ETV Bharat / state

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇದ್ದ ಪೊಲೀಸರೇ ಈಗಲೂ ಇರೋದು: ಕೆ.ಎಸ್‌.ಈಶ್ವರಪ್ಪ

author img

By

Published : Jan 22, 2020, 12:49 PM IST

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇದ್ದಂತಹ ಪೊಲೀಸರೇ ಈಗಲೂ ರಾಜ್ಯದಲ್ಲಿ ಇರೋದು. ನಾವೇನು ಹೊಸದಾಗಿ ಯಾರನ್ನೂ ನೇಮಕ‌ ಮಾಡಿಲ್ಲ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ, ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

k s esharappa
ಸಚಿವ ಈಶ್ವರಪ್ಪ

ಹಾಸನ : ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇದ್ದಂತಹ ಪೊಲೀಸರೇ ಈಗಲೂ ರಾಜ್ಯದಲ್ಲಿ ಇರೋದು. ನಾವೇನೂ ಹೊಸದಾಗಿ ಯಾರನ್ನೂ ನೇಮಕ‌ ಮಾಡಿಲ್ಲ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಮಂಗಳೂರು ಬಾಂಬ್ ಪ್ರಕರಣದಲ್ಲಿ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ಎನ್ನದೆ ಎಲ್ಲರೂ ಒಂದಾಗಬೇಕಿದೆ. ರಾಜ್ಯದಲ್ಲಿ ದುಷ್ಟ ಶಕ್ತಿಗಳು ಪೌರತ್ವ ಕಾಯ್ದೆ ದುರುಪಯೋಗ ಮಾಡಿಕೊಂಡು ಗಲಭೆ ನಿರ್ಮಾಣಕ್ಕೆ ಯತ್ನಿಸುತ್ತಿವೆ. ಎಲ್ಲರೂ ಒಂದಾಗದಿದ್ದರೆ ದುಷ್ಟ ಶಕ್ತಿಗಳಿಗೆ ಬೆಂಬಲ ಸಿಕ್ಕಂತಾಗುತ್ತದೆ. ಪೊಲೀಸರು ಜೀವ ಒತ್ತೆಯಿಟ್ಟು ವ್ಯವಸ್ಥಿತವಾಗಿ ದುಷ್ಕೃತ್ಯಗಳನ್ನ ಮಟ್ಟ ಹಾಕಲು ಮುಂದಾಗಿದ್ದಾರೆ. ಅದಕ್ಕಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯರನ್ನ ಪ್ರಾರ್ಥನೆ ಮಾಡುತ್ತೇನೆ ಎಂದರು.

ಸಚಿವ ಈಶ್ವರಪ್ಪ

ನಂತರ ಮಾತನಾಡಿದ ಅವರು, ಪೊಲೀಸ್ ಇಲಾಖೆ ಬಗ್ಗೆ ಅನುಮಾನ ವ್ಯಕ್ತಪಡಿಸೋದಾದ್ರೆ, ಇದು ನೇರವಾಗಿ ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಅನ್ನೋ ಭಾವನೆ ಜನರಲ್ಲಿ ಬರುತ್ತದೆ. ಮಂಗಳೂರು ಗಲಭೆ ಬಗ್ಗೆ ಎಲ್ಲ ಗೊತ್ತಿದ್ದರೂ ಮಾಜಿ ಸಿಎಂ ಆಗಿ ಪೊಲೀಸ್ ಇಲಾಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಇದು ನಿಜಕ್ಕೂ ದುರದೃಷ್ಟಕರ ಎಂದರು.

ಸಿಎಂ ಯಡಿಯೂರಪ್ಪ ವಿದೇಶ ದಿಂದ ಬಂದ ನಂತರ ಸಂಪುಟ ವಿಸ್ತರಣೆಯಾಗಲಿದೆ. ಹಾಲಿ‌ ಕೆಲವು ಸಚಿವರಿಗೆ ಕೋಕ್ ವಿಚಾರ, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದರು.

Intro:ಹಾಸನ : ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇದ್ದ ಪೊಲೀಸರೇ ಈಗಲೂ ರಾಜ್ಯದಲ್ಲಿ ಇರೋದು. ನಾವೇನು ಹೊಸದಾಗಿ ಯಾರನ್ನು ನೇಮಕ‌ ಮಾಡಿಲ್ಲ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಈಶ್ವರಪ್ಪ ಟಾಂಕ್ ಕೊಟ್ರು.

ಹಾಸನದಲ್ಲಿ ಮಾತನಾಡಿದ ಅವರು, ಮಂಗಳೂರು ಬಾಂಬ್ ಪ್ರಕರಣದಲ್ಲಿ ಕಾಂಗ್ರೆಸ್,ಜೆಡಿಎಸ್ ಬಿಜೆಪಿ ಎನ್ನದೆ ಎಲ್ಲರೂ ಒಂದಾಗಬೇಕಿದೆ. ರಾಜ್ಯದಲ್ಲಿ ದುಷ್ಟ ಶಕ್ತಿಗಳು ಪೌರತ್ವ ಕಾಯಿದೆ ದುರುಪಯೋಗ ಮಾಡಿಕೊಂಡು ಗಲಭೆ ನಿರ್ಮಾಣಕ್ಕೆ ಯತ್ನಿಸುತ್ತಿವೆ. ಎಲ್ಲರೂ ಒಂದಾಗದಿದ್ದರೆ ದುಷ್ಟ ಶಕ್ತಿಗಳಿಗೆ ಬೆಂಬಲ ಸಿಕ್ಕಂತಾಗಲಿದೆ. ಪೊಲೀಸರು ಜೀವ ಒತ್ತೆಯಿಟ್ಟು ವ್ಯವಸ್ಥಿತವಾಗಿ ದುಷ್ಕೃತ್ಯಗಳನ್ನ ಮಟ್ಟ ಹಾಕಲು ಮುಂದಾಗಿದ್ದಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯರನ್ನ ಪ್ರಾರ್ಥನೆ ಮಾಡುತ್ತೇನೆ. ಎಲ್ಲರೂ ಒಂದಾಗಿ ದುಷ್ಟರನ್ನ ಮಟ್ಟ ಹಾಕಲು ಯತ್ನಿಸಬೇಕು. ಕಿಡಿಗೇಡಿಗಳು ಹಿಂದು ಮುಸ್ಲಿಮ್ ಹೆಸರಿನಲ್ಲಿ ಗಲಭೆ ಸೃಷ್ಟಿಸಲು ಅವಕಾಶ ನೀಡಬಾರದು. ರಾಜ್ಯದಲ್ಲಿ ಭಯೋತ್ಪಾದಕ ತಡೆಗೆ ಎಲ್ಲರೂ ಒಂದಾಗಬೇಕೆಂದು ಎಂದ್ರು.

ಪೊಲೀಸ್ ಇಲಾಖೆ ಬಗ್ಗೆ ಅನುಮಾನ ವ್ಯಕ್ತಪಡಿಸೋದಾದ್ರೆ ನಾವು ಎಲ್ಲಿಗೆ ಹೋಗ್ತೀವಿ. ಇದು ನೇರವಾಗಿ ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನೋ ಭಾವನೆ ಜನರಲ್ಲಿ ಬರುತ್ತಿದೆ. ಮಂಗಳೂರು ಗಲಭೆ ಬಗ್ಗೆ ಎಲ್ಲ ಗೊತ್ತಿದ್ದರೂ ಮಾಜಿ ಸಿಎಂ ಆಗಿ ಪೊಲೀಸ್ ಇಲಾಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಇದು ನಿಜಕ್ಕೂ ದುರದೃಷ್ಡಕರ. ನೆನ್ನೆಯ ಬಾಂಬ್ ವಿಚಾರದಲ್ಲಿ ಅವರ ಅನುಮಾನ ಕೂಡ ಹಾಗೇ ಇದೆ. ಕೇವಲ ಪ್ರಚಾರಕ್ಕೆ ಮುಸಲ್ಮಾನರು ಇದರಿಂದ ತೃಪ್ತಿಯಾಗ್ತಾರೆ ಎನ್ನೋ ಭಾವನೆಯಿಂದ ಅವರು ಹೀಗೆ ಮಾಡುತ್ತಿದ್ದಾರೆ. ಅವರ ಹೇಳಿಕೆ ಖಂಡನೀಯ ಎಂದು ಕಿಡಿಕಾರಿದ ಈಶ್ವರಪ್ಪ. ಮಾಜಿ ಸಿಎಂ ಎಂಬ ಜವಾಬ್ದಾರಿ ಯಿಂದ ಮಾತನಾಡಲಿ ಎಂದು ಕಿಡಿಕಾರಿದ್ರು.

ಸಿಎಂ ಯಡಿಯೂರಪ್ಪ ವಿದೇಶ ದಿಂದ ಬಂದ ನಂತರ ಸಂಪುಟ ವಿಸ್ತರಣೆಯಾಗಲಿದೆ. ಹಾಲಿ‌ ಕೆಲವು ಸಚಿವರಿಗೆ ಕೋಕ್ ವಿಚಾರ, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿರುತ್ತೇವೆ. ಮೊದಲು ಅವರು ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ ನಾಶವಾಗುತ್ತಿದೆ, ಮೊದಲು ಅವರ ಪಕ್ಷ ನೋಡಿಕೊಳ್ಳಲಿ. ಬಿಜೆಪಿ ಬಗ್ಗೆ ಮಾತ ನಾಡೋ ಯಾವುದೇ ನೈತಿಕತೆ ಅವರಿಗಿಲ್ಲ. ಎನ್ನುವ ಮೂಲಕ ಸಂಪುಟ ವಿಸ್ತರಣೆ, ಸರಕಾರದ ಬಗ್ಗೆ ಸಿದ್ದು ಟೀಕೆ ವಿಚಾರದ ವಿರುದ್ದ ಕೂಡಾ ಗುಡುಗಿದ್ರು.

ಬೈಟ್: ಈಶ್ವರಪ್ಪ, ಪಂಚಾಯತ್ ರಾಜ್ ಸಚಿವ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.