ETV Bharat / state

ಓದಲು ಸರಿಯಾದ ಕಟ್ಟಡವೇ ಇಲ್ಲ: ವಿದ್ಯಾರ್ಥಿಗಳಿಗೆ ಬಯಲಲ್ಲೇ ಪಾಠ

author img

By

Published : Jul 1, 2022, 2:55 PM IST

ಕೊಠಡಿಯಿಲ್ಲದ ಕಾರಣ ಹುಲ್ಲತ್ತಿ ತಾಂಡಾದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇನ್ನು ಕೆಲವರು ಮಕ್ಕಳನ್ನು ಶಾಲೆ ಬಿಡಿಸಿ ರಾಣೆಬೆನ್ನೂರು ನಗರದ ಶಾಲೆಗಳಿಗೆ ಕಳುಹಿಸಲಾಗುತ್ತಿದೆ. ಬಯಲಿನಲ್ಲಿ ಪಾಠ ಕೇಳುವುದಲ್ಲದೇ ಮಕ್ಕಳು ಬಯಲಿನಲ್ಲಿ ಭೋಜನ ಮಾಡುತ್ತಾರೆ. ಗ್ರಾಮದ ಕಸಕಡ್ಡಿ ಎಲ್ಲ ಶಾಲೆಯ ಪಕ್ಕದಲ್ಲಿ ಹಾಕುವುದರಿಂದ ಮಕ್ಕಳು ಊಟ ಮಾಡುವಾಗ ಕಸ ಬೀಳುತ್ತದೆ. ಜೊತೆಗೆ ಚೇಳು ಜರಿಗಳ ಕಾಟ ಸೇರಿದಂತೆ ವಿಷ ಜಂತುಗಳ ಬಯದಿಂದ ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದಾರೆ.

ಬಯಲಿನಲ್ಲಿ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
ಬಯಲಿನಲ್ಲಿ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕು ಹುಲ್ಲತ್ತಿ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಇದೀಗ ಬಯಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಹಳೆಯ ಕಟ್ಟಡದಲ್ಲಿ ಆರಂಭವಾಗಿತ್ತು. ಆದರೆ, ಮೊದಲೇ ಹಳೆಯದಾಗಿದ್ದ ಕಟ್ಟಡ ಕುಸಿದ ಹಲವು ವರ್ಷಗಳೇ ಕಳೆದಿವೆ. ಹೊಸ ಶಾಲೆ ನಿರ್ಮಾಣವಾಗಿಲ್ಲ. ಹೀಗಾಗಿ ಶಾಲೆಯ ಸುಮಾರು 40 ಮಕ್ಕಳಿಗೆ ಬಯಲೇ ಶಾಲೆಯಾಗಿದೆ.

ಬಿಸಿಲಿದ್ದರೆ ಗಿಡದ ನೆರಳು, ಮಳೆಯಾದರೆ ಪಕ್ಕದ ದೇವಸ್ಥಾನದಲ್ಲಿ ಈ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಯಾವುದಾದರೂ ಧಾರ್ಮಿಕ ಕಾರ್ಯಕ್ರಮವಿದ್ದರೆ ಶಾಲೆಗೆ ರಜೆ ಘೋಷಿಸಲಾಗುತ್ತದೆ. ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ 40 ವಿದ್ಯಾರ್ಥಿಗಳಿದ್ದಾರೆ. ಶಾಲಾ ಆವರಣದಲ್ಲಿ ಒಂದೇ ಒಂದು ಕೊಠಡಿ ಇದೆ.

ಪಾಕಶಾಲೆ ಎಂದು ಕರೆಯಲ್ಪಡುವ ಈ ಕೊಠಡಿಯೇ ಮುಖ್ಯೋಪಾಧ್ಯಾಯರ ಕಚೇರಿ ಮತ್ತು ಅಡುಗೆ ಕೋಣೆಯಾಗಿ ಮಾಡಲಾಗಿದೆ. ಅಲ್ಲಿ ಶಾಲಾ ಮಕ್ಕಳು ಮತ್ತು ಶಾಲೆಗೆ ಸಂಬಂಧಿಸಿದ ಕಾಗದ ಪಾತ್ರಗಳು, ಅಡುಗೆ ತಯಾರಿಸುವ ಪಾತ್ರೆಗಳು, ರೇಷನ್ ತುಂಬಿರುವುದರಿಂದ ಅಲ್ಲಿಯೂ ಮಕ್ಕಳಿಗೆ ಕುಳಿತು ಪಾಠ ಆಲಿಸೋಕೆ ಆಗೋದಿಲ್ಲ. ಶಾಲೆಗೆ ಕಟ್ಟಡವಿಲ್ಲದ ಕಾರಣ ಶೌಚಾಲಾಯ ಸಹ ಇಲ್ಲ. ಪರಿಣಾಮ ಮಕ್ಕಳು ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಅನಿವಾರ್ಯವಾಗಿದೆ.


ಕೊಠಡಿಯಿಲ್ಲದ ಕಾರಣ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇನ್ನು ಕೆಲವರು ಮಕ್ಕಳನ್ನ ಶಾಲೆ ಬಿಡಿಸಿ ರಾಣೆಬೆನ್ನೂರು ನಗರದ ಶಾಲೆಗಳಿಗೆ ಕಳುಹಿಸಲಾಗುತ್ತಿದೆ. ಬಯಲಿನಲ್ಲಿ ಪಾಠ ಕೇಳುವುದಲ್ಲದೇ ಮಕ್ಕಳು ಬಯಲಿನಲ್ಲಿ ಭೋಜನ ಮಾಡುತ್ತಾರೆ. ಗ್ರಾಮದ ಕಸಕಡ್ಡಿ ಎಲ್ಲ ಶಾಲೆಯ ಪಕ್ಕದಲ್ಲಿ ಹಾಕುವುದರಿಂದ ಮಕ್ಕಳು ಊಟ ಮಾಡುವಾಗ ಕಸ ಬೀಳುತ್ತದೆ. ಜೊತೆಗೆ ಚೇಳು ಜರಿಗಳ ಕಾಟ ಸೇರಿದಂತೆ ವಿಷ ಜಂತುಗಳ ಬಯದಿಂದ ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದಾರೆ.

ಈ ಕುರಿತಂತೆ ರಾಣೆಬೆನ್ನೂರು ಶಾಸಕ ಅರುಣಕುಮಾರ್ ಪೂಜಾರ್‌ಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಸ್ಪಂದಿಸಿದ ಶಾಸಕರು ಹೊಸ ಕಟ್ಟಡಕ್ಕೆ ಚಾಲನೆ ನೀಡಿದ್ದಾರೆ. ಆದರೆ ಆ ಕಟ್ಟಡ ಪೂರ್ಣಗೊಳ್ಳಲು ಹಲವು ತಿಂಗಳುಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಶಾಲೆಯ ವಿದ್ಯಾರ್ಥಿಗಳು ಎಲ್ಲಿ ವ್ಯಾಸಂಗ ಮಾಡಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಶಾಲೆಯ ಹೊಸಕಟ್ಟಡ ಪೂರ್ಣವಾಗುವವರೆಗೆ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಬೇಕಿದೆ.

ಇದನ್ನೂ ಓದಿ: ರೋಗಿಗಳಿಗಿಂತ ವೈದ್ಯರೇ ಹೆಚ್ಚು ಒತ್ತಡದಲ್ಲಿದ್ದಾರೆ: ಡಾ.ಸಿ.ಎನ್ ಮಂಜುನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.