ETV Bharat / state

ಅನುಮಾನಾಸ್ಪದವಾಗಿ ಕಾಡಾನೆ ಸಾವು : ಅರಣ್ಯ ಅಧಿಕಾರಿಗಳೊಂದಿಗೆ ಸ್ಥಳೀಯರ ವಾಗ್ವಾದ

author img

By

Published : Mar 14, 2021, 7:58 PM IST

ಇದು ಅರಣ್ಯ ಇಲಾಖೆಯವರ ಬೇಜವಾಬ್ದಾರಿತನ ಎಂಬುದನ್ನು ಎತ್ತಿ ತೋರಿಸುತ್ತಿದೆ. 15 ದಿನದಲ್ಲಿ ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದರೆ ಹಾಸನದ ಅರಣ್ಯ ಇಲಾಖೆಯ ಮುಂದೆ ನಾವೆಲ್ಲರೂ ಧರಣಿ ಕೂರಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ..

elephant-died-in-sakleshpura
ಅನುಮಾನಾಸ್ಪದವಾಗಿ ಕಾಡಾನೆ ಸಾವು:

ಹಾಸನ/ಸಕಲೇಶಪುರ : ತಾಲೂಕಿನ ಸೊಂಡೆಕೆರೆ ಗ್ರಾಮದ ಸಮೀಪ ಗಂಡಾನೆಯೊಂದು ಅನುಮಾನಸ್ಪದವಾಗಿ ಮೃತಪಟ್ಟಿದೆ.

ಸುಮಾರು ಐದಾರು ಕಾಡಾನೆಗಳು ಸತ್ತ ಆನೆ ಬಳಿ ನಿಂತು ಗೀಳಿಟ್ಟು ಮೂಕರೋಧನೆ ಅನುಭವಿಸಿವೆ. ಈ ಶಬ್ದ ಕೇಳಿಸಿಕೊಂಡ ಸ್ಥಳಕ್ಕೆ ಬಂದ ಸ್ಥಳೀಯರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಾಡಾನೆ ಸಾವಿನ ಕುರಿತು ಪ್ರಾಣಿಪ್ರಿಯರ ಆಕ್ರೋಶ..

ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಆನೆ ಮೃತಪಟ್ಟು ಎಂಟರಿಂದ ಹತ್ತು ದಿನಗಳಾಗಿವೆ. ಆನೆಯ ದೇಹದ ಅನೇಕ ಭಾಗಗಳು ಕೊಳೆತು ಹೋಗಿವೆ. ಮೇಲ್ನೋಟಕ್ಕೆ ಇದನ್ನ ಕೊಂದಿದ್ದಾರೆ ಎಂಬುದಕ್ಕೆ ಯಾವುದೇ ನಿಖರ ಸಾಕ್ಷಿಗಳು ದೊರೆಯುತ್ತಿಲ್ಲ. ಆದರೆ, ಪರೀಕ್ಷೆಗೊಳಪಟ್ಟ ಬಳಿಕ ಸಾವಿನ ನಿಖರ ಕಾರಣ ಏನೆಂಬುದನ್ನು ಹೇಳಬಹುದು ಎಂದಿದ್ದಾರೆ.

ಈಗಾಗಲೇ ನಾವು ಗುಂಡು ಪತ್ತೆ ಹಚ್ಚುವ ಯಂತ್ರದಿಂದ ಆನೆ ದೇಹವನ್ನು ಪರೀಕ್ಷೆ ಮಾಡಿದ್ದೇವೆ. ಇದರಲ್ಲಿ ಗುಂಡು ತಗಲಿರುವ ಸಾಧ್ಯತೆ ಕಡಿಮೆ ಇದೆ. ಆದರೆ, ಕಾಡಾನೆಗಳ ನಡುವಿನ ಜಗಳದಿಂದ ಏನಾದರೂ ಸತ್ತಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಆದರೆ, ಆನೆ ಸತ್ತ 48 ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ಮಾಡಿದರೆ ಮಾತ್ರ ಸ್ಪಷ್ಟ ಕಾರಣ ತಿಳಿಯಬಹುದಾಗಿತ್ತು. ಈಗ ಕಷ್ಟವಿದೆ ಎಂದಿದ್ದಾರೆ.

ಕಳೆದ 15-20 ದಿನಗಳಿಂದ ಈ ಭಾಗದಲ್ಲಿ ಆನೆಗಳು ಸಂಚಾರ ಮಾಡುತ್ತಿವೆ. ಈ ವಿಚಾರವನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ಸ್ಥಳೀಯರು ತಂದಿದ್ದರೂ ಕೂಡ ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯ ಮಾಡಿರಲಿಲ್ಲ. ಈ ಭಾಗದಲ್ಲಿ ಸುಮಾರು 18ಕ್ಕೂ ಹೆಚ್ಚು ಆನೆಗಳಿವೆ.

ಈ ಹಿಂದೆ ಎರಡು ಆನೆಗಳು ಸತ್ತಾಗ, ಅವುಗಳ ದಂತಗಳನ್ನ ದುಷ್ಕರ್ಮಿಗಳು ಕದ್ದೊಯ್ದಿದ್ದರು. ಅದರ ಬಗ್ಗೆಯೂ ಕೂಡ ಅಧಿಕಾರಿಗಳು ತನಿಖೆ ಮಾಡದೆ ಮೌನವಹಿಸಿದ್ದಾರೆ. ಇಂತಹ ಕೃತ್ಯ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಪೊಲೀಸ್ ಇಲಾಖೆಗೆ ಪ್ರಕರಣ ವರ್ಗಾಯಿಸಲಿ.

ಇದು ಅರಣ್ಯ ಇಲಾಖೆಯವರ ಬೇಜವಾಬ್ದಾರಿತನ ಎಂಬುದನ್ನು ಎತ್ತಿ ತೋರಿಸುತ್ತಿದೆ. 15 ದಿನದಲ್ಲಿ ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದರೆ ಹಾಸನದ ಅರಣ್ಯ ಇಲಾಖೆಯ ಮುಂದೆ ನಾವೆಲ್ಲರೂ ಧರಣಿ ಕೂರಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಓದಿ: ಪದೇಪದೆ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ವಿರುದ್ಧ ಹೆಚ್​ಡಿಕೆ ಕಿಡಿ

ಕಳೆದ ಮೂರು ತಿಂಗಳಲ್ಲಿ ಮೂರು ಕಾಡಾನೆ ಮೃತಪಟ್ಟಿವೆ. ಕೆಲವು ದುಷ್ಕರ್ಮಿಗಳು ದಂತಕ್ಕಾಗಿ ಈ ರೀತಿ ಕೃತ್ಯ ಎಸಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಾಣಿಗಳು ಕೇವಲ ಅರಣ್ಯ ಇಲಾಖೆಯವರಿಗೆ ಮಾತ್ರ ಒಳಪಡುವುದಿಲ್ಲ.

ನಮಗೂ ಕೂಡ ಪ್ರಾಣಿಗಳೆಂದರೆ ಪ್ರೀತಿಯಿದೆ. ಅವುಗಳ ಸಾವು ನಮಗೂ ನೋವನ್ನುಂಟು ಮಾಡುತ್ತದೆ. ಇಂಥ ಹೇಯ ಕೃತ್ಯ ಎಸಗಿರುವವರ ವಿರುದ್ಧ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.