ETV Bharat / state

'ನೀವು ಬೆಳಗಾವಿಗೆ ಬಂದ್ರೇ ನಾವು ಕೊಲ್ಲಾಪುರ, ಸಾಂಗ್ಲಿಗೆ ನುಗ್ತೇವೆ..'

author img

By

Published : Jan 19, 2021, 5:24 PM IST

Updated : Jan 19, 2021, 8:48 PM IST

ನೀವು ಹೇಗೆ ನಿಪ್ಪಾಣಿ ಬೆಳಗಾವಿ ನಮ್ಮದು ಎನ್ನುತ್ತಿದ್ದಿರೋ ಹಾಗೇಯೇ ಕೊಲ್ಲಾಪುರ, ಸಾಂಗ್ಲಿ ನಮಗೆ ಸೇರಿವೆ. ಈ ರೀತಿ ಹೇಳಿಕೆಗಳನ್ನು ನೀಡಿದ್ರೆ ನಾವು ಕೂಡ ಮಹಾರಾಷ್ಟ್ರಕ್ಕೆ ನುಗ್ಗಬೇಕಾಗುತ್ತದೆ..

karave potest
ಕರವೇ ಪ್ರತಿಭಟನೆ

ದಾವಣಗೆರೆ/ಗದಗ : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಸಿ ದಾವಣಗೆರೆ ಮತ್ತು ಗದಗದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

ಕರ್ನಾಟಕದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ದಾವಣಗೆರೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಯದೇವ ವೃತ್ತದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗಿದೆ.

ಮಹಾ ಸಿಎಂ ಹೇಳಿಕೆ ಖಂಡಿಸಿ ಕರವೇ ಪ್ರತಿಭಟನೆ

ನೀವು ಹೇಗೆ ನಿಪ್ಪಾಣಿ ಬೆಳಗಾವಿ ನಮ್ಮದು ಎನ್ನುತ್ತಿದ್ದಿರೋ ಹಾಗೇಯೇ ಕೊಲ್ಲಾಪುರ, ಸಾಂಗ್ಲಿ ನಮಗೆ ಸೇರಿವೆ. ಈ ರೀತಿ ಹೇಳಿಕೆಗಳನ್ನು ನೀಡಿದ್ರೆ ನಾವು ಕೂಡ ಮಹಾರಾಷ್ಟ್ರಕ್ಕೆ ನುಗ್ಗಬೇಕಾಗುತ್ತದೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಯಲ್ಲಪ್ಪ ಎಚ್ಚರಿಕೆ ನೀಡಿದರು.

ಗದಗದಲ್ಲಿ ಕೂಡ ಕರವೇ ಸಂಘಟನೆಯ ಕಾರ್ಯಕರ್ತರು ಮಹಾರಾಷ್ಟ್ರ ಸಿಎಂ ಹೇಳಿಕೆ ಖಂಡಿಸಿ ನಗರದ ಗಾಂಧಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಿ ಉದ್ಭವ್ ಠಾಕ್ರೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಜೊತೆಗೆ ಸೂರ್ಯ-ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಆಸ್ತಿಯಾಗಿದೆ.

ಮಹಾರಾಷ್ಟ್ರದ ಕೊಲ್ಲಾಪೂರ, ಸೊಲ್ಲಾಪುರ, ಸಾಂಗ್ಲಿ, ಮೀರಜ್ ಸೇರಿದಂತೆ ಕೆಲವು ಜಿಲ್ಲೆಗಳು ಕರ್ನಾಟಕಕ್ಕೆ ಸೇರಬೇಕೆಂದು ಕರವೇಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Last Updated : Jan 19, 2021, 8:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.