ETV Bharat / state

ಮದ್ಯದಂಗಡಿ ಲೈಸೆನ್ಸ್ ವಿಚಾರ.. ಸಾರ್ವಜನಿಕ ವೇದಿಕೆಯಲ್ಲೇ ಶಾಸಕದ್ವಯರ ಕಿತ್ತಾಟ

author img

By ETV Bharat Karnataka Team

Published : Oct 17, 2023, 6:54 AM IST

ಮದ್ಯದಂಗಡಿ ಲೈಸೆನ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ವೇದಿಕೆಯಲ್ಲಿ ಶಾಸಕರಿಬ್ಬರು ಕಿತ್ತಾಡಿದ ಘಟನೆ ಹಾಸನದಲ್ಲಿ ಕಂಡು ಬಂದಿದೆ.

two MLAs clashed  MLAs clashed in a public forum  MLAs clashed in a public forum in Hassan  ಮದ್ಯದಂಗಡಿ ಲೈಸೆನ್ಸ್ ವಿಚಾರ  ಸಾರ್ವಜನಿಕ ವೇದಿಕೆಯಲ್ಲಿ ಕಿತ್ತಾಡಿದ ಶಾಸಕದ್ವಯರು  ಮದ್ಯದಂಗಡಿ ಲೈಸೆನ್ಸ್ ವಿಚಾರ  ಸಾರ್ವಜನಿಕ ವೇದಿಕೆಯಲ್ಲಿ ಶಾಸಕರಿಬ್ಬರು ಕಿತ್ತಾಡಿದ ಘಟನೆ  ಮದ್ಯದಂಗಡಿ ಪರವಾನಿಗೆ ವಿಚಾರ  ಬೇಲೂರು ಮತ್ತು ಅರಸೀಕೆರೆ ಶಾಸಕದ್ವಯರು  ಮಾತಿನ ಚಕಮಕಿಯ ಮೂಲಕ ಕಿತ್ತಾಡಿಕೊಂಡ ಘಟನೆ
ಮದ್ಯದಂಗಡಿ ಲೈಸೆನ್ಸ್ ವಿಚಾರ

ಸಾರ್ವಜನಿಕ ವೇದಿಕೆಯಲ್ಲಿ ಕಿತ್ತಾಡಿದ ಶಾಸಕದ್ವಯರು

ಹಾಸನ: ಮದ್ಯದಂಗಡಿ ಪರವಾನಿಗೆ ವಿಚಾರವಾಗಿ ಬೇಲೂರು ಮತ್ತು ಅರಸೀಕೆರೆ ಶಾಸಕದ್ವಯರು ವೇದಿಕೆಯಲ್ಲಿಯೇ ಮಾತಿನ ಚಕಮಕಿ ಮೂಲಕ ಕಿತ್ತಾಡಿಕೊಂಡ ಘಟನೆ ಹಾಸನದ ಅರಸೀಕೆರೆಯಲ್ಲಿ ಸೋಮವಾರ ನಡೆದಿದೆ.

ಬೇಲೂರು ಶಾಸಕ ಎಚ್ ​ಕೆ ಸುರೇಶ್ ಮತ್ತು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಪರಸ್ಪರ ಕಿತ್ತಾಡಿಕೊಂಡ ಶಾಸಕರು. ಇವರಿಬ್ಬರ ಕಿತ್ತಾಟಕ್ಕೆ ವೇದಿಕೆಯಲ್ಲಿ ಕುಳಿತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಮೌನಕ್ಕೆ ಶರಣಾಗಿದ್ದರು.

ಕರಗುಂದ ಗ್ರಾಮದಲ್ಲಿ ಮದ್ಯದಂಗಡಿ ತೆರೆದು ಹೆಣ್ಣು ಮಕ್ಕಳ ತಾಳಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್ ​ಕೆ ಸುರೇಶ್ ಭಾಷಣದ ಮೂಲಕ ಆರೋಪ ಮಾಡಿದ್ದರು. ಇದಕ್ಕೆ ಉತ್ತರ ನೀಡಲು ಶಾಸಕ ಕೆ ಎಂ ಶಿವಲಿಂಗೇಗೌಡ ಮುಂದಾದರು. ಜನ ಸೇರಿಸುವವರು ನಾವು, ನೀವು 15 ಜನ ಕರೆದುಕೊಂಡು ಬಂದು ಸಭೆ ಹಾಳು ಮಾಡಲು ಬಂದಿದ್ದೀರಾ ಎಂದು ಶಾಸಕ ಸುರೇಶ್ ವಿರುದ್ಧ ಶಿವಲಿಂಗೇಗೌಡ ಕಿಡಿಕಾರಿದರು.

ಈ ವೇಳೆ ಸಿಟ್ಟಾದ ಸುರೇಶ್, ನನಗೂ ಜಾವಗಲ್ ಗ್ರಾಮ ಸೇರುತ್ತದೆ. ನನಗೂ ಈ ಗ್ರಾಮದ ಮೇಲೆ ಹಕ್ಕಿದೆ ಎಂದು ಹೇಳಿದರು. ಮದ್ಯದಂಗಡಿ ತೆರೆದಿರುವವರು ಶಿವಲಿಂಗೇಗೌಡರ ಸ್ನೇಹಿತ ಎಂದು ಮೈಕ್ ಹಿಡಿದು ಆರೋಪಿಸಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ನಮ್ಮ ಸರ್ಕಾರ ಬಂದು ಐದು ತಿಂಗಳು ಆಯ್ತು. ಒಂದು ಮದ್ಯದಂಗಡಿಗೂ‌ ಅನುಮತಿ ನೀಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತೆರೆದಿದ್ದಾರೆ ಎಂದು ಸಿಟ್ಟಿನಿಂದ ಹೇಳಿದರು.

ಒಂದೆಡೆ ಶಿವಲಿಂಗೇಗೌಡರ ಪರ ಕಾರ್ಯಕರ್ತರು ಜೈಕಾರ ಕೂಗಿದರು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಸುರೇಶ್ ಪರ ಜೈಕಾರ ಕೂಗಿದರು. ಈ ವೇಳೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಧ್ಯಪ್ರವೇಶಿಸಿ ಶಾಸಕರನ್ನು ಸಮಾಧಾನಪಡಿಸಿದರು.

ವೇದಿಕೆ ಮೇಲೆ ಶಾಸಕರ ನಡುವೆ ಕಿತ್ತಾಟದ ನಂತರ ಸಚಿವ ಕೆ ಎನ್ ರಾಜಣ್ಣ ಭಾಷಣ ಮಾಡಿ ಶಾಸಕರಿಗೆ ಕಿವಿಮಾತು ಹೇಳಿದರು. ಶಾಸಕರು ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಬೇಲೂರಿನಲ್ಲೂ ಒಂದು ಜನತಾದರ್ಶನ ಕಾರ್ಯಕ್ರಮ ಮಾಡೋಣ. ಅಲ್ಲಿಗೂ ಅಧಿಕಾರಿಗಳು ಬರುತ್ತಾರೆ. ನಿಮ್ಮ ಸಮಸ್ಯೆಯೂ ಬಗೆಹರಿಯುತ್ತದೆ. ಜನರಿಂದ ಚಪ್ಪಾಳೆ ಗಿಟ್ಟಿಕೊಳ್ಳಲು ಭಾಷಣ ಮಾಡುವುದೇ ಬೇರೆ. ಅದನ್ನು ರಾಜಕೀಯ ಭಾಷಣದಲ್ಲಿ ಮಾಡೋಣ ಎಂದು ಹೇಳಿದರು.

ಇನ್ನು ಶಾಸಕರ ಮಾತಿನ ಚಕಮಕಿ ನಡುವೆ ಕಾರ್ಯಕರ್ತರ ಮಧ್ಯೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಾಸಕರ ಈ ವಾಗ್ವಾದದಿಂದ ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕರು ಸಹ ಬೇಸರ ವ್ಯಕ್ತಪಡಿಸಿದರು.

ಓದಿ: ಅವಹೇಳನಕಾರಿ ಹೇಳಿಕೆ: ಒಕ್ಕಲಿಗರ ಸಂಘದಿಂದ ಕೆ.ಎಸ್.ಭಗವಾನ್ ವಿರುದ್ಧ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.