ETV Bharat / state

ಮಳೆ ಅವಾಂತರ: ಮುಪ್ಪಿನ ಕಾಲದಲ್ಲಿ ಆಶ್ರಯವನ್ನೇ ಕಳೆದುಕೊಂಡ ವೃದ್ಧೆ...

author img

By

Published : Sep 27, 2020, 6:43 PM IST

ವೃದ್ಧಾಪ್ಯ ವೇತನದಲ್ಲಿಯೇ ಜೀವನ ಸಾಗಿಸುತ್ತಿದ್ದ ಈರಮ್ಮ, ಕಳೆದ ಎರಡು-ಮೂರು ತಿಂಗಳಿನಿಂದ ಸರಿಯಾಗಿ ಮಾಸಾಶನವೂ ಸಿಗದೆ ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದರು. ಅಷ್ಟರಲ್ಲಿ ಈಗ ಮನೆ ಬಿದ್ದು ಬದುಕು ಮತ್ತಷ್ಟು ಕಷ್ಕಕ್ಕೆ ಸಿಲುಕಿದೆ.

Old women house collapse in Gajendragad town of Gadaga
ಮುಪ್ಪಿನ ಕಾಲದಲ್ಲಿ ಆಶ್ರಯವನ್ನೇ ಕಳೆದುಕೊಂಡ ವೃದ್ಧೆ

ಗದಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಪರಿಣಾಮ ಗಜೇಂದ್ರಗಡ ಪಟ್ಟಣದಲ್ಲಿನ ವೃದ್ಧೆಯೊಬ್ಬರ ಮನೆ ಕುಸಿತಗೊಂಡಿದೆ.

ಮುಪ್ಪಿನ ಕಾಲದಲ್ಲಿ ಆಶ್ರಯವನ್ನೇ ಕಳೆದುಕೊಂಡ ವೃದ್ಧೆ.

75 ವರ್ಷದ ಈರಮ್ಮ ಮಲ್ಲಪ್ಪ ದಿವಟರ ಎಂಬ ವೃದ್ಧೆಯ ಮನೆ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈಕೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಈರಮ್ಮಳ ಬದುಕೀಗ ಸಂಕಷ್ಟಕ್ಕೆ ಸಿಲುಕಿದೆ.‌

ವೃದ್ಧಾಪ್ಯ ವೇತನದಲ್ಲಿಯೇ ಜೀವನ ಸಾಗಿಸುತ್ತಿದ್ದ ಈರಮ್ಮ, ಕಳೆದ ಎರಡು-ಮೂರು ತಿಂಗಳಿನಿಂದ ಸರಿಯಾಗಿ ಮಾಸಾಶನವೂ ಸಿಗದೆ ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದರು. ಅಷ್ಟರಲ್ಲಿ ಈಗ ಮನೆ ಬಿದ್ದು ಬದುಕು ಮತ್ತಷ್ಟು ಕಷ್ಕಕ್ಕೆ ಸಿಲುಕಿದೆ. ಹೀಗಾಗಿ ಆದಷ್ಟು ಬೇಗ ಸರ್ಕಾರ ತನ್ನ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.