ಆಸ್ಪತ್ರೆಗೆ ದಾಖಲಾಗುವ ವೇಳೆ ಆ್ಯಂಬುಲೆನ್ಸ್​ನಲ್ಲೇ ಹೆರಿಗೆ, ತಾಯಿ-ಮಗು ಸುರಕ್ಷಿತ

author img

By

Published : Nov 25, 2021, 7:58 PM IST

woman gave birth to baby in ambulance

ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದ ಕವಿತಾ ಪೂಜಾರಿ ಅವರಿಗೆ ರಕ್ತ ಕಡಿಮೆ ಇದ್ದ ಕಾರಣ ನಗರದ ಖಾಸಗಿ ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ಚಿಕಿತ್ಸೆಗಾಗಿ ರೆಫರ್ ಮಾಡಲಾಗಿತ್ತು. ಅದರಂತೆ ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯದಲ್ಲಿಯೇ ಸುಸೂತ್ರ ಹೆರಿಗೆ‌ ನಡೆಯಿತು.

ಗದಗ: ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆ ಆ್ಯಂಬುಲೆನ್ಸ್​ನಲ್ಲೇ ಹೆರಿಗೆಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದ ಕವಿತಾ ಪೂಜಾರಿಗೆ ರಕ್ತ ಕಡಿಮೆ ಇದ್ದ ಕಾರಣ ನಗರದ ಖಾಸಗಿ ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ಚಿಕಿತ್ಸೆಗಾಗಿ ರೆಫರ್ ಮಾಡಲಾಗಿತ್ತು. ಅದರಂತೆ ಆಸ್ಪತ್ರೆಗೆ ತೆರಳುವಾಗ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಾರ್ಗಮಧ್ಯದಲ್ಲೇ ಸುಸೂತ್ರ ಹೆರಿಗೆ‌ ನಡೆಯಿತು.

ಹೆರಿಗೆ ಸಂದರ್ಭದಲ್ಲಿ ಕರುಳಬಳ್ಳಿ ಮಗುವಿನ ಕುತ್ತಿಗೆಗೆ ಸಿಕ್ಕಿ ಗರ್ಭಿಣಿ ಪರದಾಟ ಅನುಭವಿಸಿದರು. ಆಗ ಆ್ಯಂಬುಲೆನ್ಸ್​ನಲ್ಲಿದ್ದ ತುರ್ತು ಆರೋಗ್ಯ ತಜ್ಞ ರವಿ ಬಡಿಗೇರ್, 108 ಪೈಲೆಟ್ ದಸ್ತಗೀರ್ ಸಾಬ್ ಹುಡೇದ್, ಆಶಾ ಕಾರ್ಯಕರ್ತೆ ಮುತ್ತವ್ವ ಅವರು ಹೆರಿಗೆ ಮಾಡಿಸಿದರು. ಸದ್ಯ ತಾಯಿ-ಮಗು ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ: ನಾನು ದಂಧೆ ಮಾಡಿಲ್ಲ, ಲೂಟಿ ಹೊಡೆದಿಲ್ಲ, ಜೂಜಾಡಿಲ್ಲ ನಂಗೊಂದ್ ವೋಟ್ ಕೊಡಿ: ಪರಿಷತ್​ ಅಭ್ಯರ್ಥಿ ವಾಟಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.