ETV Bharat / state

ಗದಗ: ಕ್ಷುಲ್ಲಕ ಕಾರಣಕ್ಕೆ ಮೂವರಿಗೆ ಚಾಕು ಇರಿತ

author img

By

Published : Dec 3, 2022, 10:59 AM IST

ಕ್ಷುಲ್ಲಕ ಕಾರಣಕ್ಕೆ ಮೂವರಿಗೆ‌ ಚಾಕು ಇರಿತವಾಗಿರುವ ಘಟನೆ ಗದಗ ತಡರಾತ್ರಿ ನಡೆದಿದೆ.

three-people-stabbed-in-gadag
ಕ್ಷುಲ್ಲಕ ಕಾರಣಕ್ಕೆ ಮೂವರಿಗೆ ಚಾಕು ಇರಿತ

ಗದಗ: ಕ್ಷುಲ್ಲಕ ಕಾರಣಕ್ಕೆ ಮೂವರಿಗೆ‌ ಚಾಕು ಇರಿದ ಘಟನೆ ನಗರದ ಕಿಲ್ಲಾ ಓಣಿಯಲ್ಲಿ ತಡರಾತ್ರಿ ನಡೆದಿದೆ. ಆರು ಜನರು ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ವಸಂತ ಬಾಕಳೆ, ಗೋಪಾಲ ಖೋಡೆ ಹಾಗೂ ಮಾಧುಸಾ ಬದಿ ಎಂಬುವರು ಚಾಕು ಇರಿತಕ್ಕೊಳಗಾದವರು.

ಕೆಲ ಜನರ ನಡುವೆ ಗಲಾಟೆ ನಡೆಯುತ್ತಿತ್ತು, ನಾವು ಬುದ್ಧಿ ಹೇಳಲು ಹೋದಾಗ ನಮ್ಮ ಮೇಲೆಯೇ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ರಂಗನವಾಡಿಯ ಶಿವಾನಂದ ಅಲಿಯಾಸ್ ಶಿವು, ಸಾಧಿಕ್ ಅಕಬರಸಾಬ್, ಯೂನಸ್ ಮೋದಿನಸಾಬ್, ಅಲ್ವಿನ್ ಗ್ಯಾಬ್ರೀಲ್ ಹಾಗೂ ಇನ್ನಿಬ್ಬರು ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.

ಹೊಟ್ಟೆ, ಮುಂಗೈ, ಗಲ್ಲ, ಎದೆ, ಹಣೆಯ ಭಾಗಗಳಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗದಗ ಶಹರ್​ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ಹಲವು ಕಲಂಗಳಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.