ETV Bharat / state

ಮಹಾಶಿವರಾತ್ರಿ: ಕ್ರೀಡಾಪಟುಗಳೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

author img

By

Published : Mar 2, 2022, 6:46 AM IST

ಮಂಗಳವಾರದಂದು ನಡೆದ ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡೆಯಲ್ಲಿ ಸ್ವತಃ ಶಾಸಕ ಕೆಎಂ ಶಿವಲಿಂಗೇಗೌಡ ಅವರು ಭಾಗವಹಿಸಿದ್ದರು.

MLA Shivalingegowda played kabaddi with athletes
ಕ್ರೀಡಾಪಟುಗಳೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

ಹಾಸನ: ಮಹಾ ಶಿವರಾತ್ರಿ ಪ್ರಯುಕ್ತ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಿರಿಯೂರು ಹಾಗೂ ಬಾಗೇಶಪುರ ಗ್ರಾಮದಲ್ಲಿ ಮಂಗಳವಾರದಂದು ನಡೆದ ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡೆಯಲ್ಲಿ ಸ್ವತಃ ಶಾಸಕ ಕೆಎಂ ಶಿವಲಿಂಗೇಗೌಡ ಅವರು ಭಾಗವಹಿಸುವ ಮೂಲಕ ಕ್ರೀಡೆಯ ಮೆರುಗು ಹೆಚ್ಚಿಸಿದರು. ಕ್ರೀಡಾಪಟುಗಳನ್ನು ಉತ್ತೇಜಿಸಿದರು. ನೆರೆದಿದ್ದವರು ಇವರ ಆಟಕ್ಕೆ ಶಿಳ್ಳೆ, ಚಪ್ಪಾಳೆ ಹೊಡೆದು ಕುಣಿದು ಕುಪ್ಪಳಿಸಿದರು.

ಕ್ರೀಡಾಪಟುಗಳೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

ಯುಗಾದಿ ಹಾಗೂ ಮಹಾ ಶಿವರಾತ್ರಿ ಹಬ್ಬದಲ್ಲಿ ಗ್ರಾಮೀಣ ಭಾಗದ ಜನತೆ ಜಾಗರಣೆ ಮಾಡುವುದು ಸರ್ವೇ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಶಿವರಾತ್ರಿ ಜಾಗರಣೆ ಮಾಡುತ್ತಾರೆ. ಈ ಮೂಲಕ ಕ್ರೀಡೆಗಳಿಗೂ ಒತ್ತು ನೀಡುತ್ತಾರೆ.

ಇದನ್ನೂ ಓದಿ: ಮಹಾಶಿವರಾತ್ರಿ: ಮುಸ್ಲಿಂ ವ್ಯಕ್ತಿಯಿಂದ ಹಿಂದೂ ಸ್ನೇಹಿತರಿಗೆ ವಿಶೇಷ ಉಪಹಾರ ವ್ಯವಸ್ಥೆ

ಇನ್ನು ನಿನ್ನೆ ನಡೆದ ಪಂದ್ಯಾವಳಿಗೆ ಸ್ವತಃ ಶಾಸಕ ಕೆಎಂ ಶಿವಲಿಂಗೇಗೌಡ ಭಾಗವಹಿ ವಿರೋಧಿ ಬಣವನ್ನು ಮಣಿಸಿದರು. ಜೊತೆಗೆ ಕ್ರೀಡಾಪಟುಗಳನ್ನು ಉತ್ತೇಜಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.