'ರಾಗಿ ಕಳ್ಳ' ಆರೋಪ ಸಾಬೀತು ಪಡಿಸಲಿ: ಬಿಜೆಪಿ ನಾಯಕರಿಗೆ ಶಾಸಕ ಶಿವಲಿಂಗೇಗೌಡ ಸವಾಲು

author img

By

Published : Aug 10, 2022, 1:10 PM IST

Updated : Aug 10, 2022, 1:21 PM IST

MLA KM Shivalingegowda reacts on BJP leaders Allegations

ನನ್ನ ಮೇಲೆ ಬಿಜೆಪಿ ಮುಖಂಡರು ಮಾಡಿರುವ ಆರೋಪವನ್ನು ಸಾಬೀತು ಪಡಿಸಲು ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸವಾಲೆಸೆದರು.

ಹಾಸನ: ನಮ್ಮ ಮೇಲೆ ಮಾಡಲಾಗಿರುವ ಆರೋಪಕ್ಕೆ ಸಾಕ್ಷಿ ಸಮೇತ ಸಾಬೀತು ಮಾಡುವ ತಾಕತ್ತು ಬಿಜೆಪಿ ಮುಖಂಡ ಎನ್​ ಆರ್ ಸಂತೋಷ್ ಕುಮಾರ್ ಅವರಿಗೆ ಇದೆಯಾ? ಎಂದು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಪ್ರಶ್ನಿಸಿದರು. ಜೊತೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಸಹ ಈ ಬಗ್ಗೆ ಶ್ರೀ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಎಸೆದರು.

ಮಾಧ್ಯಮಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಅರಸೀಕೆರೆಯಲ್ಲಿ ಕಳೆದ 15 ವರ್ಷಗಳಿಂದ ಶಾಸಕನಾಗಿ ಜನರೊಂದಿಗೆ ಬೆರೆತು ಇಡೀ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿರುವ ನನ್ನ ಮೇಲೆ ಮತ್ತು ನನ್ನ ಹಿಂಬಾಲಕರನ್ನು ದೂಷಿಸಿ ನಿನ್ನೆ ಪ್ರತಿಭಟನೆ ಮಾಡಿಸಿದ್ರು. ನನ್ನ ಮೇಲೆ ಹೊರಿಸಿರುವ ಆರೋಪಗಳ ಪಟ್ಟಿಯಲ್ಲಿ ಒಂದೇ ಒಂದನ್ನು ಸಾಬೀತು ಪಡಿಸಲಿ ಎಂದು ಸವಾಲೆಸೆದರು.

ಶಾಸಕ ಕೆಎಂ ಶಿವಲಿಂಗೇಗೌಡ

ನನ್ನ ವಿರುದ್ಧ ಪಿತೂರಿಗಾಗಿ ಈ ರೀತಿ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸಲು ಮುಂದಾಗಿದ್ದಾರೆ. ಒಬ್ಬ ನಾಯಕನಾಗಬೇಕಾದವನು ರಾಜ ಮಾರ್ಗದಿಂದ ಹೋಗುವುದನ್ನು ಬಿಟ್ಟು ವಾಮ ಮಾರ್ಗದಿಂದ ಹೋದರೆ ಸಾಧ್ಯವಿಲ್ಲ. ಚುನಾವಣೆ ಸಮೀಪಿಸುತ್ತಿದ್ದು, ನಾನು ಕೆಲಸ ಮಾಡಿದ್ದರೆ ಕ್ಷೇತ್ರದ ಜನರು ಮತ್ತೊಮ್ಮೆ ನನ್ನ ಕೈ ಹಿಡಿಯುತ್ತಾರೆ. ಇಲ್ಲ ಅಂದ್ರೆ ಮನೆಗೆ ಕಳಿಸುತ್ತಾರೆ ಎಂದರು.

ನನ್ನ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಬಿಜೆಪಿ ಮುಖಂಡರು ಒಮ್ಮೆ ಕ್ಷೇತ್ರದಲ್ಲಿ ನೋಡಿಕೊಂಡು ಬರಲಿ. ಆಮೇಲೆ ನನ್ನ ಬಗ್ಗೆ ಮಾತನಾಡಲಿ. ಯಾವುದೇ ಸಭೆ ಸಮಾರಂಭಗಳಲ್ಲಿ ಮತ್ತು ಗುದ್ದಲಿ ಪೂಜೆಗಳಿಗೆ 500 ಜನ ಸೇರಿರುತ್ತಾರೆ. ಅದರ ಮಧ್ಯದಲ್ಲಿ 10 ಜನರನ್ನು ಬಿಟ್ಟು ನನ್ನ ವಿರುದ್ಧ ಧಿಕ್ಕಾರ ಕೂಗಿಸುವುದು, ವಿಡಿಯೋ ಮಾಡಿಸುವುದು ಸೇರಿದಂತೆ ರಾಜ್ಯದ ನಾಯಕರನ್ನು ಮೆಚ್ಚಿಸಲು ಮಾಡುವ ಕೀಳು ರಾಜಕಾರಣಕ್ಕೆ ಅರಸೀಕೆರೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂತೋಷ್ ಆರೋಪಕ್ಕೆ ತಿರುಗೇಟು ನೀಡಿದರು.

ನನ್ನ 15ವರ್ಷದ ಶಾಸಕ ಸ್ಥಾನದ ಅವಧಿಯಲ್ಲಿ ಒಂದೇ ಒಂದು ಆರೋಪಗಳಿಲ್ಲ. ಆದರೂ ಕೂಡ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ನನ್ನನ್ನು ರಾಗಿ ಕಳ್ಳ ಎಂದು ಕರೆದಿದ್ದು, ಇದನ್ನು ಸಾಬೀತು ಪಡಿಸದಿದ್ದರೆ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.

ಇಡೀ ರಾಜ್ಯದಲ್ಲಿ ಯಾವ ಶಾಸಕರೂ ಕೂಡ ರಾಗಿ ಖರೀದಿ ಸಮಸ್ಯೆ ಬಗ್ಗೆ ಗಮನ ಹರಿಸಿರಲಿಲ್ಲ. ಸದನದಲ್ಲಿ ಚರ್ಚಿಸಿರಲಿಲ್ಲ. ನಾನು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದೆ. ಇದಕ್ಕಾಗಿ ಹೋರಾಟ, ಪ್ರತಿಭಟನೆಗಳನ್ನು ಮಾಡಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ಆದರೂ ಕೂಡ ನಿನ್ನೆ ಭಾಷಣದಲ್ಲಿ ರಾಗಿಕಳ್ಳ ಎಂದು ಗಂಭೀರವಾಗಿ ರವಿಕುಮಾರ್ ಆರೋಪಿಸಿದ್ದಾರೆ. ಒಂದೇ ಒಂದು ಕೆಜಿಯ ರಾಗಿಯ ಅವ್ಯವಹಾರ ಮಾಡಿದ್ದರೆ ಸಾಕ್ಷಿ ಸಮೇತ ತಂದಿಡಲಿ. ಇಲ್ಲದಿದ್ದರೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಬಂದು ಆಣೆ ಮಾಡಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಆಷಾಢ ಮಾಸದಲ್ಲಿ ತವರಿಗೆ ಬಂದ ಯುವತಿ.. ಪ್ರಿಯಕರನ ಜೊತೆ ಪರಾರಿಯಾಗಿದ್ದ ನವವಧು ಆತ್ಮಹತ್ಯೆ

ನನಗೂ ಮತ್ತು ಜೆಡಿಎಸ್​ ವರಿಷ್ಠರ ಜೊತೆಗೆ ಕೆಲವು ಭಿನ್ನಾಭಿಪ್ರಾಯಗಳು ಇರುವುದು ಸತ್ಯ. ಆದರೆ ನಾನು ಜೆಡಿಎಸ್ ಪಕ್ಷವನ್ನು ಬಿಟ್ಟಿಲ್ಲ. ಮುಂದೆ ಕ್ಷೇತ್ರದ ಜನರು, ಮುಖಂಡರು ಮತ್ತು ಕಾರ್ಯಕರ್ತರ ಸಭೆ ಕರೆದು ಅವರ ತೀರ್ಮಾನದಂತೆ ನನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದರು.

Last Updated :Aug 10, 2022, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.