ETV Bharat / state

ಗದಗದಲ್ಲಿ ಧಾರಾಕಾರ ಮಳೆ: 100ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

author img

By

Published : Jul 28, 2022, 12:23 PM IST

Updated : Jul 28, 2022, 1:00 PM IST

ಜೋರು ಮಳೆ ಸುರಿದು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜನವಸತಿ ಪ್ರದೇಶಗಳು ಜಲಾವೃತವಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

heavy rain leads to problem in gadaga
ಧಾರಾಕಾರ ಮಳೆ

ಗದಗ: ನಗರದ ಬೆಟಗೇರಿಯಲ್ಲಿ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾಜಕಾಲುವೆ ತುಂಬಿ ಹರಿದು ಪಕ್ಕದ ಪ್ರದೇಶಗಳಿಗೂ ನೀರು ನುಗ್ಗಿ ರಾತ್ರಿಯಿಡೀ ಜನರು ಪರಿತಪಿಸಿದ್ದಾರೆ. 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಾಮಗ್ರಿಗಳು ನೀರು ಪಾಲಾಗಿವೆ.

ಮಳೆ ಅವಾಂತರ

ಪೆಟ್ರೋಲ್​ ಬಂಕ್​, ಸಾವಜಿ ಹೋಟೆಲ್ ಸೇರಿದಂತೆ ಸುತ್ತಮುತ್ತಲಿನ ಅಂಗಡಿ, ಕಟ್ಟಡಗಳಿಗೆ ನೀರು ನುಗ್ಗಿದೆ. ಪರ್ವತಗೌಡ ಪೆಟ್ರೋಲ್ ಬಂಕ್​ನೊಳಗೆ ನೀರು ಹೊಕ್ಕು ಲಕ್ಷಾಂತರ ರೂ. ಮೌಲ್ಯದ ಪೆಟ್ರೋಲ್, ಡೀಸೆಲ್ ಹಾಳಾಗಿದೆ. ಪೆಟ್ರೋಲ್,​ ಡೀಸೆಲ್ ಟ್ಯಾಂಕ್‌ನೊಳಗೆ ಮಳೆ ನೀರು ಸೇರಿಕೊಂಡಿದೆ. ಸಿಬ್ಬಂದಿ ಟ್ಯಾಂಕ್​ ನೀರು ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಮಳೆ ನೀರಿನ ರಭಸಕ್ಕೆ ಕುಸಿದು ಬಿದ್ದ ಗೋಡೆ: ಬಾಲಕ ದಾರುಣ ಸಾವು

ರಾಜಕಾಲುವೆಯ ಅವೈಜ್ಞಾನಿಕ ನಿರ್ಮಾಣ, ಹೂಳೆತ್ತದಿರುವುದು ನೀರು ಸರಾಗವಾಗಿ ಹರಿದುಹೋಗದೇ ಬಡಾವಣೆಗಳಿಗೆ ಹೊಕ್ಕಿದೆ. ಆದ್ರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಜನರು ಗಂಜಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದ್ದಾರೆ.

Last Updated : Jul 28, 2022, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.