ETV Bharat / state

ಎರಡು ಮನೆ ಕಳ್ಳತನ: 5 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ದರೋಡೆ

author img

By

Published : Oct 19, 2020, 10:30 PM IST

ಒಂದೇ ವಾರದಲ್ಲಿ ಹಾಡಹಗಲೇ ಎರಡು ಮನೆ ಕಳ್ಳತನವಾಗಿದ್ದು, ಕಳ್ಳರು ಸುಮಾರು 50 ಸಾವಿರ ರೂ. ನಗದು ಮತ್ತು ಐದು ಲಕ್ಷ ರೂ, ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ.

Gadag
ಗದಗ

ಗದಗ: ಒಂದೇ ವಾರದಲ್ಲಿ ಹಾಡಹಗಲೇ ಎರಡು ಮನೆ ಕಳ್ಳತನವಾಗಿರುವ ಘಟನೆ ಗದಗದಲ್ಲಿ ನಡೆದಿದೆ.

ಸುಮಾರು 50 ಸಾವಿರ ರೂ. ನಗದು ಮತ್ತು ಐದು ಲಕ್ಷ ರೂ, ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಅಕ್ಟೋಬರ್ 11 ರಂದು ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿ ಕಳ್ಳತನ ನಡೆದಿದೆ. ಬೆಟಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಸುನಂದಾ ಅಶೋಕ ಶಿಸುವಿನಹಳ್ಳಿ ಎಂಬುವರ ಮನೆಯ ಬೀಗ ಮುರಿದ ಕಳ್ಳರು, 21 ಗ್ರಾ. ನೆಕ್ಲೆಸ್, 10 ಗ್ರಾಂ. ಬಳೆ, ಬ್ರಾಸ್ ಲೇಟ್, ರಿಂಗ್ ಸೇರಿದಂತೆ 1 ಲಕ್ಷ 58 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಇನ್ನು ಕಳೆದ ಶನಿವಾರದಂದು ಕೇಶವ ನಗರದ ಸಾಗರ ರವೀಂದ್ರನಾಥ ಮಾಶಾಳ ಎಂಬುವರ ಮನೆ ದರೋಡೆ ಮಾಡಿದ್ದಾರೆ. ‌ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಾಗಿಲು ಮುರಿದು ಟ್ರೇಜರಿಯಲ್ಲಿದ್ದ 45 ಸಾವಿರ ನಗದು ಸೇರಿದಂತೆ 1 ಲಕ್ಷ 33 ಸಾವಿರ ರೂ, ಮೌಲ್ಯದ ಬಂಗಾರದ ಆಭರಣಗಳು, 13 ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣಗಳು 1 ಲಕ್ಷ 50 ಸಾವಿರ ರೂ, ಮೌಲ್ಯದ ಬಟ್ಟೆಗಳನ್ನು ಹೊತ್ತೊಯ್ದಿದ್ದಾರೆ.

ಇನ್ನು ಈ ಸಂಬಂಧ ಬೆಟಗೇರಿ ಹಾಗೂ ಗದಗ‌ ಶಹರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.‌ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.