ETV Bharat / state

ಸುಳ್ಳು ಹೇಳುವುದೇ ಕಾಂಗ್ರೆಸ್​ ಪಕ್ಷದವರ ಡಿಎನ್ಎ : ಸಂಸದ ಶಿವಕುಮಾರ್ ಉದಾಸಿ

author img

By

Published : Oct 13, 2021, 7:11 PM IST

ಕಾಂಗ್ರೆಸ್ ನಾಯಕರ ಕಮಿಷನ್ ವಿಚಾರದ ಬಗ್ಗೆ ತಾನು ಮಾತನಾಡುವುದಿಲ್ಲ ಎಂದು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.

mp-shivakumar-udasi
ಸಂಸದ ಶಿವಕುಮಾರ್ ಉದಾಸಿ

ಹಾವೇರಿ: ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಆದರೆ, ಅದರ ನಾಯಕರು ನೀಡುವ ಹೇಳಿಕೆ ನೋಡಿದರೆ ಅವರಿಗೆ ಹತಾಶೆಯಾಗಿದೆ ಅಂತಾ ಅನ್ನಿಸುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯಪಟ್ಟಿದ್ದಾರೆ.

ಸಂಸದ ಶಿವಕುಮಾರ್ ಉದಾಸಿ

ಜಿಲ್ಲೆ ಹಾನಗಲ್‌ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆ ಕಾಣ್ತಿದೆ. ಅವರ ಟ್ರಂಪ್ ಕಾರ್ಡ್ ಅಂದರೆ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು ಎಂದು ಆರೋಪಿಸಿದರು.

ಸಂಸದ ಶಿವಕುಮಾರ್ ಉದಾಸಿ

ಕಾಂಗ್ರೆಸ್​ನಲ್ಲಿ ಹ್ಯಾಬುಚವಲ್ ಅಪೆಂಡರ್ಸ್ ಸಂಸ್ಕೃತಿ ಇದೆ. ಸುಳ್ಳು ಹೇಳುವುದೇ ಅವರ ಡಿಎನ್ಎ. ಅವರ ಡಿಸೈನ್ ಡಿಎನ್ಎ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಜಯಭೇರಿ ಬಾರಿಸಲಿದ್ದಾರೆ. ಇದೇ 17 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಪಕ್ಷದ ಅಭ್ಯರ್ಥಿಪರ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸಂಸದ ಶಿವಕುಮಾರ್ ಉದಾಸಿ

ಓದಿ: ಶರನ್ನವರಾತ್ರಿ ಸಂಭ್ರಮ: ಅರಮನೆ ಆವರಣದಲ್ಲಿನ ಧಾರ್ಮಿಕ ಕೈಂಕರ್ಯಗಳ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.