ETV Bharat / state

ಹಾನಗಲ್- ಸಿಂದಗಿ ಉಪಚುನಾವಣೆ: ಬಿರುಸುಗೊಂಡ ಮತದಾನ

author img

By

Published : Oct 30, 2021, 9:13 AM IST

Updated : Oct 30, 2021, 1:51 PM IST

by election
by election

13:48 October 30

ಮಧ್ಯಾಹ್ನದ ವರೆಗೆ ನಡೆದ ಶೇಕಡಾವಾರು ಮತದಾನ

  • ಸಿಂದಗಿ - 32.49% 
  • ಹಾನಗಲ್- 44.59% ಮತದಾನವಾಗಿದೆ.

11:49 October 30

ಇಲ್ಲಿಯವರೆಗೆ ನಡೆದ ಮತದಾನ:

  • ಸಿಂದಗಿ - 26.75% ಮತದಾನವಾಗಿದೆ
  • ಹಾನಗಲ್- 24.31% ಮತದಾನವಾಗಿದೆ

11:48 October 30

ಮತದಾನ ಮಾಡಿದ ಶಿವಕುಮಾರ್ ಉದಾಸಿ

ಹಾವೇರಿ: ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಬಿರುಸುಗೊಂಡಿದೆ. ಸಂಸದ ಶಿವಕುಮಾರ್ ಉದಾಸಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.

ಹಾನಗಲ್ ಪಟ್ಟಣದ ಜನತಾ ಗರ್ಲ್ಸ್ ಪಬ್ಲಿಕ್ ಸ್ಕೂಲ್ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ  ಸಂಸದ ಶಿವಕುಮಾರ್​ ಉದಾಸಿ ಮತದಾನ ಮಾಡಿದರು. ತಾಯಿ ನೀಲಮ್ಮ, ಪತ್ನಿ ರೇವತಿ ಮತ್ತು ಮಗಳು ಪಾವನಾ ಜೊತೆ ಆಗಮಿಸಿದ ತಮ್ಮ ಮತದಾನದ ಹಕ್ಕು  ಚಲಾಯಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಶಿವರಾಜ್​ ಸಜ್ಜನರ ಅಧಿಕ ಮತಗಳಿಂದ ಜಯಭೇರಿ ಬಾರಿಸುವ ವಿಶ್ವಾಸ ವ್ಯಕ್ತಪಡಿಸಿದರು.

11:25 October 30

ವಿಜಯಪುರ: ಸಿಂದಗಿ ತಾಲೂಕಿನ ದೇವಣಗಾಂವ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಹಾಗೂ ಗಣಿಹಾರ ಗ್ರಾಮದ ಮತಗಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಮತ ಚಲಾಯಿಸಿದರು.

11:05 October 30

ಮತ ಚಲಾಯಿಸಿದ 90 ವರ್ಷದ ವೃದ್ಧೆ

ವಿಜಯಪುರ: ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತಕ್ಷೇತ್ರದ ಚಾಂದಕವಡೆ ಗ್ರಾಮದ ಮತಗಟ್ಟೆ142 ರಲ್ಲಿ 90 ವರ್ಷದ ವೃದ್ಧೆ ಗುರುಬಾಯಿ ಉಡುಚಣ ಅವರನ್ನು ಮಗ ಹಾಗೂ ಮೊಮ್ಮಗ ಬೈಕ್​ನಲ್ಲಿ ಕರೆದುಕೊಂಡು, ಮತ ಚಲಾಯಿಸಲು ಸಹಾಯ ಮಾಡಿದರು.  

ಇನ್ನು ಮತ ಚಲಾವಣೆಗೆ ಅನುಕೂಲವಾಗಲೆಂದು ನೀಡುವ ಚೀಟಿಯಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ಹೆಸರು, ಚಿಹ್ನೆ ಇರುವುದನ್ನು ನೋಡಿ ಮತದಾರರು ಕೆಲ ಆಕ್ರೋಶ ವ್ಯಕ್ತಪಡಿಸಿದರು.

10:48 October 30

ಮತದಾನ ಮಾಡಿದ ಕಾಂಗ್ರೆಸ್​, ಜೆಡಿಎಸ್ ಅಭ್ಯರ್ಥಿಗಳು

ಹಾವೇರಿ: ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಆರಂಭವಾಗಿದೆ. ಮತದಾರರು ಮುಂಜಾನೆಯಿಂದಲೇ ಮತಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.  

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಹಾನಗಲ್ ಪಟ್ಟಣದ ಪದವಿ ಪೂರ್ವ ಕಾಲೇಜಿನ ಮತಗಟ್ಟೆ 89ರಲ್ಲಿ ಮತದಾನ ಮಾಡಿದರು. ಪತ್ನಿ ಉಷಾ ಜೊತೆ ಆಗಮಿಸಿ ಕೈ ಅಭ್ಯರ್ಥಿ ತಮ್ಮ ಹಕ್ಕು ಚಲಾಯಿಸಿದರು.  

ಇನ್ನು ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ತಮ್ಮ ಸಂಗಡಿಗರ ಜೊತೆ ಆಗಮಿಸಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಮತ ಹಾನಗಲ್ ಕ್ಷೇತ್ರದಲ್ಲಿ ಇಲ್ಲದ ಕಾರಣ ಮತಗಟ್ಟಿಗಳಿಗೆ ತೆರಳಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಮತದಾರರು ಮುಂಜಾನೆ 7 ರಿಂದ ಉತ್ಸುಕರಾಗಿ ಮತದಾನ ಮಾಡುತ್ತಿದ್ದಾರೆ. ವಿಕಲಚೇತನರು, ವಯೋವೃದ್ಧರು ಸಹ ಮತ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.  

ಕ್ಷೇತ್ರದ ಮೂರು ಮತಕೇಂದ್ರಗಳಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ವಿಳಂಬವಾಗಿ ಆರಂಭವಾಯಿತು. ಕ್ಷೇತ್ರದ 263  ಮತಗಟ್ಟಿಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಮುಂಜಾನೆ 9ಗಂಟೆಗೆ ಪ್ರತಿಶತ 8.77 ರಷ್ಟು ಮತದಾನವಾಗಿದೆ.

09:03 October 30

ಮುಸ್ಲಿಂ ಹಾಗೂ ಹಿಂದೂ ಮಹಿಳೆಯರಿಂದ ಪೂಜೆ

ವಿಜಯಪುರ: ಸಿಂದಗಿ ಉಪ ಚುನಾವಣೆಗೆ ಮತದಾನ ಆರಂಭವಾಗಿದ್ದು, ತಾಲೂಕಿನ ಆಲಮೇಲದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಪರ ಪೂಜೆ ಮಹಿಳೆಯರು ಮತಗಟ್ಟೆಗೆ ಪೂಜೆ ಸಲ್ಲಿಸಿದರು. ರಮೇಶ್​ ಭೂಸನೂರ್ ಸಹೋದರಿ ಪ್ರಭಾವತಿ ಪೂಜೆ ಸಲ್ಲಿಸಿದರು.‌ ಈ ವೇಳೆ ಮುಸ್ಲಿಂ ಹಾಗೂ ಹಿಂದೂ ಮಹಿಳೆಯರು ಉಪಸ್ಥಿತರಿದ್ದರು.  

ಒಟ್ಟು ಸಿಂದಗಿ ಮತಕ್ಷೇತ್ರದಲ್ಲಿ 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.‌ ಒಟ್ಟು 2,34,584 ಮತದಾರರಿದ್ದು, 1,20,844 - ಪುರುಷರು ಮತ್ತು 1,13,561 - ಮಹಿಳೆಯರು, ಇತರೆ 32 ಜನರಿದ್ದಾರೆ.

08:23 October 30

ಉಪಚುನಾವಣೆ ಮತದಾನ ಆರಂಭ

ಹಾವೇರಿಯಲ್ಲಿ ಮತದಾನ ಆರಂಭ
ಹಾವೇರಿಯಲ್ಲಿ ಮತದಾನ ಆರಂಭ

ಹಾವೇರಿ/ವಿಜಯಪುರ: ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಆರಂಭವಾಗಿದೆ. ಮುಂಜಾನೆ 7 ಗಂಟೆಯಿಂದ ಆರಂಭವಾದ ಮತದಾನಕ್ಕೆ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.  

ಜಿಲ್ಲೆಯ ಹಾನಗಲ್ ತಾಲೂಕಿನ ಕೂಡಲ ಗ್ರಾಮದ ಮತಕೇಂದ್ರದಲ್ಲಿ ಕೂಡಲ ಗುರುನಂಜೇಶ್ವರ ಮಠದ ಮಹೇಶಸ್ವಾಮೀಜಿ ಮತದಾನ ಮಾಡಿದರು. ಮತಗಟ್ಟಿಯಲ್ಲಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್​ ನಿಯಮಗಳನ್ನು ಅನುಸರಿಸಲಾಗುತ್ತಿದೆ. ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ್ ಸಜ್ಜನ್ ಮತ್ತು ಸಿಂಧಗಿ ಕ್ಷೇತ್ರಕ್ಕೆ ರಮೇಶ್ ಭೂಸನೂರು ಸ್ಪರ್ಧಿಸಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಶ್ರೀನಿವಾಸ ಮಾನೆ ಮತ್ತು ಸಿಂಧಗಿ ಕ್ಷೇತ್ರಕ್ಕೆ ಅಶೋಕ್​ ಸ್ಪರ್ಧಿಸಿದ್ದಾರೆ.

Last Updated : Oct 30, 2021, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.