ETV Bharat / state

ಹಾವೇರಿ: ಆದಾಯದ ಕೊರತೆ ಇದ್ದರೂ ಈಜುಕೊಳ ನಡೆಸುತ್ತಿರುವ ಗುತ್ತಿಗೆದಾರರು

author img

By

Published : Dec 4, 2022, 9:02 AM IST

ಹಾವೇರಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಈಜುಕೊಳ ಪುನಾರಂಭವಾಗಿದ್ದು, ಇಲ್ಲಿಗೆ ಆಗಮಿಸುವ ಈಜುಪ್ರಿಯರ ಸಂಖ್ಯೆ ಕಡಿಮೆಯಾಗಿರುವುದರಿಂದ ಗುತ್ತಿಗೆದಾರರಿಗೆ ನಷ್ಟವುಂಟಾಗಿದೆ.

swimming pool
ಈಜುಕೊಳ

ಹಾವೇರಿ: ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿರುವ ಈಜುಕೊಳ ಕಾರ್ಯಾರಂಭಗೊಂಡಿದೆ. ಆದ್ರೆ, ಇಲ್ಲಿಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಗುತ್ತಿಗೆದಾರರಿಗೆ ನಿರ್ವಹಣೆ ಕಷ್ಟವಾಗುತ್ತಿದೆ.

ಉದ್ಘಾಟನೆಯಾಗಿ ದಶಕ ಕಳೆದಿರುವ ಈಜುಗೊಳ ಆರಂಭದಲ್ಲಿ ಹಲವು ತೊಡಕುಗಳನ್ನು ಎದುರಿಸಿತ್ತು. ಸ್ವಚ್ಛತೆ, ಫಿಲ್ಟರ್​, ನೀರಿನ ಸಮಸ್ಯೆ​ ಸೇರಿದಂತೆ ಅನೇಕ ಕಾರಣಗಳಿಂದ ಮುಚ್ಚಿ ಹೋಗಿತ್ತು. ಯುವಜನ ಮತ್ತು ಕ್ರೀಡಾ ಇಲಾಖೆಯ ಸುಪರ್ದಿಯಲ್ಲಿದ್ದ ಕೊಳ ಸರಿಯಾಗಿ ನಿರ್ವಹಣೆಯಾಗದ ಹಿನ್ನೆಲೆಯಲ್ಲಿ ಕೀರ್ತಿ ಎಂಟರ್‌ಪ್ರೈಸಸ್ ಎಂಬ ಕಂಪನಿಗೆ ಜಿಲ್ಲಾಡಳಿತ ಗುತ್ತಿಗೆ ನೀಡಿತ್ತು. ಕಂಪನಿಗೆ ಗುತ್ತಿಗೆ ನೀಡಿದ ಬಳಿಕ ಕೋವಿಡ್​ ಹಾವಳಿ ಪ್ರಾರಂಭವಾಯಿತು. ಬಳಿಕ ಅತಿಯಾದ ಮಳೆಯಿಂದ ಕಾರ್ಯಾರಂಭವಾಗಲಿಲ್ಲ. ಇದೀಗ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಮತ್ತೆ ಪುನಾರಂಭವಾಗಿದ್ದು, ಗುತ್ತಿಗೆದಾರರಿಗೆ ನಷ್ಟವುಂಟಾಗಿದೆ.

ಆದಾಯದ ಕೊರತೆ ಇದ್ದರೂ ಈಜುಕೊಳ ನಡೆಸುತ್ತಿರುವ ಗುತ್ತಿಗೆದಾರರು

ಇದನ್ನೂ ಓದಿ: ಉದ್ಘಾಟನೆಯಾಗಿ ವರ್ಷ ಕಳೆದರೂ ಸಾರ್ವಜನಿಕರಿಗೆ ಲಭ್ಯವಾಗದ ಸರ್ಕಾರಿ ಈಜುಕೊಳ

ಪ್ರತಿದಿನ ಈಜುಕೊಳ ಸ್ವಚ್ಛತೆ ಮಾಡಬೇಕು. ಸಿಬ್ಬಂದಿ ವೇತನಕ್ಕೆ ಎರಡು ಸಾವಿರ ರೂ. ಖರ್ಚಾಗುತ್ತಿದೆ. ಆದರೆ ಹಾವೇರಿ ನಗರವಾಸಿಗಳಿಗೆ ತೊಂದರೆಯಾಗಬಾರದು ಎಂದು ಆದಾಯದ ಕೊರತೆ ಇದ್ದರೂ ಈಜುಕೊಳ ನಡೆಸುತ್ತಿದ್ದೇವೆ. ಜೊತೆಗೆ ಜಿಲ್ಲಾಡಳಿತ ಸಹ ಗುತ್ತಿಗೆದಾರರಿಗೆ ಕಾಲ ಕಾಲಕ್ಕೆ ಕೆಮಿಕಲ್ಸ್ ಸೇರಿದಂತೆ ಇತರೆ ಪರಿಕರಗಳನ್ನು ಪೂರೈಕೆ ಮಾಡಬೇಕೆಂದು ಗುತ್ತಿಗೆದಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ನೂ ಆರಂಭವಾಗದ ಈಜುಕೊಳ: ಈಜು ಪ್ರಿಯರಿಂದ ಬೇಸರ ವ್ಯಕ್ತ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.