ETV Bharat / state

ನಾನು ಜೀವಂತವಿರುವ ತನಕ ನನ್ನ ಕ್ಷೇತ್ರದಲ್ಲಿ ಯಾರೂ MLA ಆಗೋಕೆ ಸಾಧ್ಯವಿಲ್ಲ: ಶಿವಲಿಂಗೇಗೌಡ

author img

By

Published : Jul 6, 2021, 9:24 PM IST

ಶಾಸಕ ಶಿವಲಿಂಗೇಗೌಡ ಜೀವಂತ ಇರುವವರೆಗೆ ಅರಸೀಕೆರೆ ಕ್ಷೇತ್ರದಲ್ಲಿ ಮತ್ತೊಬ್ಬರು ಶಾಸಕರಾಗುವುದಿಲ್ಲ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಬಿಜೆಪಿಯವರು ನನಗೆ ಟಾರ್ಚರ್ ಕೊಟ್ಟು ಆರೋಗ್ಯ ಹಾಳು ಮಾಡಲು ಪ್ರಯತ್ನಪಡುತ್ತಿದ್ದಾರೆ ಎಂದು ಹೇಳಿದರು.

MLA ShivalingeGowda Statement in Hassan
ಶಾಸಕ ಶಿವಲಿಂಗೇಗೌಡ ಗಂಭೀರ ಆರೋಪ

ಹಾಸನ: ನೋಡ್ರಿ, ನಾನು ಜೀವಂತ ಇರೋತನಕ ನನ್ನ ಕ್ಷೇತ್ರದಲ್ಲಿ ಮತ್ತೊಬ್ಬರು ಶಾಸಕರಾಗೋದಿಲ್ಲ ಎಂದು ಹಾರನಹಳ್ಳಿಯ ಸ್ವಾಮೀಜಿ ಹೇಳಿದ್ದಾರೆ. ಹೀಗಾಗಿ ನನಗೆ ಕಿರುಕುಳ ಕೊಟ್ಟು ನನ್ನ ಆರೋಗ್ಯ ಕೆಡಿಸೋಕೆ ಅಪರೇಷನ್ ಕಮಲ ಮಾಡ್ತಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

ಶಾಸಕ ಶಿವಲಿಂಗೇಗೌಡ ಗಂಭೀರ ಆರೋಪ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತೊರೆದ ಸದಸ್ಯರನ್ನು ನಾನು ನಿಂದಿಸಿದ್ದೇನೆ ಎಂಬ ಆಡಿಯೋ ವೈರಲ್ ಆದ ಬಗ್ಗೆ ಸ್ಪಷ್ಟನೆ ನೀಡಿ, ಈ ವಿಷಯದಲ್ಲಿ ಜೇನುಕಲ್ಲು ಸಿದ್ದೇಶ್ವರರ ಮೇಲೆ ಆಣೆ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಈ ಹಿಂದೆ ವಿದ್ಯಾಧರ್ ಎಂಬುವನನ್ನು ಅಧ್ಯಕ್ಷನನ್ನಾಗಿ ಮಾಡಿ ಆತನಿಂದ ಮೋಸ ಹೋದೆ. ಹೀಗಾಗಿ ಹೊಟ್ಟೆ ಉರಿದು ಸತ್ಯವನ್ನು ಮಾತನಾಡಿದ್ದೇನೆ. ತಾವು ಮಾತನಾಡಿದ್ದನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿದರು.

ಶಾಸಕ ಶಿವಲಿಂಗೇಗೌಡ ಜೀವಂತ ಇರುವವರೆಗೆ ಅರಸೀಕೆರೆ ಕ್ಷೇತ್ರದಲ್ಲಿ ಮತ್ತೊಬ್ಬರು ಶಾಸಕರಾಗುವುದಿಲ್ಲ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ನನಗೆ ಟಾರ್ಚರ್ ಕೊಟ್ಟು ಆರೋಗ್ಯ ಹಾಳು ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಅರಸೀಕೆರೆ ಕ್ಷೇತ್ರದ ಜನ ಫ್ಲೋರೈಡ್ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮುದ್ದೆ ತಿನ್ನುವವರು ಬೇಕೋ, ಮಾತ್ರೆ ನುಂಗೋರು ಬೇಕೋ ಅನ್ನೋದನ್ನು ಜನರೇ ನಿರ್ಧರಿಸುತ್ತಾರೆ ಎಂದರು.

ಇದನ್ನೂ ಓದಿ :ಹಣ ವಸೂಲಿ ಆರೋಪ : ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ವಿರುದ್ಧ ವೃದ್ಧನಿಂದ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.