ETV Bharat / state

ಕೊಲೆ ಮಾಡಿ ಬಸ್​​ನಲ್ಲೇ ಶವ ಸುಟ್ಟವನಿಗೆ ಜೀವಾವಧಿ ಶಿಕ್ಷೆ

author img

By

Published : Feb 25, 2020, 7:28 PM IST

ಕೊಲೆ ಮಾಡಿ ಬಸ್​ನಲ್ಲಿ ಶವ ಸುಟ್ಟು ಹಾಕಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 11 ಸಾವಿರ ರೂಪಾಯಿ ದಂಡ ವಿಧಿಸಿ ರಾಣೆಬೆನ್ನೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್.ಜ್ಯೋತಿ ಶ್ರೀ ತಿರ್ಪು ಪ್ರಕಟಿಸಿದ್ದಾರೆ.

court-judgment
ಕೊಲೆ ಮಾಡಿ ಬಸ್ಸಿನಲ್ಲಿ ಸುಟ್ಟು ಹಾಕಿದ ಆರೋಪಿಗೆ ಜೀವಾವಧಿ ಶಿಕ್ಷೆ...!

ಹಾವೇರಿ: ಕೊಲೆ ಮಾಡಿ ಬಸ್​ನಲ್ಲಿ ಶವ ಸುಟ್ಟು ಹಾಕಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 11 ಸಾವಿರ ರೂಪಾಯಿ ದಂಡ ವಿಧಿಸಿ ರಾಣೆಬೆನ್ನೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್.ಜ್ಯೋತಿ ಶ್ರೀ ತಿರ್ಪು ಪ್ರಕಟಿಸಿದ್ದಾರೆ.

ಹಿರೆಕೇರೂರು ತಾಲೂಕಿನ ಅಂಗರಗಟ್ಟಿ ಗ್ರಾಮದ ಲಿಂಗರಾಜ ಬೆಳಗುತ್ತಿ ಜೀವಾವಧಿ ಶಿಕ್ಷೆಗೆ ಒಳಗಾದವ. ಈತ ಬೆಳಗುತ್ತಿ ರಾಣೆಬೆನ್ನೂರ ಬಸ್ ಡಿಪೋದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಜ. 1, 2017ರಂದು ಬಸ್​ಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಸುಟ್ಟ ಬಸ್​​ನೊಳಗೆ ಗುರುತು ಸಿಗದ ಮೃತದೇಹವೊಂದು ಪತ್ತೆಯಾಗಿತ್ತು. ಈ ಶವವನ್ನು ಲಿಂಗರಾಜ ತನ್ನದೇ ಎಂದು ಬಿಂಬಿಸಲು ತಂತ್ರ ರೂಪಿಸಿದ್ದನಂತೆ. ಆತನ ಪತ್ನಿ ಕೂಡ ಹಲಗೇರಿ ಪೊಲೀಸ್ ಠಾಣೆಯಲ್ಲಿ ಬಸ್​​ನಲ್ಲಿ ಸುಟ್ಟ ವ್ಯಕ್ತಿ ನನ್ನ ಗಂಡ ಎಂದು ಪ್ರಕರಣ ದಾಖಲಿಸಿದ್ದಳು.

ಪ್ರಕಣ ಕೈಗೆತ್ತಿಕೊಂಡ ಹಲಗೇರಿ ಪೊಲೀಸರು ತನಿಖೆ ಕೈಗೊಂಡರು. ಬಸ್​​ನಲ್ಲಿ ಸಿಕ್ಕ ಶವದ ರಕ್ತದ ಮಾದರಿ ಹಾಗೂ ಲಿಂಗರಾಜ ಬೆಳಗುತ್ತಿ ಮಗುವಿನ ರಕ್ತದ ಮಾದರಿಯನ್ನು ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಸತ್ತ ವ್ಯಕ್ತಿ ಹಾಗೂ ಮಗುವಿನ ರಕ್ತದ ಮಾದರಿಗೂ ಹೊಂದಾಣಿಕೆ ಬಂದಿಲ್ಲ. ಇದರಿಂದ ಬಸ್​​ನಲ್ಲಿ ಸಿಕ್ಕ ಮೃತದೇಹ ಲಿಂಗರಾಜನದಲ್ಲ ಎಂಬುದನ್ನು ತಿಳಿದ ಪೋಲಿಸರು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು.

ಆರೋಪಿ ಲಿಂಗರಾಜ ಬೆಳಗುತ್ತಿ ಪತ್ತೆಯಾದ ಬಳಿಕ ಡಿಪೋ ಬಸ್​ನಲ್ಲಿ ತನ್ನ ಸ್ವಂತ ಚಿಕ್ಕಪನಾದ ಚನ್ನಪ್ಪ ಬೆಳಗುತ್ತಿ ಎಂಬಾತನನ್ನ ಹತ್ಯೆ ಮಾಡಿ ಪರಾರಿಯಾಗಿದ್ದ. ನಂತರ ತನ್ನ ಸ್ವಇಚ್ಛೆಯಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರಿಂದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪ ಸಾಬೀತಾದ ಹಿನ್ನೆಲೆ ಲಿಂಗರಾಜು ಬೆಳಗುತ್ತಿಗೆ ಶಿಕ್ಷೆ ಮತ್ತು ದಂಡದ ಜೊತೆಗೆ ಸರ್ಕಾರಿ ಬಸ್ ಸುಟ್ಟಿದ್ದಕ್ಕೆ ಇಲಾಖೆಗೆ 8 ಲಕ್ಷ 30 ಸಾವಿರದ 554 ರೂಪಾಯಿ ಪರಿಹಾರ ಕೊಡುವಂತೆ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.