ETV Bharat / state

ವಚನ ಕೊಟ್ಟಂತೆ ನಡೆದುಕೊಂಡಿದ್ದು ಬಿಜೆಪಿ ಸರ್ಕಾರ: ಸಿಎಂ ಬಸವರಾಜ ಬೊಮ್ಮಾಯಿ

author img

By

Published : Apr 24, 2023, 7:26 PM IST

ಸಿಎಂ ಬಸವರಾಜ್ ಬೊಮ್ಮಾಯಿ
ಸಿಎಂ ಬಸವರಾಜ್ ಬೊಮ್ಮಾಯಿ

ಕಾಂಗ್ರೆಸ್​ ಸರ್ಕಾರದಿಂದ ಜನರಿಗೆ ಯಾವ ಭಾಗ್ಯವೂ ಮುಟ್ಟಿರಲಿಲ್ಲ. ಕಾಂಗ್ರೆಸ್​ ಸರ್ಕಾರವೇ ಒಂದು ದೌರ್ಭಾಗ್ಯವಾಗಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ

ಹಾವೇರಿ: ಈ ಚುನಾವಣೆಯಲ್ಲಿ ಬಿಜೆಪಿಯ ಸುನಾಮಿ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆ ರಾಣೆಬೆನ್ನೂರಲ್ಲಿ‌ ರೋಡ್ ಶೋದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ವಚನ ಕೊಟ್ಟಂತೆ ನಡೆದುಕೊಂಡಿದ್ದು ಬಿಜೆಪಿ ಸರ್ಕಾರ, ಕಾಂಗ್ರೆಸ್ ಸುಳ್ಳು ಭರವಸೆ ಕೊಡುವ ಪಕ್ಷ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೋಪಿಸಿದರು.

ಬಿಜೆಪಿ ಸರ್ಕಾರದಿಂದ ಸ್ಲಂ ಬೋರ್ಡ್​ನಿಂದ ಬಡವರಿಗಾಗಿ ಮನೆ ನಿರ್ಮಾಣ ಮಾಡಿದ್ದೇವೆ. ಸೂರು ಇಲ್ಲದವರಿಗೆ ಸೂರು ಕೊಟ್ಟಿದ್ದೇವೆ. ಇದೇ ಮೊದಲ ಬಾರಿಗೆ 1500 ಮನೆಗಳ ನಿರ್ಮಾಣವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.

ಅಧಿಕಾರದಲ್ಲಿದ್ದಾಗ ಆ ಭಾಗ್ಯ, ಈ ಭಾಗ್ಯ ಅಂತಾ ಯಾವ ಭಾಗ್ಯವನ್ನು ಕಾಂಗ್ರೆಸ್​ ಸರ್ಕಾರ ಕೊಟ್ಟಿಲ್ಲ, ಜನರಿಗೆ ಯಾವ ಭಾಗ್ಯವೂ ಮುಟ್ಟಿಲ್ಲ. ಕಾಂಗ್ರೆಸ್ ಸರ್ಕಾರವೇ ಒಂದು ದೌರ್ಭಾಗ್ಯವಾಗಿದೆ. ಅದಕ್ಕೆ ಮತದಾರರು 2018 ರಲ್ಲಿ ಅವರನ್ನ ಮನೆಗೆ ಕಳುಹಿಸಿದ್ದರು. ಈಗ ಹೊಸದಾಗಿ ಗ್ಯಾರಂಟಿ ಕಾರ್ಡ್ ಅಂತ ಅಡ್ಡಸೋಗು ತಕ್ಕೊಂಡು ಬಂದಿದ್ದಾರೆ ಎಂದು ಸಿಎಂ ಕಿಚಾಯಿಸಿದರು.

ಆಂತರಿಕ ಮೀಸಲಾತಿಯನ್ನು ಕೊಡುವ ಕೆಲಸ ಮಾಡಿದ್ದೇವೆ: ಬಂಧುಗಳೇ ನಾವು ಎಸ್​ಸಿಗೆ 15 ರಿಂದ 17 ಎಸ್​ಟಿಗೆ 3 ರಿಂದ 7ಅನ್ನು ಮಾಡುವಾಗ ಹೇಳಿದ್ರು ಬೊಮ್ಮಾಯಿ ಅವರೇ ಕೈ ಹಾಕಬೇಡಿ ಜೇನು ಗೂಡು ಅದು ಎಂದರು. ಆದರೆ ನಾನು ಏನಿದು ಜೇನುಗೂಡು ಎಂದು ಕೈ ಹಾಕಿದೆ. ದೀನ ದಲಿತರಿಗೆ ತುಳಿತಕ್ಕೆ ಒಳಗಾದವರಿಗೆ ನಾವು ಜೇನುತುಪ್ಪವನ್ನು ಕೊಡುವ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು. ಆಂತರಿಕ ಮೀಸಲಾತಿಯನ್ನು ಕೊಡುವ ಕೆಲಸ ಮಾಡಿದ್ದೇವೆ ಎಂದರು.

ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬಂದು ದೀಪ ಹಚ್ಚಿ ಮೈಕ್ ಮುಂದೆ ನಿಲ್ಲಲಿಲ್ಲ, ಬದಲಾಗಿ ಓಡಿಹೋದರು. ಆದರೆ ಈ ಬಸವರಾಜ ಬೊಮ್ಮಾಯಿ ಓಡಿಹೋಗುವಂತಹ ಮುಖ್ಯಮಂತ್ರಿಯಲ್ಲ. ಇವತ್ತು ಎಲ್ಲರಿಗೂ ಆಂತರಿಕ ರಿಸರ್ವೇಷನ್ ಕೊಟ್ಟು, ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ. ಎಲ್ಲ ಸಮುದಾಯಗಳಿಗೂ ನ್ಯಾಯವನ್ನು ಕೊಟ್ಟಿದ್ದೇವೆ. ನಿಮ್ಮ ಅಧಿಕಾರವನ್ನು ದೀನ ದಲಿತರ ಪರವಾಗಿ ಬಳಕೆಯನ್ನು ಮಾಡಿ, ಅವರಿಗೆ ರಕ್ಷಣೆಯನ್ನು ಕೊಟ್ಟು, ಅವರಿಗೆ ಮೀಸಲಾತಿಯನ್ನು ಕೊಟ್ಟಾಗ ಸಾಮಾಜಿಕ ನ್ಯಾಯ ಬರುತ್ತದೆ. ನಿಜವಾದ ಸಾಮಾಜಿಕ ನ್ಯಾಯ ಕೊಡುತ್ತಿರುವುದು ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ಎಂದು ಸಿಎಂ ಹೇಳಿದ್ರು.

ಚುನಾವಣೆ ಆಗುವವರೆಗೂ ಗ್ಯಾರಂಟಿ ಆಮೇಲೆ ಗಳಗಂಟೆ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​ ಪ್ರಣಾಳಿಕೆಯನ್ನು ಸಿಎಂ ಲೇವಡಿ ಮಾಡಿದರು. ಮೋಸ ಮಾಡುವಂತದ್ದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅಂತಾ ಬಂದಿದೆ. ಅದು ಬೋಗಸ್ ಕಾರ್ಡ್ ಉಪ್ಪಿನಕಾಯಿ ಹಾಕಿಕೊಳ್ಳಬಹುದು ಅಷ್ಟೇ ಎಂದು ಬೊಮ್ಮಾಯಿ ಗೇಲಿ ಮಾಡಿದರು. ಚುನಾವಣೆ ಆಗುವವರೆಗೂ ಗ್ಯಾರಂಟಿ ಆಮೇಲೆ ಗಳಗಂಟೆ ಎಂದು ಸಿಎಂ ವ್ಯಂಗ್ಯವಾಡಿದರು.

ರಾಣೇಬೆನ್ನೂರು ನಗರದ ಕೆಇಬಿ ಗಣೇಶ್ ದೇವಸ್ಥಾನದಿಂದ ಆರಂಭವಾದ ರೋಡ್ ಶೋ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಕುರುಬಗೇರಿವರೆಗೆ ರೋಡ್ ಶೋ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋಗೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ, ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್​ಕುಮಾರ್ ಪೂಜಾರ ಸಾಥ್ ನೀಡಿದರು.

ಇದನ್ನೂ ಓದಿ : ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.