ETV Bharat / state

ವಿಶೇಷಚೇತನ ಮಹಿಳೆಗೆ ದಕ್ಕದ ನೆರೆ ಪರಿಹಾರ... ತಹಶೀಲ್ದಾರ್​​ ವಿರುದ್ಧ ಆಕ್ರೋಶ

author img

By

Published : Feb 28, 2020, 9:54 PM IST

ತಾಲೂಕಿನ ಕಾಕೋಳ ತಾಂಡದ ಕಮಲವ್ವ ಲಮಾಣಿ ಎಂಬ ವಿಶೇಷಚೇತನ ‌ಮಹಿಳೆಯ ಮನೆ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಸರಿಯಾದ ವರದಿ ಸಲ್ಲಿಸದೆ ಅನ್ಯಾಯ ಮಾಡಿದ್ದಾರೆ ಎಂದು ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ಹೊಹಾಕಿದರು.

no-release-to-flood-relief-fund-for-handicap-women
ವಿಶೇಷ ಚೇತನ ಮಹಿಳೆಗೆ ದಕ್ಕದ ನೆರೆ ಪರಿಹಾರ

ರಾಣೆಬೆನ್ನೂರ: ನೆರೆ ಪರಿಹಾರ ವಿತರಣೆಯಲ್ಲಿ ವಿಶೇಷಚೇತನ ಫಲಾನುಭವಿಗೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ತಾಪಂ ಸದಸ್ಯ ರೂಪ್ಲೆಪ್ಪ ಲಮಾಣಿ ತಹಶೀಲ್ದಾರ್​ ವಿರುದ್ಧ ಆರೋಪ ಮಾಡಿದರು.

ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಗೆ ವಿಶೇಷಚೇತನ ‌ಫಲಾನುಭವಿಯನ್ನು ಕರೆಸಿಕೊಂಡು ಅವರ ಸ್ಥಿತಿಯನ್ನು ಎಲ್ಲಾ ಅಧಿಕಾರಿಗಳಿಗೆ ತೋರಿಸಿದರು. ತಾಲೂಕಿನ ಕಾಕೋಳ ತಾಂಡದ ಕಮಲವ್ವ ಲಮಾಣಿ ಎಂಬ ವಿಶೇಷಚೇತನ ‌ಮಹಿಳೆಯ ಮನೆ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಸರಿಯಾದ ವರದಿ ಸಲ್ಲಿಸದೆ ಅನ್ಯಾಯ ಮಾಡಿದ್ದಾರೆ.

ತಹಶೀಲ್ದಾರರಿಗೂ ಹಿಂದಿನ ಸಭೆಯಲ್ಲಿ ಈ ಫಲಾನುಭವಿಗೆ ಅನ್ಯಾಯವಾಗಿರುವ ಬಗ್ಗೆ ಮನವರಿಕೆ ಮಾಡಲಾಗಿತ್ತು. ಆದರೆ ಅವರಿಂದ ಯಾವುದೇ ರೀತಿಯ ಸಕಾರಾತ್ಮಕ ಪರಿಹಾರ ದೊರೆತಿಲ್ಲ. ಅವರು ಈ ಸಭೆಗೆ ಆಗಮಿಸಿ ಸೌಲಭ್ಯ ವಂಚಿತ ಫಲಾನುಭವಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಕೂಡ ಧ್ವನಿಗೂಡಿಸಿ ತಹಶೀಲ್ದಾರ್​​ ಬರಬೇಕು ಎಂದು ಪಟ್ಟು ಹಿಡಿದರು.

ವಿಶೇಷ ಚೇತನ ಮಹಿಳೆಗೆ ದಕ್ಕದ ನೆರೆ ಪರಿಹಾರ

ನಂತರ ತಾಲೂಕು ಪಂಚಾಯತ್​​​ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ ಸಭೆಯಲ್ಲಿ ತಹಶೀಲ್ದಾರ್​ಗೆ ಫೋನ್ ಮಾಡಿ ವಾಸ್ತವ ಮನವರಿಕೆ ಮಾಡಿದರು. ಆದರೆ ತಹಶೀಲ್ದಾರ್​ ಬಸನಗೌಡ ಕೊಟೂರ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೆರೆ ಪರಿಹಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ವಂಚಿತ ಫಲಾನುಭವಿಗೆ ಪರಿಹಾರ ನೀಡುವಂತೆ ಶ್ರಮ ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.