ETV Bharat / state

ಆತ್ಮಹತ್ಯೆ ಮಾಡಿಕೊಂಡಿದ್ದ ಹಾಸನದ ಯೋಧ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

author img

By

Published : Jun 10, 2019, 7:15 PM IST

ಯೋಧ ಮೋಹನ್ 2 ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಇವರು ತಮ್ಮ ಮನದಾಳದ ನೋವನ್ನ ಪತ್ರದ ಮೂಲಕ ಬರೆದಿಟ್ಟು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಹಾಸನ: ಆತ್ಮಹತ್ಯೆ ಮಾಡಿಕೊಂಡಿದ್ದ ಯೋಧನ ಮೃತದೇಹವನ್ನ ಹರಿಯಾಣದಿಂದ ಇಂದು ಸ್ವಗ್ರಾಮ ಕದಾಲು ಗ್ರಾಮಕ್ಕೆ ತರಲಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಿಆರ್​ಪಿಎಫ್ ಯೋಧ ಮೋಹನ್ ಕುಮಾರ್, ಹರಿಯಾಣದ ತಮ್ಮ ಕಚೇರಿಯ ಶೌಚಾಲಯದ ಬಾಗಿಲಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಮಂಜೇಗೌಡ ಸೇರಿದಂತೆ ಹಲವು ಸ್ಥಳೀಯ ಜನಪ್ರತಿನಿಧಿಗಳು ಯೋಧನ ಅಂತಿಮ ದರ್ಶನ ಪಡೆದರು.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಳೆದ 8 ವರ್ಷಗಳಿಂದ ಸಿಆರ್​ಪಿಎಫ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೋಹನ್, ಕಳೆದ 2 ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ತಮ್ಮ ಮನದಾಳದ ನೋವನ್ನ ಪತ್ರದ ಮೂಲಕ ಬರೆದಿಟ್ಟು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸವಿತಾ ಸಮಾಜದ ಸಂಪ್ರದಾಯದಂತೆ ಕುಟುಂಬಸ್ಥರು ವಿಧಿ ವಿಧಾನಗಳನ್ನ ನೆರೆವೇರಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Intro:ಹಾಸನ: ಜೀವನದಲ್ಲಿ ಜಿಗುಪ್ಸೆಯನ್ನ ಹೊಂದಿದ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕದಾಲು ಗ್ರಾಮದ ಸಿ.ಆರ್.ಪಿ.ಎಫ್.ಯೋಧ ಮೋಹನ್ ಕುಮಾರ್ ಹರಿಯಾಣದ ತಮ್ಮ ಕಚೇರಿಯ ಶೌಚಾಲಯದ ಬಾಗಿಲಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ರು.

ಮೃತದೇಹವನ್ನ ಇಂದು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ನೆನ್ನೆ ತಡರಾತ್ರಿ ತಂದು ಸ್ವಗ್ರಾಮ ಕಲಾಳುವಿನಲ್ಲಿ ಮೃತದೇಹವನ್ನ ಸಾರ್ವಜನಿಕ ದರ್ಶನಕ್ಕೆ ಪಟ್ಟಣದ ಹೌಸಿಂಗ್ ಬೋರ್ಡ್ ಮೃತನ ಮನೆಯ ಮುಂದೆ ಇಡಲಾಗಿತ್ತು. ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಮಂಜೇಗೌಡ ಸೇರಿದಂತೆ ಹಲವು ಸ್ಥಳೀಯ ಜನಪ್ರತಿನಿಧಿಗಳು ಯೋಧನ ಅಂತಿಮ ದರ್ಶನ ಪಡೆದ್ರು. ಮೃತನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಮತ್ತು ಸಂಬಂಧಿಕರುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಕಳೆದ 8 ವರ್ಷಗಳಿಂದ ಸಿ.ಆರ್.ಪಿ.ಎಫ್.ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೋಹನ್ ಕಳೆದ 2 ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಮೋಹನ್ ಕುಮಾರ್ ಸಾಯುವ ಮುನ್ನ ತನ್ನ ಮನದಾಳದ ನೋವನ್ನ ಪತ್ರದ ಮೂಲಕ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ರು.

ಇಂದು ಮಧ್ಯಾಹ್ನ ಸಿ.ಆರ್.ಪಿ.ಎಫ್ ನ ಹಿರಿಯ ಅಧಿಕಾರಿಗಳು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸೋ ಮೂಲಕ ಯೋಧನಿಗೆ ಅಂತಿಮ ಗೌರವ ಸಮರ್ಪಣೆ ಮಾಡಿ ಮೃತದೇಹವನ್ನ ಕುಟುಂಬಕ್ಕೆ ಹಸ್ತಾಂತರ ಮಾಡಿದ್ರು. ಬಳಿಕ ಸವಿತಾ ಸಮಾಜದ ಸಂಪ್ರದಾಯದಂತೆ ಕುಟುಂಬಸ್ಥರು ವಿಧಿ ವಿಧಾನಗಳನ್ನ ನೆರೆವೇರಿಸಿ ಮೃತನ ಜಮೀನಿನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯ್ತುBody:0Conclusion:ಸುನಿಲ್ ಇತಿಹಾಸ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.