ETV Bharat / state

ನವೀನ್​ ಕುಟುಂಬಸ್ಥರಿಗೆ ಪ್ರಧಾನಿ ಸಾಂತ್ವನ; ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿಗಳ ನೆರವಿಗೆ ಮನವಿ

author img

By

Published : Jun 20, 2022, 6:33 PM IST

Updated : Jun 20, 2022, 7:18 PM IST

ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದ ವೇದಿಕೆ ಹಿಂಭಾಗದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಕುಟುಂಬಸ್ಥರನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಸಾಂತ್ವನ ಹೇಳಿದರು.

pm-nagendra-modi-meets-haveri-student-naveen-family
ನವೀನ್​ ಕುಟುಂಬಸ್ಥರಿಗೆ ಪ್ರಧಾನಿ ಮೋದಿ ಸಾಂತ್ವನ, ನಮೋಗೆ ಧನ್ಯವಾದ ತಿಳಿಸಿದ ಗ್ಯಾನಗೌಡರ

ಹಾವೇರಿ/ಬೆಂಗಳೂರು: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಯುದ್ಧದ ವೇಳೆ ಮೃತಪಟ್ಟ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸುವ ವೇಳಾಪಟ್ಟಿ ನಿಗದಿಯಾಗುತ್ತಿದ್ದಂತೆ ನವೀನ್ ಕುಟುಂಬ ಸದಸ್ಯರಿಗೆ ಪ್ರಧಾನಿ ಕಚೇರಿಯಿಂದ ಮಾಹಿತಿ ರವಾನಿಸಿ ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಬೆಂಗಳೂರಿಗೆ ಆಗಮಿಸಿದ್ದ ನವೀನ್ ಕುಟುಂಬ ಸದಸ್ಯರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು.

ಕೊಮ್ಮಘಟ್ಟದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದ ವೇದಿಕೆ ಹಿಂಭಾಗದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ತಂದೆ ಶೇಖರಗೌಡ ಗ್ಯಾನಗೌಡರ, ತಾಯಿ ವಿಜಯಲಕ್ಷ್ಮೀ ಮತ್ತು ಸಹೋದರ ಹರ್ಷನನ್ನು ಭೇಟಿ ಮಾಡಿದ ಮೋದಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಿಎಂ ಬಸವರಾಜ ಸಮ್ಮುಖದಲ್ಲಿ ಕೆಲಕಾಲ ಮಾತುಕತೆ ನಡೆಸಿ ಕುಟುಂಬಕ್ಕೆ ಧೈರ್ಯ ತುಂಬಿದರು. ನಂತರ ನವೀನ್ ಮೃತದೇಹವನ್ನು ತರಿಸಿಕೊಟ್ಟಿದ್ದಕ್ಕೆ ಕುಟುಂಬ ಸದಸ್ಯರು ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದರು.

ಶೇಖರಗೌಡ ಗ್ಯಾನಗೌಡರ ಮನವಿ: ಇದೇ ವೇಳೆ ಉಕ್ರೇನ್​ನಿಂದ ಮರಳಿದ ಭಾರತದ ಎಂಬಿಬಿಎಸ್ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ವ್ಯವಸ್ಥೆ ಮಾಡುವಂತೆ ಶೇಖರಗೌಡ ಗ್ಯಾನಗೌಡರ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು. ಈ ಬಗ್ಗೆ ಸಕಲ ಪ್ರಯತ್ನ ಮಾಡುವುವಾಗಿ ಪ್ರಧಾನಿ ತಿಳಿಸಿದರು. ಅಲ್ಲದೆ, ಶೇಖರಗೌಡ ಕುಟುಂಬಕ್ಕೆ ಪಿಎಂ ಧೈರ್ಯ ತುಂಬಿದರು. ಬಳಿಕ ನವೀನ್ ಸಹೋದರ ಪಿಎಂ ಜೊತೆ ತಮ್ಮ ಕುಟುಂಬ ಇರುವ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ನವೀನ್​, ಮಾರ್ಚ್ 1ರಂದು ಉಕ್ರೇನ್​ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದರು. ಎಲ್ಲ ರೀತಿಯ ರಾಜತಾಂತ್ರಿಕ ಪ್ರಯತ್ನ ನಡೆಸಿ ಕಡೆಗೂ ತವರಿಗೆ ನವೀನ್ ಮೃತದೇಹ ತರಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿತ್ತು.

ಇದನ್ನೂ ಓದಿ: ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧ: ಮೋದಿ

Last Updated : Jun 20, 2022, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.