ETV Bharat / state

ಗದಗ: ಲೋಕ್ ಅದಾಲತ್​ನಲ್ಲಿ ಮತ್ತೆ ಒಂದಾದ ಜೋಡಿಗಳು

author img

By

Published : Mar 28, 2021, 6:50 AM IST

Updated : Mar 29, 2021, 1:08 PM IST

ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟು ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಎರಡು ಜೋಡಿಗಳು ಮತ್ತೊಮ್ಮೆ ಒಂದಾಗಿರುವ ಘಟನೆ ಗದಗ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

Two couples reunited at gadag Lok Adalat
Two couples reunited at gadag Lok Adalat

ಗದಗ: ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ಹಿನ್ನೆಲೆ ವಿಚ್ಛೇದನಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದ ಎರಡು ಜೋಡಿಗಳು ಇದೀಗ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ್​ ಅದಾಲತ್​ನಲ್ಲಿ ಮತ್ತೆ ಒಂದಾಗಿರುವ ಘಟನೆ ನಡೆದಿದೆ.

ಗದಗ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ್​ ಅದಾಲತ್

ಹೌದು, ಗದಗ ಜಿಲ್ಲೆಯ ರವಿಕುಮಾರ್ ಸೊಪ್ತಿಮಠ ಹಾಗೂ ಕೊಪ್ಪಳ ಮೂಲದ ಪೂಜಾ ಎನ್ನುವವರು 2014 ರಲ್ಲಿ ಮದುವೆಯಾಗಿದ್ದರು. ಆದರೆ ಎರಡು ಮಕ್ಕಳಾದ ಮೇಲೆ ಕೌಟುಂಬಿಕ ಕಲಹ ಆರಂಭವಾಗಿತ್ತು. ಜೊತೆಗೆ ಮನೆಯಲ್ಲಿ ಅತ್ತೆ ಹಾಗೂ ನಾದಿನಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗಂಡ ರವಿಕುಮಾರ್ ಅವರನ್ನು ಬಿಟ್ಟು ಪೂಜಾ ತವರು ಮನೆಗೆ ಬಂದಿದ್ದಳು. ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಆದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಂಡ-ಹೆಂಡತಿ ಮತ್ತೆ ಒಂದಾಗಿ ಬಾಳುತ್ತೇವೆ ಎಂದು ನಿರ್ಧರಿಸಿ ಲೋಕ್ ಅದಾಲತ್​ನಲ್ಲಿ ಒಂದಾಗಿದ್ದಾರೆ.

ಇನ್ನು ಗದಗ ಜಿಲ್ಲೆಯ ಅಶೋಕ ಮಲ್ಲಸಮುದ್ರ ಹಾಗೂ ಸುಧಾ ಎನ್ನುವರು ಕಳೆದ 16 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದ 10 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು. ಇವರ ಜಗಳದಲ್ಲಿ ಎರಡು ಗಂಡು ಮಕ್ಕಳು ಅನಾಥರಂತೆ ವಾಸವಾಗಿದ್ದರು. ಈ ಕುರಿತು ಕಳೆದ ಹಲವಾರು ವರ್ಷಗಳಿಂದ ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿತ್ತು. ಆದರೆ ನ್ಯಾಯಾಧೀಶರ ಸಮ್ಮುಖದಲ್ಲಿ ಗಂಡ, ಹೆಂಡತಿ ಒಪ್ಪಿಗೆ ಪಡೆದು ಮತ್ತೊಮ್ಮೆ ಹಾರ ಬದಲಾಯಿಸಿಕೊಂಡು ಒಂದಾಗಿದ್ದಾರೆ.

ಜಿಲ್ಲೆಯಾದ್ಯಂತ ನಡೆದ ಲೋಕ್ ಅದಾಲತ್​ನಲ್ಲಿ ನಿನ್ನೆ ಸುಮಾರು 4 ಸಾವಿರ ಕೇಸ್​ಗಳನ್ನು ಇತ್ಯರ್ಥ ಮಾಡಲು ಉದ್ದೇಶಿಸಿದ್ದು, ಸರ್ಕಾರಿ, ಸಿವಿಲ್ ಸೇರಿದಂತೆ ಆಯ್ದ ಕೇಸ್​ಗಳಿಗೆ ಅಂತ್ಯ ಹಾಡಿ ಕಕ್ಷಿದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ನ್ಯಾಯಾಧೀಶರು ಮಾಡಿದ್ದಾರೆ.

Last Updated : Mar 29, 2021, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.