ETV Bharat / state

ನಾವು JDS ಜೊತೆ ಗುದ್ದಾಡಿ ಪಕ್ಷ ಕಟ್ಟೋದು, ಇನ್ನೊಬ್ರು ಅಡ್ಜಸ್ಟ್​ಮೆಂಟ್​ ರಾಜಕಾರಣ ಮಾಡೋದಾ..ಸಿಎಂ ವಿರುದ್ಧ ಶಾಸಕ ಪ್ರೀತಂ ಗೌಡ ಕೆಂಡ!!

author img

By

Published : Aug 7, 2021, 4:27 PM IST

Updated : Aug 7, 2021, 5:06 PM IST

ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾದರೂ ಅದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದು ಸಿಎಂ ವಿರುದ್ಧ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಆಕ್ರೋಶ ಹೊರ ಹಾಕಿದ್ದಾರೆ.

bjp mla preetham gowda outarage against cm basavaraja bommai
ಸಿಎಂ ವಿರುದ್ಧ ಶಾಸಕ ಪ್ರೀತಂ ಗೌಡ ವಾಗ್ದಾಳಿ

ಹಾಸನ: ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾದರೂ ಅದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಹಾಸನಕ್ಕೆ ಯಾವುದೇ ಮಂತ್ರಿ ವರ್ಗಗಳು ಬಂದರೂ ಬೇರೆ ಪಕ್ಷದ ಮನೆಗಳಿಗೆ ಹೋಗಿ ಊಟ ಮಾಡಿಕೊಂಡು ಹೋಗುವುದಾದರೆ ಇದನ್ನು ನಾವು ಮುಂದಿನ ದಿನಗಳಲ್ಲಿ ಸಹಿಸುವುದಿಲ್ಲ. ಇದು ನಮ್ಮ ಪಕ್ಷದ ಕಾರ್ಯಕರ್ತರ ನೈತಿಕತೆ ಕುಗ್ಗಿಸಿದಂತಾಗುತ್ತದೆ ಎಂದರು.

ಮೊದಲು ದೇವೇಗೌಡರ ಮನೆಗೆ ಹೋಗಿದ್ದು ತಪ್ಪಲ್ವೇ?

ಮೊದಲು ಸಿದ್ಧಗಂಗಾ ಮಠಕ್ಕೋ, ಸಿರಿಗೆರೆ ಮಠಕ್ಕೆ ಅಥವಾ ಸುತ್ತೂರು ಮಠಕ್ಕೆ ಹೋಗಿದ್ದರೆ ಮುಖ್ಯಮಂತ್ರಿ ಅವರ ಘನತೆ ಮತ್ತಷ್ಟು ಹೆಚ್ಚುತ್ತಿತ್ತು. ದೇವೇಗೌಡರ ಮನೆಗೆ ಹೋಗಿ ಮೊದಲು ಆಶೀರ್ವಾದ ಪಡೆಯುತ್ತಾರೆ ಎಂದರೆ, ಇದು ಬಿಜೆಪಿಯ ಕಾರ್ಯಕರ್ತರಿಗೆ ಬೇಸರವಾಗಿರುವಾಗ ನನಗೂ ಬೇಸರವಾಗುವುದಿಲ್ಲವೇ? ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಹಾಸನ ಶಾಸಕ ಪ್ರೀತಮ್ ಗೌಡ ಆಕ್ರೋಶ ಹೊರಹಾಕಿದ್ರು.

ಸಿಎಂ ವಿರುದ್ಧ ಶಾಸಕ ಪ್ರೀತಂ ಗೌಡ ವಾಗ್ದಾಳಿ

ಅಡ್ಜಸ್ಟ್​ಮೆಂಟ್​ ರಾಜಕಾರಣ ಯಾಕೆ?

ನಾವುಗಳು ಜೆಡಿಎಸ್ ವಿರುದ್ಧ ರಾಜಕಾರಣ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಆದರೆ, ಇವರು ಮೇಲ್ಮಟ್ಟದಲ್ಲಿ ಅವರೊಂದಿಗೆ ಒಪ್ಪಂದದ ರಾಜಕಾರಣ ಮಾಡಿಕೊಳ್ಳುವುದಾದರೆ ಇದು ಕಾರ್ಯಕರ್ತರ ಮನಸ್ಸಿಗೆ ನೋವುಂಟು ಮಾಡಿದೆ. ನಾನು ಯಾವುದೇ ಮುಲಾಜಿಗೆ ಒಳಗಾಗಿ ರಾಜಕಾರಣ ಮಾಡುವವನಲ್ಲ. ನನ್ನ ಶಾಸಕನಾದ ಸಂದರ್ಭದಲ್ಲಿ ನನ್ನ ಮನೆಗೆ ಕಲ್ಲು ಹೊಡೆದ ಸಂದರ್ಭದಲ್ಲಿ ನಮ್ಮ ಮನೆಗೆ ಬಂದು ಆರ್ ಅಶೋಕ್ ಧೈರ್ಯ ತುಂಬಿದವರು.

ನಾವು ಯಾರೂ ರಾಜಕೀಯ ಸನ್ಯಾಸಿಗಳಲ್ಲ!

ಅಂತಹ ನಾಯಕರೊಂದಿಗೆ ಬೆಳೆದ ವ್ಯಕ್ತಿ ನಾನು. ನಾವು ಇಲ್ಲಿ ದಿನ ಬೆಳಗ್ಗೆ ಜಾತ್ಯತೀತ ಪಕ್ಷದೊಂದಿಗೆ ಗುದ್ದಾಟ ಮಾಡಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಆದರೆ, ಇವರು ಮೇಲ್ಮಟ್ಟದಲ್ಲಿ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿಕೊಳ್ಳುವುದಾದರೆ ನಾವುಗಳು ಯಾರೂ ರಾಜಕೀಯ ಸನ್ಯಾಸಿಗಳಲ್ಲ.

ಶಾಸಕ ಪ್ರೀತಂ ಗೌಡ ಪ್ರತಿಕ್ರಿಯೆ

ನಾನು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ವಿರುದ್ಧ ಗೆದ್ದು ಬಂದ ಶಾಸಕ. ಸಣ್ಣ ವಿಚಾರವನ್ನು ಈ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಹೈಕಮಾಂಡಿಗೆ ದೂರು ಹೇಳಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಹೇಳಿದರೆ ನಾನು ಜೆಡಿಎಸ್​ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇನೆ. ಅದನ್ನು ಬಿಟ್ಟು ನಮ್ಮ ನೈತಿಕತೆಯನ್ನು ಕುಗ್ಗಿಸುವ ಕೆಲಸ ಮಾಡಬಾರದು.

ನಾನು ಜನತಾದಳ ದೊಂದಿಗೆ ಮಾಡಿಕೊಂಡು ರಾಜಕಾರಣ ಮಾಡುವುದು ಮನೆಗೆ ಕೊಡಿಸಿಕೊಂಡು ಪಕ್ಷ ಸಂಘಟನೆ ಮಾಡುವುದು. ಆದರೆ, ಇವರು ಜನತಾದಳದ ಮನೆಗೆ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವುದಾದರೆ ನಾವ್ಯಾಕೆ ರಾಜಕಾರಣ ಮಾಡಬೇಕು. ಸದ್ಯ ಮುಖ್ಯಮಂತ್ರಿಗಳು ಬ್ಯುಸಿಯಾಗಿದ್ದು ಸೋಮವಾರದ ನಂತರ ಎಲ್ಲ ಸಮಸ್ಯೆಯನ್ನು ನಾನೇ ಖುದ್ದು ಅವರೊಂದಿಗೆ ಮಾತನಾಡುತ್ತೇನೆ.

ಸಿಎಂಗೇ ಪ್ರೀತಂ ಸವಾಲು..!

ಅದನ್ನು ಬಿಟ್ಟು ಜನತಾದಳದ ಪರವಾಗಿ ಸರ್ಕಾರ ಕೆಲಸ ಮಾಡಿಕೊಂಡು, ನನ್ನ ವಿರುದ್ಧ ಯಾವುದಾದರೂ ಕೆಲಸ ಮಾಡಿದರೆ, ಸಾಮಾನ್ಯ ಶಾಸಕನಾಗಿ ಮುಂದಿನ ರಾಜಕೀಯ ಹೇಗಿರುತ್ತೆ ಎಂಬುದನ್ನು ತೋರಿಸುತ್ತೇನೆ ಅಂತ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.

ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ಒಕ್ಕಲಿಗ ನಾಯಕರುಗಳಿದ್ದಾರೆ. ಅವರೆಲ್ಲರನ್ನೂ ಈ ಬಾರಿ ಕಡೆಗಣಿಸಿದ್ದಾರೆ. ಕನಿಷ್ಠ ಹಳೆ ಮೈಸೂರು ಭಾಗದಲ್ಲಿ ನಾನು ಸೇರಿದಂತೆ 8 ಮಂದಿ ಒಕ್ಕಲಿಗ ನಾಯಕರಿದ್ದು, ಯಾರೊಬ್ಬರಿಗೂ ಮಂತ್ರಿ ಸ್ಥಾನ ನೀಡದಿರುವುದು ಮನಸ್ಸಿಗೆ ತುಂಬಾ ನೋವು ಉಂಟಾಗಿದೆ.

ರಾಜಕೀಯದ ಇತಿಮಿತಿಯೊಳಗೆ ಸಚಿವ ಸಂಪುಟ ರಚನೆಯಾಗಿದ್ದರೂ ಅದಕ್ಕೂ ಮುನ್ನ ಜನತಾದಳದ ಮನೆಗೆ ಹೋಗಿ ಅವರ ಆಶೀರ್ವಾದ ಪಡೆಯುತ್ತೀರಿ ಎಂದರೆ, ಅದು ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದಂತೆ ಅಂತ ಮುಖ್ಯಮಂತ್ರಿಗಳ ವಿರುದ್ಧ ಧ್ವನಿಯೆತ್ತುವ ಮೂಲಕ ನಾನು ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂಬುದನ್ನು ಹೇಳುವ ಮೂಲಕ ಹಾಸನದಿಂದ ಬಂಡಾಯ ಏಳುವ ಸಾಧ್ಯತೆಗಳು ಇದೆ ಎಂಬುದನ್ನು ವ್ಯಕ್ತಪಡಿಸಿದರು.

Last Updated : Aug 7, 2021, 5:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.