ಗದಗ: ಶೆಟ್ಟಿಕೆರೆಯಲ್ಲಿ ಅಪರೂಪದ ನೀರು ನಾಯಿ ಪ್ರತ್ಯಕ್ಷ

author img

By

Published : Jan 23, 2023, 7:21 PM IST

seal-found-in-lakshmeshwar-lake

ಲಕ್ಷ್ಮೇಶ್ವರದ ಶೆಟ್ಟಿಕೆರೆಯಲ್ಲಿ ಅಳಿವಿನಂಚಿನಲ್ಲಿರುವ ನೀರು ನಾಯಿ ಪತ್ತೆ - ವಿಶಾಲವಾದ ಕೆರೆಯಲ್ಲಿ ಬೀಡುಬಿಟ್ಟ ಪ್ರಾಣಿ- ಇದನ್ನು ನೋಡಲು ಬರುತ್ತಿರುವ ಜನ

ಶೆಟ್ಟಿಕೆರೆಯಲ್ಲಿ ಅಪರೂಪದ ನೀರು ನಾಯಿ ಪ್ರತ್ಯಕ್ಷ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯ ಗ್ರಾಮದಲ್ಲಿರುವ ಶೆಟ್ಟಿ ಎಂಬ ಕೆರೆಯೊಂದರಲ್ಲಿ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಕಾಣಿಸಿಕೊಂಡಿವೆ. ಸುದ್ದಿ ತಿಳಿಯುತ್ತಿದ್ದಂತೆ ಕೆರೆಯಲ್ಲಿರು ನೀರು ನಾಯಿಗಳನ್ನು ನೋಡಲೆಂದು ಸುತ್ತ ಊರಿನ ಜನ ಇಲ್ಲಿಗೆ ಆಗಮಿಸತೊಡಗಿದ್ದಾರೆ.

ಪ್ರಸಕ್ತ ವರ್ಷ ಮಳೆ ಹೆಚ್ಚಾಗಿದ್ದರಿಂದ ಕೆರೆ ಕಟ್ಟೆಗಳು, ಹಳ್ಳ ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿವೆ. ಹಚ್ಚ ಹಸಿರಾದ ವಾತಾವರಣ ಇದೆ, ಹಾಗಾಗಿ ಸುಂದರ ತಾಣ ಹುಡುಕಿಕೊಂಡು ಇಲ್ಲಿಗೆ ನೀರು ನಾಯಿಗಳು ಬಂದಿರಬಹುದು ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ. ಕಾಶ್ಮೀರ, ಅಸ್ಸೋಂ ಹಾಗೂ ದಕ್ಷಿಣ ಭಾರತದಲ್ಲಿ ಅನೇಕ ಕಡೆ ಹಾಗೂ ತುಂಗಾಭದ್ರಾ ನದಿಯಲ್ಲಿ ಈ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸದ್ಯ ಕೆರೆಯ ಅಚ್ಚುಕಟ್ಟು ಪ್ರದೇಶ (ಸುಮಾರು 234 ಎಕರೆ) ವಿಶಾಲವಾಗಿದ್ದರಿಂದ ಇಲ್ಲಿಯೇ ಬೀಡು ಬಿಟ್ಟಿವೆ ಎನ್ನುತ್ತಾರೆ ಜನ.

ಕೆರೆಯಲ್ಲಿ ನೀರು ನಾಯಿ ತಿರುಗಾಟ: ಅದಲ್ಲದೇ ಜಲಚರ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಾಸಿಸಲು ವಾತಾವರಣ ಇದೆ. ಮೀನು, ಏಡಿ ಪ್ರಮುಖ ಆಹಾರವಾಗಿರುವ ಈ ನೀರು ನಾಯಿಗಳು ಸದ್ಯ ಕೆರೆಯಲ್ಲಿ ತಿರುಗಾಟ ನಡೆಸುತ್ತಿವೆ. ನೀರಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ಹಾಗೂ ಹರಿಯುವ ನೀರಿಗೆ ವಿರುದ್ದವಾಗಿ ಚಲಿಸುವ ಪ್ರಾಣಿ ಇದಾಗಿದೆ. ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಆಗಿರುವುದರಿಂದ ಹಳ್ಳ ಕೊಳ್ಳ ತುಂಬಿ ಹರಿದು ನದಿ ಸೇರುವಾಗ ನದಿಯ ಮೂಲಕ ನೀರು ನಾಯಿಗಳು ಹಳ್ಳಕ್ಕೆ ಬಂದು ಸೇರಿಕೊಂಡಿವೆ. ಇಂತಹ ಅಪರೂಪ ಪ್ರಾಣಿಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಈ ಪ್ರದೇಶ ಹೆಚ್ಚಾಗಿ ಬಯಲು ಸೀಮೆಯಿಂದ ಕೂಡಿದೆ. ಇಂತಹ ಅಪರೂಪದ ಪ್ರಾಣಿಗಳು ಇಲ್ಲಿ ಕಾಣಸಿಗುವುದು ತುಂಬಾ ಕಡಿಮೆ. ಸದ್ಯ ಶೆಟ್ಟಿ ಕೆರೆ ಚಿಕ್ಕದಾದ ಪ್ರಾಣಿ-ಪಕ್ಷಿಗಳ ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಅಪರೂಪದ ಪ್ರಾಣಿಗಳು ಕಾಣಿಸಿಕೊಂಡಿರುವದು ಅಚ್ಚರಿ ಮೂಡಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆ!

ಇನ್ನು, ಈ ನೀರು ನಾಯಿ ನೋಡಲು ಸಿಗುವುದು ಅಪರೂಪ. ಏಕೆಂದರೆ ನೀರಿನಲ್ಲಿ ಕೆಲವೊಮ್ಮೆ ತಲೆಯೆತ್ತಿ ಅತ್ತಿತ್ತ ನೋಡಿ ಕೂಡಲೇ ಮುಳುಗಿ ನೀರಿನಲ್ಲಿ ಚಲಿಸುತ್ತದೆ. ಆಗಾಗ ಕೆರೆ, ನದಿ, ಸಮುದ್ರದ ದಡದಲ್ಲಿ ಕಾಣಸಿಗುತ್ತವೆ. ಸದ್ಯ ಈ ನೀರು ನಾಯಿ ಶೆಟ್ಟಿಕೆರೆ ಗ್ರಾಮದ ಕೆರೆಗೆ ಹೊಸ ಅತಿಥಿಯಾಗಿದೆ. ಅಲ್ಲದೇ ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಶೆಟ್ಟಿಕೆರೆಗೆ ಬಂದು ಅಳಿವಿನಂಚಿನಲ್ಲಿರುವ ನೀರು ನಾಯಿಯ ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಅಪರೂಪದ ಸಾರಬಾಳ ಹಾವು ಪತ್ತೆ : ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕೊಯ್ಯೂರು ಎಂಬ ಗ್ರಾಮದಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆಯಾಗಿತ್ತು. ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಪತ್ತೆಯಾಗಿತ್ತು. ಫೋರೆಸ್ಟನ್ಸ್ ಬೆಕ್ಕು ಹಾವು ಎಂದು ಕರೆಯಲ್ಪಡುವ ಈ ಸಾರಿಬಾಳ ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತವೆ. ಇವು ಜನವಸತಿ ಪ್ರದೇಶದಲ್ಲಿ ಕಂಡು ಬರುವುದು ತೀರಾ ವಿರಾಳ. ರಾತ್ರಿ ಸಮಯ ಹೆಚ್ಚಿನ ಸಂಚಾರ ನಡೆಸುವ ಸಾರಿಬಾಳ ಇದರ ಪ್ರಮುಖ ಆಹಾರ ಸಣ್ಣ ಪಕ್ಷಿ, ಮೊಟ್ಟೆ, ಇಲಿ, ಬಾವಲಿ ಇತ್ಯಾದಿಯಾಗಿವೆ. ಇವುಗಳಲ್ಲೂ ಎರಡು ಪ್ರಭೇದಗಳಿದ್ದು, ಬೂದು ಬಣ್ಣ ಹಾಗೂ ಕಪ್ಪು ಚುಕ್ಕೆ, ಇನ್ನೊಂದು ಪ್ರಭೇದ ಕಪ್ಪು ಚುಕ್ಕೆಗಳೊಂದಿಗೆ ತಿಳಿ ಕೆಂಪು, ಕಂದು ಬಣ್ಣವನ್ನು ಹೊಂದಿರುತ್ತದೆ.

ಇದನ್ನೂ ಓದಿ: ತುಮಕೂರಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ.. ಏನಿದರ ವಿಶೇಷತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.