ಹಾವೇರಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

author img

By

Published : Feb 23, 2023, 10:13 AM IST

Updated : Feb 23, 2023, 11:01 PM IST

Haveri family committed suicide

ಒಂದೇ ಕುಟುಂಬದ ಮೂವರು ಆತ್ಮಹತ್ಯೆ - ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಂದೆ-ತಾಯಿ - ಸವಣೂರು ತಾಲೂಕಿನಲ್ಲಿ ಘಟನೆ

ಘಟನೆ ಬಗ್ಗೆ ಎಸ್​ಪಿ ಮಾಹಿತಿ

ಹಾವೇರಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು 48 ವರ್ಷದ ಹನುಮಂತಗೌಡ ಪಾಟೀಲ್, ಅವರ ಪತ್ನಿ ಲಲಿತಾ ಮತ್ತು ಪುತ್ರಿ ನೇತ್ರಾ ಎಂದು ಗುರುತಿಸಲಾಗಿದೆ.

ಮೃತ ದುರ್ದೈವಿಗಳು ನಿನ್ನೆಯೇ (ಬುಧವಾರ) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಅದಕ್ಕಾಗಿ ಮೂವರು ಮನೆಯನ್ನು ಸಹ ತೊರೆದಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಈ ವಿಚಾರ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪಿಎಸ್ಐ ಮಹಾಂತೇಶ ಅವರಿಗೆ ಈ ಬಗ್ಗೆ ತಲುಪಿತ್ತು. ಸುದ್ದಿ ತಿಳಿದ ತಕ್ಷಣ ಪಿಎಸ್ಐ ಮಹಾಂತೇಶ ಅವರು ಮೂವರನ್ನು ಪತ್ತೆ ಮಾಡಿ ಮನೆಗೆ ಕಳಿಸಿಕೊಟ್ಟಿದ್ದರು. ಎಸ್​ಪಿ ಅವರ ಅವರ ಸಮಯ ಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ಮೂವರು ಸೇಫ್ ಆಗಿ ವಾಪಸ್​ ಮನೆಗೆ ತಲುಪಿದ್ದರು. ಆದರೆ, ಸೇಫ್ ಆಗಿ ಮನೆಗೆ ತಲುಪಿದ್ದ ಮೂವರು ಬೆಳಗಾಗುವುದರಲ್ಲಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸವಣೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

'ಮೃತ ಹನುಮಂತಗೌಡ ಪಾಟೀಲ್ ಅವರು ಹೊಸ ಮನೆ ಕಟ್ಟಲು ಹಾಗೂ ಮಗಳ ಮದುವೆಗೆಂದು ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಬಹಳ ಮನನೊಂದಿದ್ದರು. ಹನುಮಂತಗೌಡ ಹಾಗೂ ಪತ್ನಿ ಕೆಲ ದಿನಗಳಿಂದ ಹಲವು ಸಲ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ' ಎಂದು ಮೃತರ ಸಂಬಂಧಿಕರೊಬ್ಬರು ಹೇಳಿದ್ದಾರೆ.

ಎಸ್​ಪಿ ಪ್ರತಿಕ್ರಿಯೆ : ''ಸವಣೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಹನುಮಂತಗೌಡ ಸೇರಿದಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಕೂಡ ಮೃತ ಹನುಮಂತಗೌಡ ಅವರು ರಾಣೆಬೆನ್ನೂರಿನಲ್ಲಿ ತಮ್ಮ ಅಳಿಯನ ಮನೆಯಲ್ಲಿದ್ದಾಗಲೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಆಗ ಅವರ ಆತ್ಮೀಯರು, ಊರವರು ಅವರ ಊರಿಗೆ ಕರೆತಂದು ಸಮಾಧಾನ ಮಾಡಿದ್ದರು. ಆದರೂ ಕೂ ತಡರಾತ್ರಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮಂತಗೌಡ ಅವರು ಸಾಲ ಮಾಡಿಕೊಂಡಿದ್ದಲ್ಲದೆ, ಮದ್ಯ ಸೇವನೆಯನ್ನೂ ಮಾಡುತ್ತಿದ್ದರು. ಈ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕವೇ ನಿಖರ ಕಾರಣ ತಿಳಿದುಬರಲಿದೆ. ಈ ಹಿಂದೆಯೂ ಕೆಲ ಸಲ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಮಾಹಿತಿ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ'' ಎಂದು ಎಸ್​ಪಿ ಶಿವಕುಮಾರ್​ ಎಂದು ತಿಳಿಸಿದ್ದಾರೆ.

ಯುವಕ ಆತ್ಮಹತ್ಯೆ: ಇನ್ನೊಂದೆಡೆ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರೈಲು ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನ ವಯಸ್ಸು ಸುಮಾರು 25 ರಿಂದ 30 ಇರಬಹುದೆಂದು ಪೊಲೀಸರು ಅಂದಾಜು ಮಾಡಿದ್ದಾರೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನ ಗುರುತು ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಕೈಕಾಲು ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ: ಸಕ್ಕರೆನಾಡಲ್ಲಿ ಮತ್ತೊಂದು ಭಯಾನಕ ಮರ್ಡರ್

Last Updated :Feb 23, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.