ETV Bharat / state

ಹಾವೇರಿ : ಜಿಂಕೆ ಕಳೇಬರ, ನವಿಲಿನ ರೆಕ್ಕೆಪುಕ್ಕಗಳು ಪತ್ತೆ.. ಚಿರತೆ ದಾಳಿ ಶಂಕೆ

author img

By

Published : Jul 8, 2023, 10:09 AM IST

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಬಳಿ ಇರುವ ವರದಾ ನದಿ ದಡದಲ್ಲಿ ಜಿಂಕೆ ಕಳೇಬರ ಮತ್ತು ನವಿಲಿನ ರೆಕ್ಕೆ ಪುಕ್ಕಗಳು ಪತ್ತೆಯಾಗಿದ್ದು, ಚಿರತೆ ದಾಳಿ ನಡೆಸಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

deer-found-dead-near-varada-river-haveri-people-suspect-leopard-attack
ಹಾವೇರಿ : ಜಿಂಕೆ ಕಳೇಬರ, ನವಿಲಿನ ರೆಕ್ಕೆಪುಕ್ಕಗಳು ಪತ್ತೆ... ಚಿರತೆ ದಾಳಿ ಶಂಕೆ

ಹಾವೇರಿ : ಇಲ್ಲಿನ ವರದಾ ನದಿ ದಡದಲ್ಲಿ ಜಿಂಕೆಯ ಕಳೇಬರ ಮತ್ತು ನವಿಲಿನ ರೆಕ್ಕೆಪುಕ್ಕಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಬಳಿ ಇರುವ ವರದಾ ನದಿಯ ದಡದಲ್ಲಿ ಅರ್ಧ ತಿಂದು ಬಿಟ್ಟಿರುವ ರೀತಿಯಲ್ಲಿ ಜಿಂಕೆಯ ಕಳೇಬರ ಮತ್ತು ನವಿಲಿನ ರೆಕ್ಕೆಪುಕ್ಕಗಳು ಪತ್ತೆಯಾಗಿವೆ.

ಅಲ್ಲದೇ ಸ್ಥಳದಲ್ಲಿ ಚಿರತೆಯನ್ನು ಹೋಲುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದನ್ನು ಕಂಡ ರೈತರು ಚಿರತೆ ದಾಳಿ ನಡೆಸಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ನರೇಗಲ್ ಗ್ರಾಮದ ಬಳಿ ಇರುವ ವರದಾ ನದಿ ದಂಡೆಯಲ್ಲಿ ರೈತರು ಕೃಷಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ರೈತರು ಜಮೀನಿಗೆ ನೀರು ಹಾಯಿಸಲು ಹೋಗುತ್ತಾರೆ. ಇದೀಗ ಜಿಂಕೆ ಕಳೇಬರ ಕಂಡಿರುವ ರೈತರು ಗ್ರಾಮದಲ್ಲಿ ಚಿರತೆ ಓಡಾಡುತ್ತಿದೆ ಎಂದು ಆತಂಕಗೊಂಡಿದ್ದಾರೆ. ಇದರಿಂದ ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಮತ್ತು ನವಿಲಿನ ಸಾವಿನ ಕಾರಣ ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಚಿರತೆ ಇದ್ದರೆ ಸೆರೆ ಕಾರ್ಯಾಚರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಚಾಮರಾಜನಗರದಲ್ಲಿ ಬಾಲಕಿ ಮೇಲೆ ಚಿರತೆ ದಾಳಿ : ಕಳೆದ ಕೆಲವು ದಿನಗಳ ಹಿಂದೆ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಚಿರತೆಯೊಂದು ದಾಳಿ ನಡೆಸಿರುವ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ನಡೆದಿತ್ತು. ಚಿರತೆ ದಾಳಿಯಿಂದಾಗಿ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸುಶೀಲಾ (6) ಚಿರತೆ ದಾಳಿಗೊಳಗಾದ ಬಾಲಕಿ.

ಹನೂರು ತಾಲೂಕಿನ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದ ಬಾಲಕಿ ಸುಶೀಲಾ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಚಿರತೆಯೊಂದು ಆಟವಾಡುತ್ತಿದ್ದ ಬಾಲಕಿ ಮೇಲೆ ದಾಳಿ ನಡೆಸಿತ್ತು. ಬಳಿಕ ಸುಮಾರು 200 ಮೀಟರ್ ದೂರಕ್ಕೆ ಎಳೆದೊಯ್ದಿತ್ತು.

ಈ ವೇಳೆ ಮಗುವಿನ ಚೀರಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ಯಾರೋ ಕಳ್ಳರು ಬಂದಿದ್ದಾರೆ. ಮಗುವನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂಬು ಭಾವಿಸಿದ್ದಾರೆ. ಈ ಸಂಬಂಧ ದೊಣ್ಣೆಗಳನ್ನು ಎತ್ತಿಕೊಂಡು ಬಂದಿದ್ದಾರೆ. ಗ್ರಾಮಸ್ಥರ ಕೂಗಾಟ - ಚೀರಾಟದಿಂದ ಬೆದರಿದ ಚಿರತೆ ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಕಾಡಿನತ್ತ ಪರಾರಿಯಾಗಿತ್ತು.

ಇನ್ನು, ಗ್ರಾಮಸ್ಥರು ಬಾಲಕಿಯನ್ನು ರಕ್ಷಿಸುವಷ್ಟರಲ್ಲಿ ಚಿರತೆ ಗಾಯಗೊಳಿಸಿತ್ತು. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ 108 ಆಂಬ್ಯುಲೆನ್ಸ್​ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ತುರ್ತು ವೈದ್ಯಕೀಯ ಸಿಬ್ಬಂದಿ ಮೂರ್ತಿ ಹಾಗೂ ಚಾಲಕ ಲಿಂಗರಾಜು ಪ್ರಥಮ ಚಿಕಿತ್ಸೆ ನೀಡಿ ಕಾಮಗೆರೆ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲು ಮಾಡಿದ್ದರು.

ಇದನ್ನೂ ಓದಿ : ಹೊಲದಲ್ಲಿ ಮಲಗಿದ್ದ ರೈತನ ಮೇಲೆ ಚಿರತೆ ದಾಳಿ : ಪ್ರಾಣಾಪಾಯದಿಂದ ಪಾರಾದ ರೈತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.