷ ರೂಪಾಯಿ,11 ಮೊಬೈಲ್ ಮತ್ತು ಆರು ಮೋಟಾರ್ ಸೈಕಲ್ ಜಪ್ತಿಮಾಡಿಕೊಂಡು ಹೋಗಿದ್ದರು. ಆದರೂ ಇಸ್ಪೀಟ್ ಆಡುವವರ ಮೇಲೆ ಯಾವುದೇ ದೂರು ದಾಖಲು ಮಾಡಿಕೊಂಡಿಲ್ಲ. ಈ ಹಿನ್ನೆಲೆ ಎಸ್​ಪಿ ಹನುಮಂತರಾಯ, ಶಿಗ್ಗಾಂವ ಠಾಣೆಯ ಪಿಎಸ್ಐ ಮತ್ತು ಇಬ್ಬರು ಸಿಬ್ಬಂದಿ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ, ಅಮಾನತು ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.