ETV Bharat / state

ಹಾವೇರಿ: 7 ಜೀವಂತ ನಾಡ ಬಾಂಬ್‌ ಪತ್ತೆ, ಆರೋಪಿ ಬಂಧನ

author img

By ETV Bharat Karnataka Team

Published : Dec 3, 2023, 7:20 PM IST

ಆಡೂರು ಪೊಲೀಸರು ಕಾರ್ಯಾಚರಣೆ ನಡೆಸಿ 7 ಜೀವಂತ ನಾಡ ಬಾಂಬ್‌ಗಳನ್ನು ವಶಕ್ಕೆ ಪಡೆದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

police-taken-7-country-made-bomb-into-custody-in-haveri
ಹಾವೇರಿಯಲ್ಲಿ 7 ಜೀವಂತ ನಾಡಬಾಂಬ್‌ ಪತ್ತೆ: ಓರ್ವನ ಬಂಧನ

ಹಾವೇರಿ: ಹಾನಗಲ್ ತಾಲೂಕಿನ ಆಡೂರು ಪೊಲೀಸರು ಕಾರ್ಯಾಚರಣೆ ನಡೆಸಿ 7 ಜೀವಂತ ನಾಡ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಡ ಬಾಂಬ್ ಇಟ್ಟಿದ್ದ ಆರೋಪದಡಿ ದುರ್ಗಪ್ಪ ತುರಬಿಗುಡ್ಡ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಡು ಹಂದಿ ಬೇಟೆಯಾಡುವ ಉದ್ದೇಶದಿಂದ ಕುಸನೂರು ಅರಣ್ಯ ಪ್ರದೇಶದಲ್ಲಿ ಈತ ನಾಡ ಬಾಂಬ್‌ಗಳನ್ನು ಇಟ್ಟಿದ್ದ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

police taken 7 country made bomb into custody in haveri
ಪತ್ತೆಯಾದ 7 ಜೀವಂತ ನಾಡಬಾಂಬ್‌

ಪ್ರತ್ಯೇಕ ಪ್ರಕರಣ- ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್​ಮೇಲ್ ಮಾಡಿದ ಯುವಕನ ಬಂಧನ: ಇತ್ತೀಚಿಗೆ, ಬಟ್ಟೆ ಅಂಗಡಿಗೆ ಬಂದಿದ್ದ ಯುವತಿಯ ಖಾಸಗಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡಿದ್ದ ಆರೋಪಿಯನ್ನು ಜಿಲ್ಲೆಯ ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದರು. ಮೈನುದ್ದೀನ್ ಮುಂಡಗೋಡ ಬಂಧೀತ ಆರೋಪಿ. ಹಾನಗಲ್ ತಾಲೂಕಿನ ಗ್ರಾಮವೊಂದರ ಯುವತಿ ಬಟ್ಟೆ ಖರೀದಿಗಾಗಿ ಹಾನಗಲ್‌ ಪಟ್ಟಣದಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಟ್ರಯಲ್ ರೂಮಿನಲ್ಲಿ ಇದ್ದಾಗ ಯುವತಿಯ ಅರಿವಿಗೆ ಬಾರದಂತೆ ಆಕೆಯ ಖಾಸಗಿ ಫೋಟೋವನ್ನು ಆರೋಪಿ ಮೈನುದ್ದೀನ ಸೆರೆಹಿಡಿದಿದ್ದ. ಬಳಿಕ ಯುವತಿಗೆ ಕರೆ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ ಎಂದು ದೂರು ನೀಡಲಾಗಿತ್ತು.

ಅಲ್ಲದೇ, ಯುವತಿಯ ಮೊಬೈಲ್‌ ಕರೆ ಮಾಡಿರುವ ಆರೋಪಿ, ಆಕೆಗೆ ನಗ್ನವಾಗಿ ವಿಡಿಯೋ ಕಾಲ್ ಮಾಡುವಂತೆ ಬೆದರಿಸಿ ಕಿರುಕುಳ ನೀಡಿದ್ದಾನೆ. ಜೊತೆಗೆ, ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿರುವ ಯುವಕ, ಯುವತಿ ಕಡೆಯಿಂದ 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಿತ್ತುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ವಿಜಯಪುರ: ದೇಹ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.