ETV Bharat / state

ಮೂರು ತಿಂಗಳ ಹಿಂದೆ ಮದುವೆ.. ತಾಯಿ, ಮಗ, ಸೊಸೆ ಆತ್ಮಹತ್ಯೆಗೆ ಶರಣು

author img

By

Published : Dec 22, 2022, 1:26 PM IST

Updated : Dec 22, 2022, 1:46 PM IST

ಹಾವೇರಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ತಾಯಿ ಮತ್ತು ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಸೇರಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

family committed suicide in Haveri  Newly married couple with mother suicide  Haveri crime news  ಮೂರು ತಿಂಗಳ ಹಿಂದೆ ಮದುವೆ  ಹಾವೇರಿ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ  ಮದುವೆಯಾಗಿದ್ದ ನವದಂಪತಿ ಸೇರಿ ಮೂವರು ಆತ್ಮಹತ್ಯೆ  ಮೂವರು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ  ಸೌಜನ್ಯ ಮತ್ತು ಕಿರಣ ಮದುವೆ  ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ
ತಾಯಿ, ಮಗ, ಸೊಸೆ ಆತ್ಮಹತ್ಯೆಗೆ ಶರಣು

ಹಾವೇರಿ : ಒಂದೇ ಮನೆಯಲ್ಲಿ ಮೂವರು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ತಾಯಿ ಭಾರತಿ ಕಮದೊಳ್ಳಿ(40 ವರ್ಷ), ಸೊಸೆ ಸೌಜನ್ಯ(20 ವರ್ಷ) ಮತ್ತು ಮಗ ಕಿರಣ(21 ವರ್ಷ) ಎಂದು ಗುರುತಿಸಲಾಗಿದೆ.

ಕಳೆದ ಮೂರು ತಿಂಗಳ ಹಿಂದಷ್ಟೆ ಸೌಜನ್ಯ ಮತ್ತು ಕಿರಣ ಮದುವೆಯಾಗಿತ್ತು. ಮೃತ ಭಾರತಿಯ ಕಿರಿಯ ಪುತ್ರ ಅರುಣ (21 ವರ್ಷ) ಕಳೆದ ಕೆಲವು ದಿನಗಳ ಹಿಂದೆ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸಿದ್ದರು. ಬಳಿಕ ಈ ಜೋಡಿ ಮನೆ ಬಿಟ್ಟು ಹೋಗಿದೆ. ಈ ವಿಷಯ ತಿಳಿದು ಯುವತಿ ಕುಟುಂಬಸ್ಥರು ಅರುಣ ಕುಟುಂಬಸ್ಥರಿಗೆ ಮಾನಸಿಕವಾಗಿ ಕಿರಿಕಿರಿಯುಂಟು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಯುವತಿ ಮನೆಯವರ ಮಾನಸಿಕ ಕಿರಿಕಿರಿಗೆ ಬೇಸತ್ತು ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಓದಿ: ಬಾವಿಯಲ್ಲಿ ಕಾದಿದ್ದ ಜವರಾಯ.. ಮೋಟಾರ್​ ಅಳವಡಿಸುವಾಗ ವಿದ್ಯುತ್​ ಪ್ರವಹಿಸಿ ಮೂವರು ದುರ್ಮರಣ

Last Updated : Dec 22, 2022, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.