ETV Bharat / state

ಕ್ಯಾಂಟರ್-ಕಾರು ಮುಖಾಮುಖಿ ಡಿಕ್ಕಿ: ಧರ್ಮಸ್ಥಳಕ್ಕೆ ಹೊರಟ ತಂದೆ-ಮಗ ಸಾವು

author img

By

Published : Jun 19, 2022, 10:25 AM IST

ಕ್ಯಾಂಟರ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ತಮಿಳುನಾಡು ಮೂಲದ ಅಂಜನಪ್ಪ, ಕಾರ್ತಿಕ್ ಮೃತಪಟ್ಟಿದ್ದಾರೆ.

accident in hassan
ಕ್ಯಾಂಟರ್ ಕಾರು ಆ್ಯಕ್ಸಿಡೆಂಟ್

ಹಾಸನ: ಕ್ಯಾಂಟರ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ತಂದೆ ಹಾಗು ಮಗ ದುರ್ಮರಣಕ್ಕೀಡಾದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಆಲೂರು-ಈಶ್ವರಹಳ್ಳಿ ರಸ್ತೆಯ ಕೂಡಿಗೆ ಸಮೀಪ ನಡೆಯಿತು. ತಮಿಳುನಾಡು ಮೂಲದ ಅಂಜನಪ್ಪ (40), ಪುತ್ರ ಕಾರ್ತಿಕ್ (17) ಮೃತ ದುರ್ದೈವಿಗಳು.

ಧರ್ಮಸ್ಥಳಕ್ಕೆಂದು ಎರಡು ಕಾರಿನಲ್ಲಿ 10 ಮಂದಿ ತೆರಳುತ್ತಿದ್ದರು. ಅದರಲ್ಲಿ ಒಂದು ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಹೆದ್ದಾರಿಯ ಹಲವೆಡೆ ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳಕ್ಕೆ ಆಲೂರು ವೃತ್ತ ನಿರೀಕ್ಷಕ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ: ಪಿಯುಸಿ ಫಲಿತಾಂಶ: ಕೊಡಗು, ವಿಜಯನಗರದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.