ETV Bharat / state

ಗ್ರಾಮ ಪಂಚಾಯತ್​ಗಳಿಂದ ನರೇಗಾ ಕಾಮಗಾರಿಗೆ ಯಂತ್ರಗಳ ಬಳಕೆ: ದುಡಿಯುವ ಜನರಿಗಿಲ್ಲ ಕೆಲಸ

author img

By

Published : Jul 3, 2020, 12:34 PM IST

ಬಡಜನರಿಗೆ ಕೆಲಸ ನೀಡಲು ಕೇಂದ್ರ ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿದೆ. ಆದ್ರೆ, ಈ ಕಾಮಗಾರಿ ನಡೆಸಲು ಜನರ ಬದಲಿಗೆ ಯಂತ್ರಗಳನ್ನ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

machine
ಯಂತ್ರ

ರಾಣೆಬೆನ್ನೂರು(ಹಾವೇರಿ): ರಾಣೆಬೆನ್ನೂರು ತಾಲೂಕಿನ ಗ್ರಾಮ ಪಂಚಾಯತ್​ ವ್ಯಾಪ್ತಿಗಳಲ್ಲಿ ನರೇಗಾ ಕಾಮಗಾರಿಗಳನ್ನು ನಡೆಸಲು ಬಹುತೇಕ ಯಂತ್ರಗಳನ್ನು ಬಳಸುತ್ತಿರುವುದು ಕಂಡು ಬಂದಿದೆ.

ಯಂತ್ರಗಳಿಂದ ಮನರೇಗಾ ಕಾಮಗಾರಿ ಮಾಡಿಸುತ್ತಿರುವ ದೃಶ್ಯ

ರಾಣೆಬೆನ್ನೂರು ವ್ಯಾಪ್ತಿಯ 40 ಗ್ರಾಮ ಪಂಚಾಯತ್​ ವ್ಯಾಪ್ತಿಗಳಲ್ಲಿ ನರೇಗಾ ಕಾಮಗಾರಿಗಳು ನಡೆಯತ್ತಿವೆ. ರಾಜ್ಯ ಸರ್ಕಾರ ಲಾಕ್​ಡೌನ್ ನಡುವೆ ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರಿಗೆ ನರೇಗಾ ಕೆಲಸವನ್ನು ಎಲ್ಲರಿಗೂ ನೀಡಬೇಕು ಎಂದು ಆದೇಶ ಹೊರಡಿಸಿದೆ. ಆದರೆ ಕೆಲ ಗ್ರಾಮ ಪಂಚಾಯತ್​ಗಳಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಬಳಸಿಕೊಂಡು ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ, ರಾಹುತನಕಟ್ಟಿ, ಹೊನ್ನತ್ತಿ, ಬೇಲೂರು ಗ್ರಾಮ ಪಂಚಾಯತ್​ನಲ್ಲಿ ಲಕ್ಷಾಂತರ ರೂ.ಗಳ ನರೇಗಾ ಕಾಮಗಾರಿಗಳನ್ನು ಯಂತ್ರಗಳ ಮೂಲಕ ಮಾಡಲಾಗ್ತಿದ್ದು, ಜನರಿಗೆ ಕೆಲಸಗಳು ಇಲ್ಲದಂತಾಗಿದೆ.

ಮನರೇಗಾ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರ ಬದಲಿಗೆ ಯಂತ್ರೋಪಕರಣ ಬಳಸುತ್ತಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಗ್ರಾಮ ಪಂಚಾಯತ್​ ಪಿಡಿಒ ಮತ್ತು ಇಒಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

ಈ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ, ಗ್ರಾಮ ಪಂಚಾಯತ್​ನಲ್ಲಿ ಮನರೇಗಾ ಕಾಮಗಾರಿಗಳು ಯಂತ್ರಗಳಿಂದ ನಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಇದರ ಬಗ್ಗೆ ತನಿಖೆ ಮಾಡುವಂತೆ ಸಿಇಒ ಅವರಿಗೆ ತಿಳಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.