ETV Bharat / state

ಹಾಸನ ನಗರ ಸಭೆ ಗದ್ದುಗೆ ಗುದ್ದಾಟ.. ಅಧಿಕಾರ ಹಿಡಿಯೋರು ಯಾರು?

author img

By

Published : Jan 1, 2020, 1:19 PM IST

ಕಳೆದ ಒಂದೂವರೆ ವರ್ಷದ ಹಿಂದೆ ನಡೆದ ಹಾಸನ ನಗರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಲಿಲ್ಲ. ಈ ನಡುವೆ ಜೆಡಿಎಸ್ ಭದ್ರಕೋಟೆ ಎಂದೆನಿಸಿಕೊಳ್ಳುವ ಹಾಸನದಲ್ಲಿ ಅಧಿಕಾರ ಹಿಡಿಯೋದು ನಾವೇ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

JDS, BJP  Litigation For city Council Authority
ನಗರ ಸಭೆ ಗದ್ದುಗೆ ಗುದ್ದಾಟ

ಹಾಸನ : ಕಳೆದ ಒಂದೂವರೆ ವರ್ಷದ ಹಿಂದೆ ನಡೆದ ಹಾಸನ ನಗರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಲಿಲ್ಲ. ಈ ನಡುವೆ ಜೆಡಿಎಸ್ ಭದ್ರಕೋಟೆ ಎಂದೆನಿಸಿಕೊಳ್ಳುವ ಹಾಸನದಲ್ಲಿ ಅಧಿಕಾರ ಹಿಡಿಯೋದು ನಾವೇ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ನಗರಸಭೆ ಗದ್ದುಗೆ ಗುದ್ದಾಟ..

ನಗರಸಭೆ ಮೀಸಲಾತಿ ಪ್ರಶ್ನಿಸಿ ಕೆಲ ಚುನಾಯಿತ ಸದಸ್ಯರು ಕೊರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ನಗರಸಭೆಯಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮೀಸಲಾತಿ ವಿವಾದ ಬಗೆಹರಿಯುವ ಲಕ್ಷಣ ಗೋಚರಿಸಿದೆ. ಕೋರ್ಟ್‌ ತೀರ್ಪು ಪ್ರಕಟಿಸಲಿದೆ. ಹಾಗಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಅಧಿಕಾರ ಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

35 ಸದಸ್ಯ ಬಲವಿರುವ ಹಾಸನ ನಗರಸಭೆಯಲ್ಲಿ ಜೆಡಿಎಸ್ 17, ಬಿಜೆಪಿ 14, ಕಾಂಗ್ರೆಸ್ 1 ಮತ್ತು 4 ಪಕ್ಷೇತರ ಸದಸ್ಯರಿದ್ದಾರೆ. ಹೀಗಿರುವಾಗಲೇ ಬಿಜೆಪಿ ಶಾಸಕ ಪ್ರೀತಂಗೌಡ ಹಾಸನ ನಗರಸಭೆ ಅಧಿಕಾರ ಹಿಡಿಯುವ ಬಗ್ಗೆ ಮಾತನಾಡುವ ಮೂಲಕ ಜೆಡಿಎಸ್ ನಾಯಕ ರೇವಣ್ಣನವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ಇತ್ತ ಜೆಡಿಎಸ್ ನಾಯಕರೂ ಕೂಡ ತಾವೇನೂ ಕಮ್ಮಿ ಇಲ್ಲ ಎಂಬಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯ ಸದಸ್ಯರು ನಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ. ಹಾಗಾಗಿ ನಾವೇ ಅಧಿಕಾರ ಹಿಡಿಯುತ್ತೇವೆ ಎಂದಿದ್ದಾರೆ. ಹಾಸನದಲ್ಲಿ ಜೆಡಿಎಸ್ ಭದ್ರಕೋಟೆ ಬೇಧಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡ್ಕೊಳ್ತಿದ್ರೆ, ಜೆಡಿಎಸ್ ನಾಯಕರೂ ಕೂಡಾ ಪ್ರತಿತಂತ್ರ ಹೆಣೆಯೋದ್ರಲ್ಲಿ ಹಿಂದೆ ಬಿದ್ದಿಲ್ಲ.

Intro:ಹಾಸನ : ಇದು ಹೇಳಿ ಕೇಳಿ ಜೆಡಿಎಸ್ ಭದ್ರ ಕೋಟೆ, ಆರು ಜನ ಜೆಡಿಎಸ್ ಶಾಸಕರಿರುವ ಬಲಿಷ್ಟ ಜಿಲ್ಲೆ, ಅದರೇ ಕಳೆದ ಒಂದುವರೇ ವರ್ಷದ ಹಿಂದೇ ನಗರಸಭೆ ಚುನವಾಣೆ ನೆಡಿದಿದ್ದು, ಆದರೇ ಅಧಿಕಾರ ಮಾತ್ರ ಯಾರಿಗೂ ಸಿಕ್ಕಿಲ್ಲ, ಆದರೇ ಬಿಜೆಪಿ ಸರ್ಕಾರ ಬಂದಿದ್ದೆ ತಡ ಜೆಡಿಎಸ್ ಭದ್ರಕೋಟೆಗೆ ಶಾಕ್ ಕೊಡಲು ಹೊರಟಿದ್ದಾರೆ...ಮೊದಲ ಬಾರಿಗೆ ಹಾಸನ ನಗರ ಸಭೆಯ ಅಧಿಕಾರ ಹಿಡಿದೆ ತಿರುತ್ತೆವೆ ಎಂದು ಚಾಲೆಂಜ್ ಮಾಡಿದ್ದಾರೆ ಸ್ಥಳೀಯ ಶಾಸಕರು...ಇದರ ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ...

ಹೌದು...., ಕೆಲ ಜಿಲ್ಲೆಗಳಲ್ಲಿ ಮೀಸಲಾತಿ ಪ್ರಶ್ನಿಸಿ ಕೊರ್ಟ್ ಕದ ತಟ್ಟಿದ್ದರು ಹಾಗಾಗಿ ಒಂದುವರರೇ ವರ್ಷದಿಂದ ಅಧಿಕಾರ ಅನುಭವಿಸದೆ ಹಾಗೇ ಇದ್ದ ಚುನಾಯಿತ ಸದಸ್ಯರಿಗೆ ಕೇಲವೆ ದಿನಗಳಲ್ಲಿ ಕೊರ್ಟ್ ನಲ್ಲಿ ಸಮಸ್ಯೆ ಬಗೆಹರಿಯಲಿದೆ...ಇದನ್ನು ಮನಗಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರಕ್ಕಾಗಿ ಶತಗತ ಪ್ರಯತ್ನ ಪಡುತ್ತಿದ್ದಾರೆ.

ಜೆಡಿಎಸ್ 17, ಬಿಜೆಪಿ 14, ಕಾಂಗ್ರೇಸ್ 1 ಮತ್ತು ಪಕ್ಷೇತರ 4 ಒಟ್ಟು 35 ನಗರಸಭೆ ಸದಸ್ಯರು ಇರುವಂತ ಹಾಸನ ನಗರಸಭೆಯ ಗದ್ದುಗೆ ಹಿಡಿಯಲು ಎರಡು ಪಕ್ಷಗಳು ಪರದಾಡುತ್ತಿವೆ. ಇತ್ತ ಬಿಜೆಪಿ ಶಾಸಕ ಪ್ರೀತಂ ಗೌಡ ಮಾತ್ರ ಹಾಸನ ನಗರಸಭೆ ಅಧಿಕಾರ ಹಿಡಿಯುವ ಮೂನ್ಸೂಚನೆ ನೀಡಿದ್ದಾರೆ, ನಮ್ಮದು 14 ನಾನು ಸೇರಿದಂತೆ 15 ಆಗುತ್ತೆ ಅದರ ಜೊತೆಗೆ ಪಕ್ಷೇತರರು ನಮ್ಮ ಕಡೆ ವಾಲಿದ್ದಾರೆ, ನಾವು ಅಪರೇಶನ್, ಮೆಡಿಸನ್, ಸೀರಾಪು, ಇವೆಲ್ಲವನ್ನು ಅಧಿಕಾರ ಹಿಡಿದ ಮೇಲೆ ನಾವು ಹೇಗೆ ಕೊಡಬೇಕು ಅಂತ ಗೊತ್ತಿದೆ ಎಂದು ಜೆಡಿಎಸ್ ನಾಯಕ ರೇವಣ್ಣನವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ಇತ್ತ ನಾವೇನು ಕಮ್ಮಿ ಇಲ್ಲ ನಮ್ಮ ಕಡೆ ಕೂಡ ಚುನಾಯಿತ ಬಿಜೆಪಿ ನಗರ ಸಭೆ ಸದಸ್ಯರು ನಮ್ಮ ಕಡೆ ಇದ್ದಾರೆ ನಾವೇ ಅಧಿಕಾರ ಹಿಡಿದೆ ಹಿಡಿಯುತ್ತೆವೆ ಎಂದು ಪಣತೊಟ್ಟಂತೆ ಕಂಡು ಬಂದಿದೆ. ಬಿಜೆಪಿ ಯವರು ರಾಜ್ಯ ಸರ್ಕಾರದ ಅಧಿಕಾರವನ್ನು ವಾಮಾ ಮಾರ್ಗದಲ್ಲಿ ಹಿಡಿದು ಅಭ್ಯಾಸ ಆಗಿದೆ ಹಾಗಾಗಿ ಹಾಸನದಲ್ಲಿ ಇದನ್ನೆ ಮಾಡಲು ಹೊರಟಿದ್ದಾರೆ, ಅದೇನಾದರು ಅದರೇ ನಮ್ಮ ಹಿರಿಯ ಜೆಡಿಎಸ್ ನಾಯಕರು ಮತ್ತೆ ಕಾನೂನು ಹೋರಾಟ ಮಾಡುತ್ತೆವೆ ಅಂತಾ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಒಟ್ಟಾರೆ ಹಾಸನದಲ್ಲಿ ಜೆಡಿಎಸ್ ಭದ್ರಕೋಟೆ ಬೇದಿಸಲು ಬಿಜಿಪಿಯವರು ಮಾಸ್ಟರ್ ಪ್ಲಾನ್ ಮಾಡಿರುವುದು ಸತ್ಯ, ಅದರೇ ಜೆಡಿಎಸ್ ನವರು ಮಾಸ್ಟರ್ ಪ್ಲಾನ್ಗೆ ಅದ್ಯವಾ ಸ್ಟ್ರೋಕ್ ಕೊಡುತ್ತಾರಾ ಕಾದು ನೋಡಬೇಕಿದೆ.

ಬೈಟ್ 1 : ಗಿರೀಶ್, 8 ನೇ ವಾರ್ಡ್ ಸದಸ್ಯ.

ಬೈಟ್ 2 : ಕಮಲ್‌ಕುಮಾರ್, ಜೆಡಿಎಸ್ ಮುಖಂಡ. ( ಬಿಳಿ‌ ಚಹರೆ ಇರುವವರು )

ಬೈಟ್ 3 : ಪ್ರೀತಂ ಗೌಡ ಬಿಜೆಪಿ ಶಾಸಕ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Body:೦Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.