ETV Bharat / state

'ಒಂದು ದೇಶ ಒಂದು ಕರೆ 112 ಪೈಲಟ್' ಯೋಜನೆ: ಹಾನಗಲ್​​ನಲ್ಲಿ ಜನ ಜಾಗೃತಿ

author img

By

Published : Oct 12, 2020, 6:06 PM IST

'ಒಂದು ದೇಶ ಒಂದು ಕರೆ 112 ಪೈಲಟ್' ಯೋಜನೆ ಅನುಷ್ಠಾನಗೊಂಡ ಹಿನ್ನೆಲೆ ಹಾವೇರಿಯ ಪೊಲೀಸ್​ ಇಲಾಖೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

haveri
ಹಾವೇರಿ

ಹಾನಗಲ್​(ಹಾವೇರಿ): ಜಿಲ್ಲೆಯಲ್ಲಿ 'ಒಂದು ದೇಶ ಒಂದು ಕರೆ 112 ಪೈಲಟ್' ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಹಿನ್ನೆಲೆ ಪೊಲೀಸ್ ಇಲಾಖೆ 112 ಹೆಲ್ಪ್​ಲೈನ್​ ಕರೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.

ಹಾವೇರಿಯಲ್ಲಿ 112 ನಂಬರ್​ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದೆ

ಹಾನಗಲ್ ಪೊಲೀಸ್ ಠಾಣೆಯಲ್ಲಿ ಸಿಪಿಐ ಶಿವಶಂಕರ್ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಈ ಕುರಿತಂತೆ ಜಾಗೃತಿ ಮೂಡಿಸಿದರು. ಹಾನಗಲ್ ನಗರದ ವಿವಿಧ ಜನಸಂದಣಿಯ ಪ್ರದೇಶಗಳಲ್ಲಿ ಈ ಕುರಿತಂತೆ ಅರಿವು ಮೂಡಿಸಲಾಯ್ತು.

ಈ ಹಿಂದೆ ಇದ್ದಂತೆ ಆರೋಗ್ಯ, ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಬೇರೆ ಬೇರೆ ನಂಬರ್ ಡಯಲ್ ಮಾಡುವುದು ಬೇಡ. 112 ನಂಬರ್ ಕರೆ ಮಾಡಿದರೆ ಸಾಕು ಕೆಲವೇ ಕೆಲವು ನಿಮಿಷಗಳಲ್ಲಿ ಈ ಸೇವೆಗಳು ತಮಗೆ ಸಿಗಲಿವೆ ಎಂದು ಸಿಪಿಐ ಶಿವಶಂಕರ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.