ETV Bharat / state

ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಿಗ

author img

By

Published : Feb 7, 2022, 12:45 PM IST

ಅರಸೀಕೆರೆಯ ಸೂಳೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಕ್ತಿಯೊಬ್ಬರ ಖಾತೆ ಬದಲಾವಣೆಗಾಗಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆಯುವಾಗ ಗ್ರಾಮಲೆಕ್ಕಿಗನೊಬ್ಬ ಎಸಿಬಿ ಬಲೆ ಬಿದ್ದಿದ್ದಾನೆ.

ACB trapped village accountant when he was taking bribe
ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಿಗ

ಅರಸೀಕೆರೆ: ಖಾತೆ ಬದಲಾವಣೆಗಾಗಿ 5 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಗ್ರಾಮ ಲೆಕ್ಕಿಗನೊಬ್ಬ ಬಿದ್ದಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ. ಸಿದ್ದೇಶ್ ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿಯ ಗ್ರಾಮಲೆಕ್ಕಿಗ.

ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಿಗ

ಪ್ರಕರಣದ ವಿವರ: ತಾಲೂಕಿನ ಸೂಳೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಕ್ತಿಯೊಬ್ಬರ ಖಾತೆ ಬದಲಾವಣೆಗಾಗಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಐದು ಸಾವಿರ ರೂಪಾಯಿಗಳನ್ನು ಕಚೇರಿಯಲ್ಲಿ ಪಡೆಯದೇ ಅರಸೀಕೆರೆಯ ನಗರ ಪ್ರವಾಸಿ ಮಂದಿರದಲ್ಲಿ ಪಡೆಯುವಾಗ ಎಸಿಬಿ ದಾಳಿ ನಡೆಸಿದೆ.

ಇದನ್ನೂ ಓದಿ: ಕೊರೊನಾಗೆ ಗೆಳೆಯ ಬಲಿ: ಸ್ನೇಹಿತನ ಮಡದಿಗೆ ಬಾಳು ಕೊಟ್ಟ ಚಾಮರಾಜನಗರದ ಯುವಕ

ಪ್ರಭಾರ ಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ದಾಳಿಯ ವೇಳೆ ಡಿಎಸ್ಪಿ ಸತೀಶ್, ಇನ್ಸ್ ಪೆಕ್ಟರ್​ಗಳಾದ ಶಿಲ್ಪ, ವೀಣಾ, ಸಿಬ್ಬಂದಿಗಳಾದ ಆದಿ, ರೇಖಾ ಹಾಗೂ ಇನ್ನಿತರರು ಇದ್ದರು. ಆರೋಪಿ ಸಿದ್ದೇಶನನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಸಂಜೆಯೊಳಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.