ETV Bharat / state

ಸಿದ್ದರಾಮಯ್ಯನವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಕೆಲಸವಿಲ್ಲ: ಗುಡುಗಿದ ಕೌರವ

author img

By

Published : Nov 14, 2019, 9:11 PM IST

ಸಿದ್ದರಾಮಯ್ಯ ವಿರುದ್ಧ ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಕಿಡಿ. ಜನ್ಮದಿನದಂದೇ ಬಿಜೆಪಿ ಸೇರಿದ ಬಿ.ಸಿ.ಪಾಟೀಲ್.

ಬಿ.ಸಿ.ಪಾಟೀಲ್

ಹಾವೇರಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಕೆಲಸವಿಲ್ಲ. ಟೀಕೆ ಮಾಡುವುದೇ ಅವರ ಮೂಲಭೂತ ಹಕ್ಕು ಎಂದುಕೊಂಡಿದ್ದಾರೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಕೆಲಸವಿಲ್ಲ

ಹಿರೇಕೆರೂರು ತಾಲೂಕಿನ ಲಿಂಗದೇವರಕೊಪ್ಪ ಕ್ರಾಸ್‌ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆರೋಪಗಳಿಗೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಕಾಕತಾಳೀಯ ಎಂಬಂತೆ ತಮ್ಮ ಜನ್ಮದಿನದಂದೇ ಬಿಜೆಪಿ ಪಕ್ಷ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಮಾಜಿ ಸ್ಪೀಕರ್ ರಮೇಶಕುಮಾರ್ 2023ರವರೆಗೆ ಚುನಾವಣೆಗೆ ನಿಲ್ಲದಂತೆ ಮಾಡಿದ್ದ ಹಿಟ್ಲರ್ ಆದೇಶವನ್ನು ಸುಪ್ರೀಂಕೋರ್ಟ್ ತೆಗೆದುಹಾಕಿದ್ದು ನಮಗೆ ಸಂತಸ ತಂದಿದೆ. ಉಪಚುನಾವಣೆ ಕ್ಷೇತ್ರಗಳಲ್ಲಿ ಅತ್ಯಧಿಕ ಮತಗಳ ಅಂತರದಿಂದ ಜಯಸಾಧಿಸುತ್ತೇವೆ. ನಮ್ಮ ಜೊತೆ ಮಾಜಿ ಶಾಸಕ ಯು.ಬಿ.ಬಣಕಾರ ಇರುವುದು ಗೆಲುವನ್ನ ಮತ್ತಷ್ಟು ಸುಲಭವಾಗಿಸಿದೆ ಎಂದರು.

ಇದೇ ವೇಳೆ ಕಾರ್ಯಕರ್ತರು ತಂದಿದ್ದ ಕೇಕ್ ಕಟ್ ಮಾಡುವ ಮೂಲಕ ಬಿ.ಸಿ.ಪಾಟೀಲ್ ಜನ್ಮದಿನ ಆಚರಿಸಿದರು.

Intro:KN_HVR_05_BCP_UBB_SCRIPT_7202143
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಕೆಲಸವಿಲ್ಲಾ. ಟೀಕೆ ಮಾಡುವುದೇ ಅವರ ಮೂಲಭೂತ ಹಕ್ಕು ಎಂದುಕೊಂಡಿದ್ದಾರೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಲಿಂಗದೇವರಕೊಪ್ಪ ಕ್ರಾಸ್‌ನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಆರೋಪಗಳಿಗೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ತಿಳಿಸಿದರು. ಕಾಕತಾಳೀಯ ಎಂಬಂತೆ ಜನ್ಮದಿನದಂದೇ ಬಿಜೆಪಿ ಪಕ್ಷ ಸೇರಿರುವದಕ್ಕೆ ಸಂತಸ ವ್ಯಕ್ತಪಡಿಸಿದರು. ಮಾಜಿ ಸ್ಪೀಕರ ರಮೇಶಕುಮಾರ್ 2023 ರವರೆಗೆ ಚುನಾವಣೆಗೆ ನಿಲ್ಲದಂತೆ ಮಾಡಿದ್ದ ಹಿಟ್ಲರ್ ಆದೇಶವನ್ನು ಸುಪ್ರೀಕೊರ್ಟ್ ತಗೆದುಹಾಕಿದ್ದು ತಮಗೆ ಸಂತಸ ತಂದಿದೆ ಎಂದು ತಿಳಿಸಿದರು. ಇದೇ ವೇಳೆ ತಾವು ಉಪಚುನಾವಣೆ ಕ್ಷೇತ್ರಗಳಲ್ಲಿ ಅತ್ಯೇಧಿಕ ಮತಗಳ ಅಂತರದಿಂದ ಜಯಸಾಧಿಸುವುದಾಗಿ ತಿಳಿಸಿದರು. ನಮ್ಮ ಜೊತೆ ಮಾಜಿ ಶಾಸಕ ಯು.ಬಿ.ಬಣಕಾರ ಇರುವುದು ಗೆಲುವನ್ನ ಮತ್ತಷ್ಟು ಸುಲಭವಾಗಿಸಿದೆ ಎಂದು ತಿಳಿಸಿದರು. ಇದೇ ವೇಳೆ ಕಾರ್ಯಕರ್ತರು ತಂದಿದ್ದ ಕೇಕ್ ಕಟ್ ಮಾಡುವ ಮೂಲಕ ಬಿ.ಸಿ.ಪಾಟೀಲ್ ಜನ್ಮದಿನ ಆಚರಿಸಿದರು. ಪಕ್ಷದ ಕಾರ್ಯಕರ್ತರು ಬಿ.ಸಿ.ಪಾಟೀಲ್‌ರನ್ನ ಜಯಕಾರ ಹಾಕುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಯು.ಬಿ.ಬಣಕಾರ ಬಿಸಿಪಿಗೆ ಸಾಥ್ ನೀಡಿದರು.
LOOK...........,
BYTE-01ಬಿ.ಸಿ.ಪಾಟೀಲ್, ಹಿರೇಕೆರೂರು ಬಿಜೆಪಿ ಅಭ್ಯರ್ಥಿBody:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.