ETV Bharat / state

ಶಿಗ್ಗಾವಿ ಶೂಟೌಟ್ ಪ್ರಕರಣದ ಆರೋಪಿ ಬಂಧನಕ್ಕೆ ಒತ್ತಾಯ: ಗಾಯಾಳು ಸಂಬಂಧಿಕರಿಂದ ಪೊಲೀಸರಿಗೆ ಮನವಿ

author img

By

Published : May 8, 2022, 10:49 PM IST

Updated : May 8, 2022, 10:56 PM IST

ಶಿಗ್ಗಾವಿಯಲ್ಲಿ ವಸಂತಕುಮಾರ್ ಎಂಬಾತನ ಮೇಲೆ ಶೂಟೌಟ್ ಆಗಿ 18 ದಿನ ಕಳೆದರೂ ಆರೋಪಿಗಳನ್ನು ಪತ್ತೆ ಮಾಡಿಲ್ಲ. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ವಸಂತಕುಮಾರ್​ ಸಂಬಂಧಿಕರು ಮನವಿ ಸಲ್ಲಿಸಿದರು.

Shiggaon shutout issue: Police failed to track down the accused for at least 18 days
ಶಿಗ್ಗಾವಿ ಶೂಟೌಟ್ ಪ್ರಕರಣ

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರ ಶಿಗ್ಗಾವಿಯಲ್ಲಿ ಶೂಟೌಟ್ ಆಗಿ 18 ದಿನಗಳೇ ಕಳೆದಿವೆ. ಆದರೂ ಸಹ ಆರೋಪಿ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಶೂಟೌಟ್​ದಿಂದ ಗಾಯಗೊಂಡ ವಸಂತಕುಮಾರ್ ಸಂಬಂಧಿಕರು ಆರೋಪಿಸಿದ್ದಾರೆ.

ಆರೋಪಿಯ ಗುಂಡೇಟಿನಿಂದ ಗಾಯಗೊಂಡಿರುವ ವಸಂತಕುಮಾರ್​ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಸಂತಕುಮಾರ್ ಸಂಬಂಧಿಕರು ಪ್ರತಿಭಟನೆ ಬದಲು ಪೊಲೀಸರಿಗೆ ಮನವಿ ಸಲ್ಲಿಸಿದರು. ಪ್ರಕರಣದ ಆರೋಪಿಯನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಆರೋಪಿ ಬಂಧಿಸಿ ಇಲ್ಲವೇ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐಗೆ ವಹಿಸಿ ಎಂದರು.

ಶಿಗ್ಗಾವಿ ಶೂಟೌಟ್ ಪ್ರಕರಣದ ಆರೋಪಿ ಬಂಧನಕ್ಕೆ ಒತ್ತಾಯ

ಈ ಕುರಿತಂತೆ ಮಾತನಾಡಿದ ವಸಂತಕುಮಾರ ತಂದೆ ತನ್ನ ಮಗನಿಗೆ ಏನು ಗೊತ್ತಿಲ್ಲರಿ, ಸಂಜೆ ತನಕ ಜಮೀನಿನಲ್ಲಿ ಟ್ರ್ಯಾಕ್ಟರ್​ನಲ್ಲಿ ಕೆಲಸ ಮಾಡಿದ್ದಾನೆ. ಸಂಜೆಯಾದ ನಂತರ ಶಿಗ್ಗಾವಿಗೆ ಸ್ನೇಹಿತರೊಂದಿಗೆ ಸಿನಿಮಾ ನೋಡಲು ಬಂದಿದ್ದ. ಈ ಸಂದರ್ಭದಲ್ಲಿ ಆರೋಪಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಆರೋಪಿ ಟಾಕೀಜ್‌ನಿಂದ ಹೊರಗೆ ಹೋಗಿ ಬಂದು ಗುಂಡು ಹಾರಿಸಿದ್ದಾನೆ. ಮಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿ ಈಗ ಸ್ವಲ್ಪ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದರು.

ಇದನ್ನೂ ಓದಿ:ಅಂದು 68ಕ್ಕೆ ಆಲೌಟ್​, ಇಂದು 67 ರನ್​ಗಳ ಜಯ... ಹೈದರಾಬಾದ್​ ವಿರುದ್ಧ ಸೇಡು ತೀರಿಸಿಕೊಂಡ ಆರ್​ಸಿಬಿ

Last Updated : May 8, 2022, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.