ETV Bharat / state

ಮುಂಬೈನಿಂದ ಗದಗಿಗೆ ರೈಲು ಆಗಮನ: ಮುಂಜಾಗೃತಾ ಕ್ರಮ ಕೈಗೊಂಡ ಜಿಲ್ಲಾಡಳಿತ

author img

By

Published : Jun 2, 2020, 2:05 PM IST

ಮುಂಬೈನಿಂದ ಗದಗ ಜಿಲ್ಲೆಗೆ ಇಂದು ರೈಲು ಆಗಮಿಸಿದ್ದು, ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

ಗದಗಕ್ಕೆ ಮುಂಬೈನಿಂದ ರೈಲು ಆಗಮನ
ಗದಗಕ್ಕೆ ಮುಂಬೈನಿಂದ ರೈಲು ಆಗಮನ

ಗದಗ: ಮುಂಬೈನಿಂದ ಜಿಲ್ಲೆಗೆ ಇಂದು ರೈಲು ಆಗಮಿಸಿದ್ದು, 124 ಜನ ಪ್ರಯಾಣಿಕರನ್ನು ಕರೆತಂದಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ. ಆರೋಗ್ಯ ತಪಾಸಣೆಗೆ ಎಂದು 2 ಕೌಂಟರ್​ಗಳನ್ನು ಮಾಡಲಾಗಿದ್ದು, ಪ್ರಯಾಣಿಕರ ಆಧಾರ್​ ಕಾರ್ಡ್​ ನೋಡಿದ ಬಳಿಕ ಸ್ಕ್ರೀನಿಂಗ್​ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ, ಪೊಲೀಸ್​ ಇಲಾಖೆಯೂ ಕ್ರಮಗಳನ್ನು ಕೈಗೊಂಡಿದೆ.

ಗದಗಕ್ಕೆ ಮುಂಬೈನಿಂದ ರೈಲು ಆಗಮನ

ಸಿಪಿಐ ಬಿ.ಎ ಬಿರಾದಾರ ನೇತೃತ್ವದಲ್ಲಿ 25 ಪೊಲೀಸ್ ಸಿಬ್ಬಂದಿ ಮತ್ತು 17 ಜನ ರೈಲ್ವೆ ಪೊಲೀಸ್, 10 ಜನ ಆರ್​ಪಿಎಫ್​ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಸದ್ಯ ಸ್ಥಳಕ್ಕೆ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಎಸ್ಪಿ ಎನ್. ಯತೀಶ್, ಎಸಿ ರಾಯಪ್ಪ, ತಹಶೀಲ್ದಾರ್​​​ ಶ್ರೀನಿವಾಸ್ ಮೂರ್ತಿ, ಉಪತಹಶೀಲ್ದಾರ್ ಸಂಜೀವ್ ಸಿಂಪರ್ ಠಿಕಾಣಿ ಹೂಡಿದ್ದಾರೆ.

ಇನ್ನು ಮುಂಬೈದಿಂದ ಬಂದ ಎಲ್ಲ ಪ್ರಯಾಣಿಕರಿಗೆ ಗದಗದ ವಿವಿಧೆಡೆ ಮೊದಲೇ ನಿಯೋಜನೆಗೊಂಡಿದ್ದ ಕ್ವಾರಂಟೈನ್ ಪ್ರದೇಶದಲ್ಲಿ 14 ದಿನಗಳ ಕಾಲ ಕ್ವಾರೆಂಟೈನ್​ ಮಾಡಲಾಗುತ್ತದೆ. ಪ್ರತ್ಯೇಕ ವಾಹನದ ಮೂಲಕ ಅವರನ್ನು ಶಿಫ್ಟ್​ ಮಾಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.