ETV Bharat / state

ಧಾರ್ಮಿಕ ಪರಿಷತ್ ಸಲಹೆ: ಇಂದೇ ಹಾಸನಾಂಬೆ ದೇವಾಲಯ ಮುಚ್ಚಲು ಜಿಲ್ಲಾಡಳಿತ ಸಿದ್ಧತೆ

author img

By

Published : Nov 16, 2020, 12:17 PM IST

ಒಂದು ದಿನ ಮುಂಚಿತವಾಗಿಯೇ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚುತ್ತಿರುವುದಕ್ಕೆ ಭಕ್ತಗಣ ಅಪಸ್ವರ ಎತ್ತಿತ್ತು. ಈ ಹಿನ್ನೆಲೆ ಧಾರ್ಮಿಕ ಪರಿಷತ್ ಜೊತೆ ಚರ್ಚಿಸಿ ಅದರ ಅಭಿಪ್ರಾಯದ ಆಧಾರದ ಮೇಲೆ ಇಂದೇ ಬಾಗಿಲು ಹಾಕುತ್ತಿರುವುದಾಗಿ ಹಾಸನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

hasanambe temple to be close on 16th november
ಹಾಸನಾಂಬೆ ದೇವಾಲಯ

ಹಾಸನ: ಹಾಸನಾಂಬೆ ದೇಗುಲದ ಬಾಗಿಲು ಮುಚ್ಚೋ ಬಗ್ಗೆ ಉಂಟಾಗಿದ್ದ ಗೊಂದಲದ ವಿಚಾರವಾಗಿ ಜಿಲ್ಲಾಧಿಕಾರಿ ಆರ್. ಗಿರೀಶ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಭಿಪ್ರಾಯ ಪಡೆದು ಜಿಲ್ಲಾಡಳಿತ ಇಂದು ದೇವಾಲಯದ ಬಾಗಿಲು ಮುಚ್ಚಲು ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ಹಾಸನಾಂಬೆ ದೇವಾಲಯ

ಮಾಧ್ಯಮಗಳಿಗೆ ಮಾಹಿತಿ‌ ನೀಡಿದ ಅವರು ಶಾಸ್ತ್ರದ ಪ್ರಕಾರ ಇಂದು 12.30ರ ಸುಮಾರಿಗೆ ಬಾಗಿಲು‌ ಮುಚ್ಚುವುದು ಸರಿ ಎಂದು ಧಾರ್ಮಿಕ ಪರಿಷತ್ ತಿಳಿಸಿದೆ. ಒಂದು ದಿನ ಮುಂಚಿತವಾಗಿಯೇ ಬಾಗಿಲು ಮುಚ್ಚುತ್ತಿರುವುದರ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಹೀಗಾಗಿ ಬಿದಿಗೆ ದಿನದಂದೇ ದೇವಾಲಯದ ಬಾಗಿಲು ಮುಚ್ಚುವುದು ಸರಿ ಎಂದು ರಾಜ್ಯ ಧಾರ್ಮಿಕ ಪರಿಷತ್ ತನ್ನ ಅಭಿಪ್ರಾಯ ತಿಳಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ರು. ಸಂಪ್ರದಾಯ ಮುರಿದು ಒಂದು ದಿನ ಮೊದಲೇ ಬಾಗಿಲು ಮುಚ್ಚುತ್ತಿರೋ ಬಗ್ಗೆ ಭಕ್ತರು ಅಪಸ್ವರ ಎತ್ತಿದ್ದರು. ಆದರೆ, ನಿನ್ನೆ ಅಮಾವಾಸ್ಯೆ ಮುಗಿದು ಪಾಡ್ಯ ಆರಂಭವಾಗಿರೋ ಹಿನ್ನೆಲೆಯಲ್ಲಿ ಇಂದೇ ಬಾಗಿಲು ಮುಚ್ಚಲು ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.