ETV Bharat / state

ಗದಗ ಜಿಲ್ಲೆಗೆ ಜಲಾಘಾತ... ಹಲವು ಗ್ರಾಮಗಳಿಗೆ ಮುಳುಗಡೆ ಭೀತಿ

author img

By

Published : Oct 21, 2019, 3:40 PM IST

ಧಾರವಾಡ‌ ಹಾಗೂ ಬೆಳಗಾವಿ ಭಾಗದಲ್ಲಿ ಮಳೆ ಸುರಿಯುತ್ತಿರುವ ಹಿನ್ನಲೆ ಗದಗ ಜಿಲ್ಲೆಯ ನವೀಲುತೀರ್ಥ‌ ಡ್ಯಾಂನಿಂದ ಅಪಾರ ಪ್ರಮಾಣದ ನೀರನ್ನ ಹರಿಬಿಡಲಾಗಿದೆ. ಒಂದು ಕಡೆ ಮಲಪ್ರಭಾ ನದಿ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನರಗುಂದ ತಾಲೂಕಿನ ಅನೇಕ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.

ಮಳೆಯ ಆರ್ಭಟ..ಮುಳುಗಡೆ ಭೀತಿಯಲ್ಲಿ ಹಲವು ಗ್ರಾಮಗಳು

ಗದಗ: ಧಾರವಾಡ‌ ಹಾಗೂ ಬೆಳಗಾವಿ ಭಾಗದಲ್ಲಿನ ವರುಣನ ಆರ್ಭಟ ಗದಗ ಜಿಲ್ಲೆಗೆ ಸಂಕಷ್ಟ ತಂದೊಡ್ಡಿದೆ. ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನಲೆ ನವೀಲುತೀರ್ಥ‌ ಡ್ಯಾಂನಿಂದ ಭಾರಿ ಪ್ರಮಾಣದ ನೀರನ್ನ ಹರಿಬಿಡಲಾಗಿದೆ. ಒಂದೆಡೆ ಮಲಪ್ರಭಾ ನದಿ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನರಗುಂದ ತಾಲೂಕಿನ ಅನೇಕ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.

ಮಳೆಯ ಆರ್ಭಟ..ಮುಳುಗಡೆ ಭೀತಿಯಲ್ಲಿ ಹಲವು ಗ್ರಾಮಗಳು

‌ಇತ್ತ ಬೆಣ್ಣೆಹಳ್ಳದ ಅಬ್ಬರಕ್ಕೆ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿರುವ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ಹೊಲದಲ್ಲಿನ ಅಪಾರ ಪ್ರಮಾಣದ ಬೆಳೆಯೂ ಸಹ ಜಲಾವೃತವಾಗಿದ್ದು, ಗ್ರಾಮದ ಒಳಗಡೆಯೇ ಹಳ್ಳ ನಿರ್ಮಾಣವಾಗಿದೆ. ಮಳೆ ನೀರಲ್ಲಿ ಸಿಲುಕಿದ ಗ್ರಾಮಸ್ಥರು ಸಾಮಗ್ರಿಗಳನ್ನ ಹೊರ ತರಲು ಹರಸಾಹಸ ಪಡ್ತಿದಾರೆ.

ಪ್ರವಾಹದ ನರ್ತನಕ್ಕೆ ರಾಷ್ಟ್ರೀಯ ಹೆದ್ದಾರಿ 218 ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Intro:ಆ್ಯಂಕರ್- ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನಿರಂತರ ಸುರಿಯುತ್ತಿರೋ ಮಳೆಗೆ ನವೀಲುತೀರ್ಥ‌ ಡ್ಯಾಂನಿಂದ ಅಪಾರ ಪ್ರಮಾಣದ ನೀರನ್ನ ಹರಿಬಿಡಲಾಗಿದೆ. ಒಂದು ಕಡೆ ಮಲಪ್ರಭಾ ನದಿ ಹರಿವಿನ ಪ್ರಮಾಣ ಹೆಚ್ಚಾಗಿದ್ದು ನರಗುಂದ ತಾಲೂಕಿನ ಅನೇಕ ಗ್ರಾಮಗಳು ಮುಳಗಡೆ ಭೀತಿ ಎದುರಿಸ್ತಾ‌ ಇವೆ.‌ಇತ್ತ ಬೆಣ್ಣೆಹಳ್ಳದ ಅಬ್ಬರಕ್ಕೆ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿರುವ ಹಲವಾರು ಮನೆಗಳಿಗೆ ನೀರು ನುಗ್ಗಿದೆ.ಅಲ್ಲದೇ ಹೊಲದಲ್ಲಿನ ಅಪಾರ ಪ್ರಮಾಣದ ಬೆಳೆಯೂ ಸಹ ಜಲಾವೃತವಾಗಿದ್ದು ಗ್ರಾಮದ ಒಳಗಡೆಯೇ ಹಳ್ಳ‌ ನಿರ್ಮಿತವಾಗಿದೆ.ನಿನ್ನೆ ರಾತ್ರಿಯಿಂದಲೇ ಊರಿಗೆ ನುಗ್ಗುತ್ತಿರೋ ನೀರಿನಿಂದ‌ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರಲ್ಲಿ ಸಿಲುಕಿದ ಸಾಮಾಗ್ರಿಗಳನ್ನ ಹೊರ ತರಲು ಗ್ರಾಮಸ್ಥರು ಹರಸಾಹಸ ಪಡ್ತಿದಾರೆ.Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.