ETV Bharat / state

ಸ್ಥಳೀಯರಿಗೆ ಉದ್ಯೋಗ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳಿಗೆ ಉದಾಸಿ ತರಾಟೆ

author img

By

Published : Aug 27, 2020, 3:47 PM IST

ಕೊರೊನಾದಿಂದಾಗಿ ಹಾಗೂ ಲಾಕ್​​​ಡೌನ್​ನಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ದೊರೆತು ಹಲವರು ಸಂಕಷ್ಟದಲ್ಲೂ ನೆಮ್ಮದಿಯಿಂದಿದ್ದಾರೆ. ಇದೇ ವೇಳೆ, ಹಾನಗಲ್​​ನಲ್ಲಿ ಉದ್ಯೋಗ ಅರಸಿ ಬಂದವರಿಗೆ ಸೂಕ್ತ ಉದ್ಯೋಗ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಷಯವಾಗಿ ಇಂದು ಸಂಸದರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Shivakumar udasi slams officials for not giving proper job for locals
ಸ್ಥಳಿಯರಿಗೆ ಸೂಕ್ತ ಉದ್ಯೋಗದ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಉದಾಸಿ ತರಾಟೆ

ಹಾನಗಲ್ (ಹಾವೇರಿ): ಕೆಲಸ ಬಯಸಿ ಬರುವ ಕೂಲಿ ಕಾರ್ಮಿರಕರಿಗೆ ಸೂಕ್ತ ಸಮಯದಲ್ಲಿ ನರೆಗಾ ಯೋಜನೆಯಡಿ ಕೆಲಸ ನೀಡಿ ಎಂದು ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಕೆಲಸ ಕೊಡಲು ತಡ ಮಾಡಿದ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳೀಯರಿಗೆ ಸೂಕ್ತ ಉದ್ಯೋಗದ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಉದಾಸಿ ಸೂಚನೆ

ಹಾನಗಲ್ ತಾಲೂಕಿನ ಸಿಂಗಾಪೂರ ಗ್ರಾಮಸ್ಥರು ಸ್ಥಳೀಯ ಪಿಡಿಒ ಕೆಲಸ ನೀಡುತ್ತಿಲ್ಲವೆಂದು ಆರೋಪ ಮಾಡಿದರು. ಇದಕ್ಕೆ ತಕ್ಷಣವೆ ಪ್ರತಿಕ್ರಿಯಿಸಿ ತಾ.ಪಂ ಇಒ ಮತ್ತು ಪಿಡಿಒಗಳನ್ನು ಸ್ಥಳಕ್ಕೆ ಕರೆಸಿಕೊಂಡು ಕೆಲಸ ಬಯಸಿ ಬರುವ ಬಡ ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸದೇ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಿ ಎಂದು ಸಂಸದ ಉದಾಸಿ ಅಧಿಕಾರಿಗಳಿಗೆ ಆದೇಶ ಮಾಡಿದರು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.