ETV Bharat / state

ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ ಹಾವೇರಿ ಪೊಲೀಸರಿಂದ ಜನ ಜಾಗೃತಿ

author img

By

Published : Apr 20, 2021, 7:54 AM IST

ಕೋವಿಡ್​ ಎರಡನೇ ಅಲೆ ಹೆಚ್ಚಾಗುತ್ತಿದ್ದು ಸರ್ಕಾರ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿದ್ದಾರೆ.

masks Awareness
ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಿದ ಹಾವೇರಿ ಪೊಲೀಸರು

ಹಾವೇರಿ: ನಗರದಲ್ಲಿ ಮಾಸ್ಕ್‌ ಧರಿಸದೇ ಸಂಚರಿಸುವ ದ್ವಿಚಕ್ರವಾಹನ ಸವಾರರನ್ನು ತಡೆಯುವ ಪೊಲೀಸರು ದಂಡ ವಸೂಲಿ ಮಾಡುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.

ಮಾಸ್ಕ್ ಹಾಕದವರಿಗೆ ದಂಡ

ರಾಜ್ಯದಲ್ಲಿ ನಿರಂತರವಾಗಿ ಏರುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಸಹ ಜನರು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಕೋವಿಡ್​ ಎರಡನೇ ಅಲೆ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಪ್ರವೃತ್ತರಾಗಿರುವ ಹಾವೇರಿ ಪೊಲೀಸರು, ನಿಯಮ ಪಾಲಿಸದ ಸವಾರರಿಗೆ 100 ರೂ. ದಂಡ ವಿಧಿಸುತ್ತಿದ್ದಾರೆ.

ಇದ್ರ ಜೊತೆಗೆ, ವಿನಾಕಾರಣ ಮನೆಯಿಂದ ಹೊರ ಬರದಂತೆ, ಗುಂಪು ಸೇರದಂತೆ ಹಾಗೂ ಮತ್ತೆ ಲಾಕ್​ಡೌನ್ ಆಗದಂತೆ ಎಚ್ಚರ ವಹಿಸಲು ಮನವಿ ಮಾಡಿದರು.

ಇದನ್ನೂ ಓದಿ: ಕಲಬುರಗಿಯಲ್ಲಿ 513 ಕೋವಿಡ್ ಸೋಂಕಿತರು ಪತ್ತೆ, 6 ಜನ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.